ಡಿ.16 ರಂದು ಸುಳ್ಯದಲ್ಲಿ ಅಡ್ಡಂಡ ಕಾರ್ಯಪ್ಪ ನಿರ್ದೇಶನದ “ನಿಜಮಹಾತ್ಮ ಬಾಬಾಸಾಹೇಬ” ನಾಟಕ ಪ್ರದರ್ಶನ

ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘ ಹಾಗೂ ಭಾರತೀಯ ಮಜ್ದೂರ್ ಸಂಘದ ನೇತೃತ್ವದಲ್ಲಿ ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತಿ ಪಡಿಸುವ ಮೈಸೂರು ರಂಗಾಯಣ ನಿಕಟಪೂರ್ವಾದ್ಯಕ್ಷ ಅಡ್ಡಂಡ ಕಾರ್ಯಪ್ಪ ನಿರ್ದೇಶನದ "ನಿಜಮಹಾತ್ಮ ಬಾಬಾಸಾಹೇಬ" ನಾಟಕ ಡಿ.16 ರಂದು ಸಂಜೆ ಯುವಜನ ಸಂಯುಕ್ತ ಮಂಡಳಿಯ ರಂಗಮಂದಿರದಲ್ಲಿ ಉಚಿತ ಪ್ರದರ್ಶನಗೊಳ್ಳಲಿದೆ ಎಂದು ರಾಷ್ಟ್ರ ಚಿಂತನ...

ದೇವ ಗೆಳೆಯರ ಬಳಗದ ವತಿಯಿಂದ ಶಾಲಾ ವಠಾರ ಸ್ವಚ್ಛತೆ

ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ "ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವ ಗೆಳೆಯರ ಬಳಗದ ವತಿಯಿಂದ  ದೇವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರ ಸ್ವಚ್ಚತೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಗೌರವಾಧ್ಯಕ್ಷ ಯೋಗೀಶ್ ದೇವ, ಸದಸ್ಯರಾದ ದೇವಿಚರಣ ದೇವ, ಶ್ರೀಶಾಂತ್ ಪಡ್ಪು, ಗೋಪಾಲಕೃಷ್ಣ ದೇವ, ಹಾಗೂ ಸಂದೀಪ್ ತಳೂರು...
Ad Widget

ನಿಧನ : ಜನಾರ್ಧನ ಗೌಡ ನೂಜಾಲು ಕಲ್ಲೋಣಿ

ಬೆಳ್ಳಾರೆ ಗ್ರಾಮದ ನೂಜಾಲು ಕಲ್ಲೋಣಿ ಜನಾರ್ಧನ ಗೌಡ(58) ಡಿ.13ರಂದು ನಿಧನರಾದರು.ಮೃತರು ಪತ್ನಿ ಹೇಮಾವತಿ, ಪುತ್ರಿ ಭಾಗ್ಯಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಕೆಲವು ವರುಷಗಳ ಹಿಂದೆ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ “ಶುಚಿ 2025” ಆರೋಗ್ಯ ಅರಿವು ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇವರ ಸಹಯೋಗದೊಂದಿಗೆ ಆಯೋಜಿಸಲಾದ "ಶುಚಿ 2025" ಆರೋಗ್ಯ ಅರಿವು ಕಾರ್ಯಕ್ರಮ ಡಿ.13ರಂದು ಕಾಲೇಜು ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇದರ ವಾಣಿಜ್ಯ ಶಾಸ್ತ್ರ...

ಯೇನೆಕಲ್ಲು ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಯೇನೆಕಲ್ಲು ಸರಕಾರಿ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವು ಡಿ.13 ರಂದು ಜರಗಿತು. ಶಾಲಾ ಧ್ವಜಾರೋಹಣವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ  ನೆರವೇರಿಸಿದರು.ಕ್ರೀಡಾಕೂಟವನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಸಂಕಡ್ಕ ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ  ಸುಬ್ರಹ್ಮಣ್ಯ ಗ್ರಾಮ ಪಂಚಾಯಿತ್...

ಗ್ರಾಮಸ್ಥರಿಂದ ಯೇನೆಕಲ್ಲು-ಪುಂಡಿಗದ್ದೆ-ನಡುಗಲ್ಲು ರಸ್ತೆ ದುರಸ್ತಿ

ಯೇನೆಕಲ್ಲು-ಪುಂಡಿಗದ್ದೆ-ನಡುಗಲ್ಲು ರಸ್ತೆಯನ್ನು ಸಂಕಡ್ಕ ಉಡುದೋಳಿ ಬೈಲ್ ನ ನಿವಾಸಿಗಳು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು. ಲಕ್ಷ್ಮಣ ಸಂಕಡ್ಕ, ವೆಂಕಟೇಶ್ ಕಾರಂತ್ ಗೊರವನಮನೆ, ಚಂದ್ರಶೇಖರ ಉಡುದೋಳಿ, ನಿತ್ಯಾನಂದ ಸಂಕಡ್ಕ, ದೊಡ್ಡಣ್ಣ ಗೌಡ ಉಡುದೋಳಿ, ದುರ್ಗಾಪ್ರಸಾದ್ ಪರಮನೆ, ರಮೇಶ್ ಹೊಸಮನೆ, ಪುಟ್ಟಣ್ಣ ಅರ್ಗುಡಿ, ಕುಸುಮಾಧರ ಪರಮಲೆ, ಚಿದಾನಂದ ಉಡುದೋಳಿ, ವೆಂಕಟ ಪರಮಲೆ, ಈಶ್ವರ ಪರಮಲೆ, ನಾಗೇಶ್ ಹೊಸಮನೆ, ಜೀವನ್ ಸಂಕಡ್ಕ,...

ಕೊಲ್ಲಮೊಗ್ರು : ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡದೇ ಅರಣ್ಯ ಇಲಾಖೆಯಿಂದ ಸರ್ವೇ ಕಾರ್ಯ ಆರಂಭ ; ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಸಭೆ – “ಮಾಹಿತಿ ನೀಡಿಯೇ ಸರ್ವೇ ಕಾರ್ಯ ಮುಂದುವರಿಸಬೇಕು” : ಗ್ರಾಮಸ್ಥರ ಆಗ್ರಹ

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೇ ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ರೋಶಿತರಾಗಿದ್ದು, ಪ್ರತಿಭಟನೆಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. “ಗ್ರಾಮ ಪಂಚಾಯತ್ ಗೂ ಮಾಹಿತಿ ನೀಡದೇ ಸರ್ವೇ ಕಾರ್ಯ ಮಾಡುತ್ತಿರುವುದರಿಂದ ತಮ್ಮ ಕೃಷಿ ಭೂಮಿಗಳಿಗೆ...

ಬೋರುಗುಡ್ಡೆ ವಾರ್ಡ್ ಕನಿಕರಪಳ್ಳ 2ನೇ ಅಡ್ಡ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

ಸುಳ್ಯ ನಗರ ಪಂಚಾಯತ್ ವಾರ್ಡ್ ಸದಸ್ಯರ ಅನುದಾನದಡಿಯಲ್ಲಿ  ಬೋರುಗುಡ್ಡೆ ವಾರ್ಡ್ ಜಟ್ಟಿಪ್ಪಳ್ಳ ರಸ್ತೆಯ ಬಲ ಬಾಗದ ಕನಿಕರಪಳ್ಳ 2ನೇ ಅಡ್ಡ ರಸ್ತೆಯ ಕಾಂಕ್ರಿಟೀಕರಣ ಪೂರ್ಣಗೊಂಡಿದ್ದು, ಉದ್ಘಾಟನೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ.ಮುಸ್ತಾಫ ಮತ್ತು ನಗರ ಪಂಚಾಯತ್ ನಿಕಟಪೂರ್ವ ಸದಸ್ಯ ಕೆ.ಎಸ್ ಉಮ್ಮರ್ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಉಮ್ಮರ್ “ನಡೆದಾಡಲೂ ಸಾಧ್ಯವಾಗದೆ ದುಸ್ಥಿತಿಯಲ್ಲಿದ್ದ...

ಚೊಕ್ಕಾಡಿಯಲ್ಲಿ ಸ್ವಚ್ಛತಾ ಜಾಗೃತಿ ಉದ್ದೇಶಕ್ಕಾಗಿ ಕಸದ ಡಬ್ಬಿಗಳ ವಿತರಣೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 ಕಾರ್ಯಕ್ರಮದ ಅಂಗವಾಗಿ ಡಿ.10 ರಂದು ಚೊಕ್ಕಾಡಿ ವ್ಯಾಪಾರ ವಲಯದ ವಿವಿಧ ಅಂಗಡಿಗಳಿಗೆ ಸ್ವಚ್ಛತಾ ಜಾಗೃತಿ ಉದ್ದೇಶದ ಕಸದ ಡಬ್ಬಿಗಳನ್ನು ವಿತರಿಸಲಾಯಿತು.ಸ್ವಚ್ಛತೆಯ ಮೇಲಿನ ಜಾಗೃತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಂಗಡಿಗಳಿಗೆ ಕಸದ...

ಅರಂತೋಡು : ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಗೆದ್ದ ಚಿಂತನಾ ಪೂಜಾರಿಮನೆ ಅವರಿಗೆ ಅದ್ದೂರಿ ಸ್ವಾಗತ

ಅರಂತೋಡು : 35ನೇ  ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ  ಕರ್ನಾಟಕ ತ್ರೋಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸೆಮಿಫೈನಲ್ ಪಂದ್ಯದಲ್ಲಿ "ಪ್ಲೇಯರ್ ಆಫ್ ದಿ ಮ್ಯಾಚ್" ಮತ್ತು ಇಡೀ ಪಂದ್ಯಾಟದಲ್ಲಿನ ಅತ್ಯುತ್ತಮ ಆಟಕ್ಕೆ "ಬೆಸ್ಟ್ ಅಟ್ಯಾಕರ್ ಪ್ರಶಸ್ತಿ" ಯೊಂದಿಗೆ ಪ್ರಥಮ ಸ್ಥಾನ ಪಡೆದು ವಿಶಿಷ್ಟ ಸಾಧನೆಗೆ ಭಾಜನರಾದ ಸಂಸ್ಥೆಯ ಹೆಮ್ಮೆಯ ಕ್ರೀಡಾಪಟು...
Loading posts...

All posts loaded

No more posts

error: Content is protected !!