ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ನವೆಂಬರ್ 23 ರಂದು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್(ರಿ.)ಸುಳ್ಯ, ಇದರ ಅಧ್ಯಕ್ಷರಾದ ಡಾ.ಕೆ ವಿ ಚಿದಾನಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿ, "ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ, ವೈದ್ಯ ಹಾಗೂ ರೋಗಿಯ ನಡುವಿನ ಸಂಬಂಧ ಹಾಗೂ...

ಬೆಳ್ಳಾರೆ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಕೆಪಿಎಸ್ ನಲ್ಲಿ “ಕಥೆ ಕಟ್ಟೆ – ಕಥೆ ಕಟ್ಟೋಣ ಬನ್ನಿ”  ಕಾರ್ಯಕ್ರಮ

ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗ ಬೆಳ್ಳಾರೆ ಇವರ ಸಹಕಾರದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025 ಅಂಗವಾಗಿ...
Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಜಾತ್ರಾ ಮಹೋತ್ಸವ – ನಾಳೆ(ನ.26) ಪ್ರಾತಃಕಾಲ 7:29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ವೈಭವದ ಚಂಪಾಷಷ್ಠಿ ಬ್ರಹ್ಮರಥೋತ್ಸವ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.16 ರಿಂದ ಶ್ರೀ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು, ನಾಳೆ(ನ.26) ಪ್ರಾತಃಕಾಲ 7:29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಬ್ರಹ್ಮರಥೋತ್ಸವ ಜರುಗಲಿದೆ.

ಸುಳ್ಯ : ಎಸ್‌ಡಿಪಿಐ ಬೆಂಬಲಿತ ಚುನಾಯಿತ ಪಂಚಾಯತ್ ಸದಸ್ಯರ ವಾರ್ಡ್ ಗಳಿಗೆ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರ ನೇತೃತ್ವದ ನಿಯೋಗ ಭೇಟಿ

ಸುಳ್ಯ : ಎಸ್‌ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರನ್ನು ಹೊಂದಿರುವ ವಾರ್ಡ್ ಗಳಲ್ಲಿ ನಡೆಸಿದ ಅಭಿವೃದ್ಧಿ ಯೋಜನೆ, ಕುಂದುಕೊರತೆ, ಹಾಗೂ ಕಾರ್ಯಕರ್ತರು ಮತ್ತು ಚುನಾಯಿತ ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸುವ ಪಕ್ಷದ ತೀರ್ಮಾನದಂತೆ ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಸವಣೂರು, ಮಾಂತೂರು, ಶಾಂತಿ ನಗರ,  ಆತೂರಿನ ಕೊಯಿಲ ವಾರ್ಡ್, ಮಠ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವೀಲ್ ಚೇರ್ ಕೊಡುಗೆ

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೃದ್ಧರು ಹಾಗೂ ನಡೆದಾಡಲು ಅಶಕ್ತರಾಗಿರುವವರಿಗೆ ಸಹಕಾರಿಯಾಗಲು ಶಿವಮೊಗ್ಗದ ಕುಕ್ಕೆ ಕ್ಷೇತ್ರದ ಭಕ್ತರು ನೀಡಿದ ವೀಲ್ ಚೇರ್ ಅನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.ಶಿವಮೊಗ್ಗದ ತರಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಕಿರಣ್ ಕುಮಾರ್ ಹಾಗೂ ಶಿವಮೊಗ್ಗದ ಗಜಾನನ ಮೆಡಿಕಲ್ ಮಾಲಕ ವಿನಾಯಕ...

ತಿಂಗಳಾಡಿ-ಅಲ್ ಫಝಲ್ ತಟ್ಟುಕಡ ಶುಭಾರಂಭ

ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ಶಾಫಿ ಪಳ್ಳಿಮಜಲು ಬೆಳ್ಳಾರೆ ಮಾಲಕತ್ವದ ಅಲ್ ಫಝಲ್ ತಟ್ಟುಕಡ ನ 21ರಂದು ಶುಭಾರಂಭಗೊಂಡಿತು.ತಿಂಗಳಾಡಿ ಮಸೀದಿಯ ಖತೀಬರು ದು:ಆ ನೆರವೇರಿಸಿ ಶುಭಾರಂಭ ಮಾಡಿದರು.ಸಲೀಂ ಸಅದಿ ಕಳೆಂಜಿಬೈಲು,ಮುನವ್ವರ್ ಅಹ್ಮದ್ ಕಳೆಂಜಿಬೈಲು,ಮಾಲಕ ಶಾಫಿ ಪಳ್ಳಿಮಜಲು ಬೆಳ್ಳಾರೆ ಉಪಸ್ಥಿತರಿದ್ದರು.ಇಲ್ಲಿ ಚಹಾ,ಕಾಫಿ,ಕರಿದ ತಿಂಡಿಗಳು,ಮೃದು ಪಾನೀಯಗಳು,ಮಧ್ಯಾಹ್ನದ ಗಂಜಿ,ಊಟ ಎಲ್ಲಾ ತರದ ಲೈವ್ ಜ್ಯೂಸ್ ಗಳು ಲಭ್ಯವಿವೆ ಎಂದು ಮಾಲಕರು ತಿಳಿಸಿದ್ದಾರೆ.ವರದಿ-ಎಂ.ಎ.ಮುಸ್ತಫಾ...

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತ್ರಿವಳಿ ಪ್ರಶಸ್ತಿಯನ್ನು ಪಡೆದುಕೊಂಡ ದರ್ಶಿಕ್.ಸಿ.ಎಸ್

ಇಂಪ್ಯಾಕ್ಟ್ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಚಳ್ಳಂಗಾರು ಸುರೇಶ್ ಹಾಗೂ ಗೀತಾ ದಂಪತಿಗಳ ಪುತ್ರರಾದ ದರ್ಶಿಕ್.ಸಿ.ಎಸ್ ತ್ರಿವಳಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಕರಾಟೆಯ ವೈಯಕ್ತಿಕ ಕಟಾ ಕುಮಿಟಿ, ಟೀಮ್ ಕಟಾ...

ಮರಕತ : ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ವಾರ್ಷಿಕ ಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಮರಕತ ನಡುಗಲ್ಲು ಇದರ ವಾರ್ಷಿಕ ಸಭೆ ಇತ್ತೀಚೆಗೆ ಜರುಗಿತು.‌ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಸವಿತಾ ಚಿದಾನಂದ ಹುಲಿಮನೆ, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರುತಿ ರಘುನಾಥ ಮರಕತ ಆಯ್ಕೆಯಾದರು. ಸಭೆಯಲ್ಲಿಶ್ರೀ ದುರ್ಗಾ ಭಜನಾ ಮಂಡಳಿಯ ಸ್ಥಾಪಕರಾದ ರಾಮಚಂದ್ರ ಭಟ್ ನಡುಗಲ್ಲು, ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್...

ಕೊಲ್ಲಮೊಗ್ರು : ತೆಂಗಿನಮರ ಏರಿದ  ಮೂರ್ತೆದಾರ ಮೃತ್ಯು – ಮೃತದೇಹ ಕೆಳಗಿಳಿಸಿದ ಸ್ಥಳೀಯರು

ಕೊಲ್ಲಮೊಗ್ರ ಗ್ರಾಮದ ಪನ್ನೆ ಕೃಷ್ಣ ಎಂಬವರ ತೆಂಗಿನ ಮರಕ್ಕೆ ಹತ್ತಿದ್ದ ಕೇರಳ ಗುರುವಾಯುರು ಮೂಲದ ಮೂರ್ತೆದಾರ ಆರ್ ಸಾಮೀ ಎಂಬವರು ಮೃತಪಟ್ಟ ಘಟನೆ ನಡೆದಿದೆ. ತೆಂಗಿನ ಮರ ಹತ್ತಿ ಸ್ವಲ್ಪ ಹೊತ್ತಿನಲ್ಲಿ ಕೂಗು ಕೇಳಿಸಿದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿರುವುದು ಗೊತ್ತಾಗಿದೆ. ಆ ಬಳಿಕ ಸ್ಥಳೀಯರು ಸೇರಿ ಅವರನ್ನು ಕೆಳಗಿಳಿಸಿ 108 ಅಂಬ್ಯುಲೆನ್ಸ್ ಮುಖಾಂತರ ಸುಳ್ಯ ಸರಕಾರಿ ಆಸ್ಪತ್ರೆಗೆ...

ಸುಬ್ರಹಣ್ಯ : ಸ್ವಯಂಸೇವಕರಾಗಿ ಭಾಗವಹಿಸಿದ ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಏನೇಕಲ್ಲು ಒಕ್ಕೂಟದ ಸದಸ್ಯರು

ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಪ್ರಯುಕ್ತ ನ.24 ರಂದು ಅಂಗಡಿಗುಡ್ಡೆಯಲ್ಲಿ ನಡೆದ ಭೋಜನ ವ್ಯವಸ್ಥೆಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏನೇಕಲ್ಲು ಒಕ್ಕೂಟದ  ಸದಸ್ಯರುಗಳು ಸ್ವಯಂ ಸೇವಕರಾಗಿ ಭಾಗವಹಿಸಿದರು.
Loading posts...

All posts loaded

No more posts

error: Content is protected !!