- Friday
- June 19th, 2026
“ಶಾಲಾ ಮಕ್ಕಳು ಕೇವಲ ಪಠ್ಯ ಚಟುವಟಿಕೆಗಳಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮುಖ್ಯವಲ್ಲ, ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ಭಜನೆಯಿಂದ ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯ” ಎಂದು ಪತ್ರಕರ್ತ ಈಶ್ವರ ವಾರಣಾಶಿ ಹೇಳಿದರು.ಇವರು ಶ್ರೀಕೃಷ್ಣ ಭಜನಾ ಮಂಡಳಿ ಶೇಣಿ ಇದರ ವಾರ್ಷಿಕೋತ್ಸವ ಮತ್ತು ಭಜನಾ ತರಬೇತುದಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನ.2ರಂದು ಸನ್ಮಾನ ನೆರವೇರಿಸಿ ಮಾತನಾಡಿದರು. ಎಂ.ಎಸ್.ಕೆ...
ಕುಕ್ಕೆ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಮ್ ವಿದ್ಯಾರ್ಥಿನಿ ದುರ್ಗಾಲಕ್ಷ್ಮೀ ಜಿ.ಸಿ ಸೆಪ್ಟೆಂಬರ್ 2025ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ನಡೆಸಿದ ಸಿಎ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ಗುತ್ತಿಗಾರಿನ ಎಸ್.ಎಂ.ಎಸ್.ಜಿ. ಕಾಂಪ್ಲೆಕ್ಸ್ ನಲ್ಲಿ ಕಟ್ಲೇರಿ ಅಂಗಡಿ ನಡೆಸುತ್ತಿರುವಜಿ.ಚಂದ್ರಶೇಖರ ಹಾಗೂ ಶ್ರೀಮತಿ ಜಿ.ಸುಶೀಲ ದಂಪತಿಗಳ ಪುತ್ರಿ.
ಅಮರ ಸುಳ್ಯದ ಶಿಲ್ಪಿ ಶಿಕ್ಷಣ ಕ್ರಾಂತಿಯ ಹರಿಕಾರ ದಿ| ಕುರುಂಜಿ ವೆಂಕಟ್ರಮಣ ಗೌಡರ ಪುತ್ರ ಡಾ| ಕೆ.ವಿ ರೇಣುಕಾ ಪ್ರಸಾದ್ ದಂಪತಿಗಳಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನ.10 ಬೆಳ್ಳಿರಥ ಸಮರ್ಪಣೆಯಾಗಲಿದ್ದು, ಈ ಬೆಳ್ಳಿ ರಥವು ರಥಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ.ಲಕ್ಷ್ಮಿನಾರಾಯಣ ಆಚಾರ್ಯರು ಹಾಗೂ ಅವರ ಪುತ್ರರಾದ ರಾಜಗೋಪಾಲ ಆಚಾರ್ಯರಿಂದ ನಿರ್ಮಾಣಗೊಂಡಿದ್ದು, ರಥ...
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ನ.01 ರಂದು ಆಲೆಟ್ಟಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್(ರಿ.) ಸುಳ್ಯ ಇದರ ಕಾರ್ಯದರ್ಶಿಗಳು ಹೇಮನಾಥ...
ಸುಳ್ಯದ ಶ್ರೀ ಗಣಪತಿ ಕಲಾಕೇಂದ್ರವು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂ ಗೆ ಸ್ಥಳಾಂತರಗೊಂಡಿದ್ದು, ಎಂಪೋರಿಯಂ ನ ಮೂರನೇ ಮಹಡಿ ವಿಶ್ವಾಸ್ ಸ್ಟೋರ್ ನ ಮುಂಭಾಗದಲ್ಲಿ ಶುಭಾರಂಭಗೊಂಡಿದೆ.ಇಲ್ಲಿ ತಬಲ, ಹಾರ್ಮೋನಿಯಂ, ಮೃದಂಗ, ಚೆಂಡೆ, ಡೋಲಕ್, ಕೀಬೋರ್ಡ್, ಶಾಸ್ತ್ರೀಯ ಸಂಗೀತ, ಕೊಳಲು, ರಿದಂ ಪ್ಯಾಡ್, ವಯೋಲಿನ್, ಸ್ಯಾಕ್ಸೋಫೋನ್, ಗಿಟಾರ್, ಸುಗಮ ಸಂಗೀತ ಹಾಗೂ ಭಜನಾ ತರಬೇತಿಯನ್ನು...
ಸುಬ್ರಹ್ಮಣ್ಯ : “ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವು ರಾಜ್ಯಾದ್ಯಂತ ಅಪಾರ ಭಕ್ತರನ್ನು ಹೊಂದಿದೆ. ಶ್ರೀಕ್ಷೇತ್ರದ ಪಾವನ ಮಣ್ಣಿನಲ್ಲಿ ಆಟವಾಡುವುದು ಕ್ರೀಡಾಳುಗಳ ಸೌಭಾಗ್ಯ. ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಳುಗಳು ಕ್ಷೇತ್ರಕ್ಕೆ ಆಗಮಿಸುವ ಮೂಲಕ ಇದೀಗ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ” ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಹೇಳಿದರು.ಶಾಲಾ ಶಿಕ್ಷಣ...
ಸುಬ್ರಹ್ಮಣ್ಯ ನ.02 : “ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ಆಡಳಿತವು ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದ್ದು, ಜನ ಪರದಾಡುತ್ತಿದ್ದಾರೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದರು.“ಕಳೆದ ತಿಂಗಳಿನಿಂದ ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿಗಳ ಕುರ್ಚಿಗಾಗಿ ಪೈಪೋಟಿ ಬಹಿರಂಗವಾಗಿ ನಡೆಯುತ್ತಿದೆ. ಕೇವಲ ಡಿ.ಕೆ.ಶಿವಕುಮಾರ್ ಅವರಷ್ಟೇ ಅಲ್ಲ, ನನಗೆ ಗೊತ್ತಿರುವ ಪ್ರಕಾರ...
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿತೇಶ್ ಸಂಗೀತ ಬಳಗ ಐವರ್ನಾಡು, ಸುಳ್ಯ ಇದರ ವತಿಯಿಂದ ಚುಟುಕು ಕವಿಗೋಷ್ಠಿ ಮತ್ತು ಸಂಗೀತ ಸಂಭ್ರಮ-2025 ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನ.02 ರಂದು ನಡೆಯಿತು.ಸ್ವಾಗತವನ್ನು ಅಮಿತಾ ಲಾವಂತಡ್ಕ ಮಾಡಿದರು.ಪುಷ್ಪಾವತಿ ಡಿ.ಪ್ರಾರ್ಥನೆ ನೆರವೇರಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿತೇಶ್ ಸಂಗೀತ ಬಳಗ ಐವರ್ನಾಡು, ಸುಳ್ಯ ಇದರ ಸದಸ್ಯರಾದ ಪ್ರಸಾದ್ ಕೆಮ್ಮಿಂಜೆ...
ಕನ್ನಡ ಸಾಹಿತ್ಯ ಪರಿಷತ್ ನ ಪಂಜ ಹೋಬಳಿ ಘಟಕದ ನೇತೃತ್ವದಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನವು ನವಂಬರ್ 16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದ್ದು, ಸಮ್ಮೇಳನದ ಅಮಂತ್ರಣ ಬಿಡುಗಡೆ ಕಾರ್ಯಕ್ರಮವು ನ.2 ರಂದು ವಳಲಂಬೆ ನಡೆಯಿತು.ಈ ಸಂದರ್ಭದಲ್ಲಿ ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕನ್ನಡ ಸಾಹಿತ್ಯ...
ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಅ.30 ಗುರುವಾರದಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿರಾಜ್ ಅಡ್ಕಾರ್ ವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ನಂತರ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಸುನಂದಾ ಶೆಟ್ಟಿ ಸರ್ವರನ್ನು ಸ್ವಾಗತಿಸಿದರು.ಮುಖ್ಯ ಶಿಕ್ಷಕರಾದ ಚಂದ್ರಶೇಖರ ಪಾರೆಪ್ಪಾಡಿ ಪ್ರಾಸ್ತಾವಿಕ...
Loading posts...
All posts loaded
No more posts
