ಸ.ಹಿ ಪ್ರಾ ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ನೂತನ ಶೌಚಾಲಯ ಉದ್ಘಾಟನೆ

ನರೇಗಾ ಯೋಜನೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ಸ್ಥಾಪಿತವಾದ ನೂತನ ಶೌಚಾಲಯವನ್ನು ದಿನಾಂಕ ನ.16 ಭಾನುವಾರದಂದು ಸುಳ್ಯ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು "ಮಾರ್ಗದಿಂದ ಶಾಲೆಗೆ ಇರುವ ದಾರಿಗೆ ಕಾಂಕ್ರೀಟೀಕರಣ ಹಾಗೂ 114 ವಿದ್ಯಾರ್ಥಿಗಳಿರುವ ಶಾಲೆಗೆ ಮುಂದಿನ ನೇಮಕಾತಿಯಲ್ಲಿ ಖಾಯಂ ಶಿಕ್ಷಕರನ್ನು ನೇಮಕ...

ಕುಕ್ಕೆ ಸುಬ್ರಹ್ಮಣ್ಯ : ಲಕ್ಷ ದೀಪೋತ್ಸವಕ್ಕೆ ಭರದಿಂದ ಸಾಗಿದೆ ಸಿದ್ಧತೆ

ಸುಬ್ರಹ್ಮಣ್ಯ ನ.16 : ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ  ಜಾತ್ರೋತ್ಸವದ ಹಿನ್ನೆಲೆಯಲ್ಲಿ  ನವೆಂಬರ್ 19ರಂದು ಬುಧವಾರ ನಡೆಯುವ ಲಕ್ಷದೀಪೋತ್ಸವದ ಸಿದ್ಧತೆಗಳ ಬಗ್ಗೆ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ರವಿವಾರ ನಡೆಯಿತು.ಸಭೆಯಲ್ಲಿ ಲಕ್ಷದೀಪ ದಿನದಂದು ರಥಬೀದಿ ಹಾಗೂ ಪ್ರಮುಖ ಮಾರ್ಗಗಳಲ್ಲಿ...
Ad Widget

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಪ್ರಕಟಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಪೊಲೀಸ್ ಇಲಾಖೆಯ ಸಹಕಾರ ಹಾಗೂ ಸಹ ಭಾಗಿತ್ವದೊಂದಿಗೆ,ಯಾರೂ ಕೂಡ ತಮ್ಮ ಸಾಕು ಪ್ರಾಣಿಗಳಾದ ದನ, ಕರು, ಎತ್ತು, ಎಮ್ಮೆ, ಕೋಣ, ಬೆಕ್ಕು & ಬೆಕ್ಕು ಮರಿಗಳು ಮತ್ತು ನಾಯಿ & ನಾಯಿ ಮರಿಗಳು ಮುಂತಾದ ಜಾನುವಾರುಗಳನ್ನು  ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಮತ್ತು ರಥ ಬೀದಿಗಳಿಗೆ ಬಿಡದೆ ನಮ್ಮೂರಿನ...

ವಳಲಂಬೆ : ಕನ್ನಡದ ಕಂಪನ್ನು ಪಸರಿಸಿದ “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ” – ಕೃತಿ ಬಿಡುಗಡೆ, ವಿಚಾರಗೋಷ್ಠಿ, ಗೀತ ಗಾಯನ, ವಿದ್ಯಾರ್ಥಿ ಕವಿಗೋಷ್ಠಿ ; ಸಮಾರೋಪ ಸಮಾರಂಭದಲ್ಲಿ ಅಮರ ಸುದ್ದಿ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಸೇರಿದಂತೆ ಹಲವು ಸಾಧಕರಿಗೆ “ಸಿರಿಗನ್ನಡ ಸನ್ಮಾನ”

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಹಾಗೂ ಪಂಜ ಹೋಬಳಿ ಘಟಕ ಇವುಗಳ ಆಶ್ರಯದಲ್ಲಿ ನವೆಂಬರ್ 16 ಆದಿತ್ಯವಾರದಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ”ವು ಯಶಸ್ವಿಯಾಗಿ ನೆರವೇರಿ ಕನ್ನಡದ ಕಂಪನ್ನು ಪಸರಿಸಿತು. ಸಾಹಿತಿಗಳಾದ ಎ.ಕೆ ಹಿಮಕರ ಅವರು ಸಮ್ಮೇಳನಾಧ್ಯಕ್ಷತೆ...

ವಳಲಂಬೆ : ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕದ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ” ಇಂದು ಚಾಲನೆ ನೀಡಲಾಯಿತು.ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮಹಾದ್ವಾರದಿಂದ ನಡೆದ ಮೆರವಣಿಗೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ.ಕೆ ಬೆಳ್ಯಪ್ಪ ಗೌಡ ಚಾಲನೆ ನೀಡಿದರು. ಸುಳ್ಯ ಶಾಸಕಿ...

ನ.30 : ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ಧೇಶ ಸಹಕಾರಿ ಸಂಘದ ಚುನಾವಣೆ

ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ಧೇಶ ಸಹಕಾರಿ ಸಂಘ ಸುಳ್ಯ ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯು ಘೋಷಣೆಯಾಗಿದೆ. ನವಂಬರ್ 30 ಕ್ಕೆ ಸಂಘದ ಆಡಳಿತ ಮಂಡಳಿಯ 15 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸಾಮಾನ್ಯ 09, ಮಹಿಳೆ 02, ಹಿಂದುಳಿದ ವರ್ಗ ಪ್ರವರ್ಗ “ಎ” ಮೀಸಲು ಸ್ಥಾನ 02, ಪರಿಶಿಷ್ಟ ಜಾತಿ...

ಪಂಜ : ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮ

ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ ಆರನೆಯ ಸ್ವಚ್ಛತಾ ಕಾರ್ಯಕ್ರಮವನ್ನು 12-11-2025 ಬುಧವಾರದಂದು ನಡೆಸಲಾಯಿತು.ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಕುಕ್ಕುಜಡ್ಕ  ಇದರ ಆವರಣದಲ್ಲಿ ಕಾಡು ಕಡಿದು...

ಸೋಣಂಗೇರಿ ಸರ್ಕಲ್ ಬಳಿಯ ರಸ್ತೆ ಗುಂಡಿಗೆ ಸ್ಥಳೀಯರಿಂದ ಕಾಂಕ್ರೀಟೀಕರಣ

ಸೋಣಂಗೇರಿ ಸರ್ಕಲ್ ಬಳಿ ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡ ಗುಂಡಿ ಬಿದ್ದಿದ್ದರಿಂದ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದರೂ ಯಾರು ಕೂಡಾ ಈ ಬಗ್ಗೆ  ಗಮನ ಹರಿಸಿಸುತ್ತಿಲ್ಲ.ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುವ ಸ್ಥಿತಿಯಿರುವ ಹಿನ್ನೆಲೆಯಲ್ಲಿ ಸತ್ಯಶಾಂತಿ ತ್ಯಾಗಮೂರ್ತಿ ನೇತೃತ್ವದಲ್ಲಿ ಸ್ಥಳೀಯರು ಸೇರಿಕೊಂಡು  ರಸ್ತೆ ಗುಂಡಿಗೆ ಕಾಂಕ್ರೀಟ್...

ಕುಕ್ಕೆ ಸುಬ್ರಹ್ಮಣ್ಯ : ನಾಳೆ(ನ.16) ಕೊಪ್ಪರಿಗೆ ಏರುವುದರೊಂದಿಗೆ ಚಂಪಾ ಷಷ್ಠಿ ಮಹೋತ್ಸವಕ್ಕೆ ಚಾಲನೆ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವಕ್ಕೆ ನಾಳೆ(ನ.16) ಚಾಲನೆ ದೊರೆಯಲಿದ್ದು, ನಾಳೆ ಬೆಳಿಗ್ಗೆ 8:10ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ರಾಮ-ಲಕ್ಷ್ಮಣ ಕೊಪ್ಪರಿಗೆ ಏರುವುದರೊಂದಿಗೆ ಚಾಲನೆ ದೊರೆಯಲಿದೆ.

ಗುತ್ತಿಗಾರು : ಪಂಚಸಪ್ತತಿ ಸ್ವಚ್ಛತಾ ಕಾರ್ಯ

"ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದ 37ನೇ ದಿನದಲ್ಲಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ವತಿಯಿಂದ   ಗುತ್ತಿಗಾರು - ಸುಬ್ರಹ್ಮಣ್ಯ ರಸ್ತೆ ಬದಿ ಪ್ಲಾಸ್ಟಿಕ್ ಹಾಗು ಕಸ ಹೆಕ್ಕುವ ಮೂಲಕ ಸ್ವಚ್ಚಗೊಳಿಸಲಾಯಿತು.
Loading posts...

All posts loaded

No more posts

error: Content is protected !!