ಗುತ್ತಿಗಾರು ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನ

"ಪಂಚಸಪ್ತತಿ - 2025" ರ 75 ದಿನಗಳ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ಇವರು 49ನೇ ದಿನದ ಸ್ವಚ್ಚತೆಯನ್ನು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಮೆಟ್ಟಿನಡ್ಕದ ವಠಾರದಲ್ಲಿ ಮಾಡಲಾಯಿತು.

ಮಂಡೆಕೋಲು ಅರಿವು ಕೇಂದ್ರದಲ್ಲಿ ಸಂವಿಧಾನ ದಿನಾಚರಣೆ

ಮಂಡೆಕೋಲು ಅರಿವು ಕೇಂದ್ರದಲ್ಲಿ ನ.26 ರಂದು ಸಂವಿಧಾನ ದಿನಾಚರಣೆ ಮತ್ತು  ಸಂವಿಧಾನ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮೇಶ್ ಪಿ,  ಉದ್ಯೋಗ ಖಾತ್ರಿ ಇಂಜಿನಿಯರ್ ಸುಧಾನ ಕೃಷ್ಣ, ಸುಳ್ಯದ ಮೊಂಟೇಸ್ಸರಿ ವಿದ್ಯಾಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ. ಜಿವರು ಡಾ ಅಂಬೇಡ್ಕರ್ ವಿಚಾರ ಮಂಡನೆ ಮಾಡಿದರು. ನವೋದಯ ಸಂಘದ ಪ್ರೇರಕಿ, ಶಾಲಾ ಮಕ್ಕಳು...
Ad Widget

ಕವನ : ಮಿಡಲ್ ಕ್ಲಾಸ್ ಜೀವನ ಇದು ಹಿಂಗೇನಾ…!? ; ✍️ಉಲ್ಲಾಸ್ ಕಜ್ಜೋಡಿ

ಈ ಮಿಡಲ್ ಕ್ಲಾಸ್ ಜೀವನ ಇದು ಹಿಂಗೇನಾ..!? ಇಲ್ಲಿ ಕಷ್ಟ ಮಾತ್ರ ಯಾವತ್ತಿಗೂ ಕಳೆಯೋದಿಲ್ಲ-ಸುಖವು ಮಾತ್ರ ಇಲ್ಲಿ ಎಂದೂ ಸಿಗೋದಿಲ್ಲ, ನೋವು ಅನ್ನೋದ್ಯಾವತ್ತಿಗೂ ನಿಲ್ಲೋದಿಲ್ಲ-ನಲಿವು ಅನ್ನೋದಂತೂ ಇಲ್ಲಿ ಉಳಿಯೋದಿಲ್ಲ, ಇದು ಯಾಕಿಂಗೆ ಅಂತ ಅರ್ಥ ಆಗೋದೇ ಇಲ್ಲ...ಒಳ್ಳೆದನ್ನೋದು ಇಲ್ಲಿ ಎಂದೂ ನಡೆಯೋದಿಲ್ಲ-ಕೆಟ್ಟದನ್ನೋದು ಮಾತ್ರ ಬೆನ್ನು ಬಿಡೋದಿಲ್ಲ, ಕಣ್ಣೀರಂತೂ ನಮಗೆ ಇಲ್ಲಿ ಎಂದೂ ತಪ್ಪಿದ್ದಲ್ಲ...ತಿಂಗಳ ಸಂಬಳಾನೂ ಕೈಯಲ್ಲುಳಿಯೋದಿಲ್ಲ-ಸಾಲ...

ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಗ್ರಾ.ಪಂ ವತಿಯಿಂದ ದುರಸ್ಥಿ

ಬೆಳ್ಳಾರೆ ಸರಕಾರಿ ಆಸ್ಪತ್ರೆ ಹೋಗುವ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದ್ದು ಇಂದು ಪಂಚಾಯತ್ ವತಿಯಿಂದ ದುರಸ್ಥಿ ಕಾರ್ಯ ನಡೆಯಿತು.ಹಲವು ಸಮಯದಿಂದ ಈ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಕೆಸರುಮಯವಾಗಿತ್ತು. ವಾಹನ ಸವಾರರು ಕಷ್ಟ ಪಟ್ಟು ಈ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರು.ಇಂದು ರಸ್ತೆಗೆ ಜೆಸಿಬಿ ಮುಖಾಂತರ ಚರಲ್ ಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ಥಿಪಡಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ...

ಅಮರ ಸಂಘಟನಾ ಸಮಿತಿ ವತಿಯಿಂದ ಹಾಸನಡ್ಕ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸುಳ್ಯ : ನವೆಂಬರ್ 26 ರಂದು ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ವತಿಯಿಂದ ಹಾಸನಡ್ಕ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದೀರ್ ದೇವ, ಉಪಾಧ್ಯಕ್ಷರು ಅಮರ ಸಂಘಟನಾ ಸಮಿತಿ ಸುಳ್ಯ ಇವರು ವಹಿಸಿದ್ದರು ತಿಮ್ಮಪ್ಪ ಗೌಡ ಕೊಂಡೆಬಾಯಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಅಮರಮಡ್ನೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ...

ಕಂದ್ರಪ್ಪಾಡಿ :  ಅಮೃತಸರೋವರದ ಬಳಿ ಸಂವಿಧಾನ ದಿನಾಚರಣೆ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಮೃತ ಸರೋವರದ ಬಳಿ ಸಂವಿಧಾನ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಹಾಗೂ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಗ್ರಾಮ ಪಂಚಾಯತ್ ಸದಸ್ಯರಾದ ದುರ್ಗಾದಾಸ್ ಮೆತಡ್ಕ ಪ್ರಶಾಂತ್ ಮೆದು, ಭವಾನಿಶಂಕರ ಮುಂಡೋಡಿ, ಸುಲೋಚನಾ ದೇವ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸ್ಥಳೀಯರಾದ ಬಾಲಕೃಷ್ಣ ಮಾಸ್ತರ್ ಮತ್ತು...

ಚಂಪಾ ಷಷ್ಠಿ ಬ್ರಹ್ಮರಥೋತ್ಸವ ದಿನ 231 ಭಕ್ತರಿಂದ ಎಡೆ ಸ್ನಾನ ಸೇವೆ

ಸುಬ್ರಹ್ಮಣ್ಯ ನ.26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ  ಬ್ರಹ್ಮರಥೋತ್ಸವದ ದಿನದಂದು 231 ಭಕ್ತಾದಿಗಳು ಅಂಗಣದಲ್ಲಿ ಎಡೆ ಸ್ನಾನ ಸೇವೆಯನ್ನು ಸಲ್ಲಿಸಿದರು.ವಾರ್ಷಿಕ ಜಾತ್ರೆಯ ಮೂರು ದಿನಗಳಲ್ಲಿ ನಡೆಯುವ ಸ್ಥಾನದಲ್ಲಿ ಸುಮಾರು 600ಕ್ಕೂ ಮಿಕ್ಕಿ ಹರಕೆ ಹೊತ್ತು  ಭಕ್ತಾದಿಗಳು ಎಡೆಸ್ನಾನ ಸೇವೆ ಸಲ್ಲಿಸಿದರು. ಮಧ್ಯಾಹ್ನ ಶ್ರೀ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ದೇವಳದ ಅಂಗಣದ ಸುತ್ತಲು ಹಾಕಿದ...

ಸಂವಿಧಾನ ದಿನ – ನವೆಂಬರ್ 26 : ಡಾ| ಮುರಲೀ ಮೋಹನ್ ಚೂಂತಾರು

ಪ್ರತಿ ವರ್ಷ ನವೆಂಬರ್ 26 ರಂದು ದೇಶಾದ್ಯಂತ ಸಂವಿಧಾನ ದಿವಸ ಅಥವಾ ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತದೆ. 1949ನೇ ನವೆಂಬರ್ 26 ರಂದು ಭಾರತ ಸರಕಾರದ ಸಂವಿಧಾನ ಸಮಿತಿ ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ಅನುಮೋದಿಸಿತ್ತು. ಇದರ ಸವಿನೆನಪಿಗಾಗಿ ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ. ಆದರೆ ನಮ್ಮ ಸಂವಿಧಾನ ಜನವರಿ 26,...

ನ.27 ರಂದು ಬೆಳ್ಳಾರೆಯಲ್ಲಿ ದಕ್ಷ ಜ್ಯೂಸ್ ಸೆಂಟರ್ ಮತ್ತು ಜನರಲ್ ಸ್ಟೋರ್ ಶುಭಾರಂಭ

ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಸುನಿಲ್ ಕುಮಾರ್ ಆಲಂಕಾರು ಮಾಲಕತ್ವದ ದಕ್ಷ ಜ್ಯೂಸ್ ಸೆಂಟರ್ ಮತ್ತು ಜನರಲ್ ಸ್ಟೋರ್ ನ.27ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ರೀತಿಯ ಲೈವ್ ಜ್ಯೂಸ್ ಐಟಂಗಳು ಮತ್ತು ದಿನಸಿ ವಸ್ತುಗಳು ದೊರೆಯಲಿವೆ ಎಂದು ಮಾಲಕರು ತಿಳಿಸಿದ್ದಾರೆ.ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

ಕುಕ್ಕೆ ಸುಬ್ರಹ್ಮಣ್ಯ : ಸ್ವಯಂ ಸೇವಕರಾಗಿ ಭಾಗವಹಿಸಿದ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸುಬ್ರಹ್ಮಣ್ಯ ಒಕ್ಕೂಟದ ಸದಸ್ಯರು

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪಂಚಮಿ ದಿನವಾದ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ಒಕ್ಕೂಟದ ಸದಸ್ಯರು ಸ್ವಯಂಸೇವಕರಾಗಿ ಭಾಗವಹಿಸಿದರು.
Loading posts...

All posts loaded

No more posts

error: Content is protected !!