Ad Widget

ಆ.05: ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

ಶ್ರೀ ಹರಿಹರೇಶ್ವರ ದೇವಸ್ಥಾನ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಹರಿಹರ, ಬಾಳುಗೋಡು, ಐನೆಕಿದು ಇವುಗಳ ಸಹಭಾಗಿತ್ವದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆ.05 ರಂದು ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ. ವರದಿ :- ಉಲ್ಲಾಸ್ ಕಜ್ಜೋಡಿ

ಕಾರು ಹೊಳೆಗೆ ಬಿದ್ದ ಪ್ರಕರಣ – ಎರಡೂ ಮೃತದೇಹ ಪತ್ತೆ

ಕಾಣಿಯೂರು ಸಮೀಪದ ಬೈತಡ್ಕ ಸೇತುವೆ ಬಳಿಯ ಹೊಳೆಯಲ್ಲಿ ಎರಡೂ ಮೃತದೇಹ ಜು.12ರಂದು ಪತ್ತೆಯಾಗಿದೆ. ಇಂದು ಬೆಳಿಗ್ಗೆ 10 ಗಂಟೆ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದಲ್ಲಿ ಹೊಳೆಯ ಬದಿ ಎರಡೂ ಮೃತದೇಹ ಪತ್ತೆಯಾಗಿದೆ. ಜು. 10 ರಂದು ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ಇಬ್ಬರು ವಿಟ್ಲ ಮೂಲದ ಯುವಕರು ನೀರು ಪಾಲಾಗಿದ್ದರು. ಕಾರು ಜು.10ರಂದೇ ಮಧ್ಯಾಹ್ನ...
Ad Widget

ಚೆಂಬು : ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷಾ ಮೇಳ

ಬೆಂಗಳೂರಿನ ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಇದರ ಆಶ್ರಯದಲ್ಲಿ ಜೂ.16 ರಂದು ಗ್ರಾಮ ಪಂಚಾಯತ್ ಚೆಂಬು ಹಾಗೂ ಬಾಲೆಂಬಿ ಮತ್ತು ಕುದ್ರೆಪಾಯ ಉಪ ಕೇಂದ್ರದ ವತಿಯಿಂದ ಚೆಂಬು ಗ್ರಾಮದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷಾ ಮೇಳ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಅಭಿವೃದ್ಧಿ ಅಧಿಕಾರಿಕುಮಾರ್ ನೆರವೇರಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಸದ್ಯಸರುಗಳಾದ ತೀರ್ಥರಾಮ ಹಾಗೂ...

ಯೋಗಾಸನದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ

ಯೋಗಾಸನದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಹೆಸರು ಮಾಡಿದ್ದಾರೆ. ಬದ್ದ ಪದ್ಮಾಸನದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಪ್ರಗತಿ ವಿದ್ಯಾ ಸಂಸ್ಥೆ (ರಿ.) ಕಾಣಿಯೂರಿನಲ್ಲಿ6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ತಂಟೆಪ್ಪಾಡಿ ಶ್ರೀ ವಿಶ್ವನಾಥ ಗೌಡ...

ವಿಟ್ಲದ ಚುಕ್ಕಿಯ ಸಾಧನೆಗೆ ಸಾಕ್ಷಿ ಇಂಡಿಯಾ ಬುಕ್ ಆಪ್ ರೆಕಾರ್ಡ್

ಅಬ್ಬಾ ಅದೆಷ್ಟು ಪ್ರತಿಭೆಗಳಿಗೆ ಒಡತಿ ಈ ಒಂಭತ್ತರ ಹರೆಯದ ಪುಟ್ಟ ಪೋರಿ. ಈಕೆಯ ಪ್ರತಿಭೆಗಳಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು ಅದೆಷ್ಟೋ. ಬಾನಲ್ಲಿ ಮಿಂಚೋ ಚುಕ್ಕಿಯ ನಡುವಲ್ಲಿ ಮಿಂಚೋ ಧ್ರುವತಾರೆ ಈ ನಮ್ಮ ಚುಕ್ಕಿ. ತನ್ನ ಅದ್ಭುತ ಪ್ರತಿಭೆಗಳ ಮೂಲಕ ಇಂಡಿಯಾ ಬುಕ್ ಆಪ್ ರೆಕಾರ್ಡ್ 2022 ರಲ್ಲಿ ತನ್ನ ಹೆಸರನ್ನು ಅಚ್ಚು ಹೊತ್ತಿರುವ ಈ...

ರೆಂಜಿಲಾಡಿ : ನಿರಂತರ ಮಳೆಯಿಂದ ಮನೆ ಮಾಡು ಕುಸಿತ ; ಅಪಾರ ಹಾನಿ

ನೂಜಿಬಾಳ್ತಿಲ : ನಿರಂತರವಾಗಿ ಸುರಿದ ಮಳೆಗೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಕುಸಿದು ಅಪಾರ ಹಾನಿ ಸಂಭವಿಸಿದ ಘಟನೆ ನ.23ರ ಮಂಗಳವಾರ ರಾತ್ರಿ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ನಡೆದಿದೆ.ರೆಂಜಿಲಾಡಿ ಗ್ರಾಮದ ನೂಜಿ ಕೆಂಚರಣ್ಯ ಎಂಬುವವರ ಪತ್ನಿ ಕುಂಞಮ್ಮ ಎಂಬುವವರ ಮನೆಗೆ ಹಾನಿಯಾಗಿದೆ. ಮನೆಯ ಮೇಲ್ಚಾವಣಿ ಕುಸಿದಿದ್ದು, ಹಂಚು ಸಹಿತ ಪೀಠೋಪಕರಣಗಳು ನಾಶಗೊಂಡಿವೆ. ಘಟನೆ ವೇಳೆ ಮನೆ...

ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠಕ್ಕೆ ಭೇಟಿ

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾದ ಡಾ| ನಾರಾಯಣ ಮೂರ್ತಿಯವರ ಧರ್ಮಪತ್ನಿ ಶ್ರೀಮತಿ ಸುಧಾ ಮೂರ್ತಿಯವರು ನ.23 ರಂದು ಸಾಯಂಕಾಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ನ.24 ರಂದು ಶ್ರೀ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುದರ್ಶನ್ ಜೋಯಿಸ್, ಗುರು ಭಟ್, ರವೀಂದ್ರ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ...

ಡಿ.4 : ಪೆರಾಜೆಯಲ್ಲಿ ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ- ಉಪನ್ಯಾಸ

ಚಿಗುರು ಯುವಕ ಮಂಡಲ ಪೆರಾಜೆ ಮತ್ತು ಜ್ಯೋತಿ ಪ್ರೌಢಶಾಲೆ ಪೆರಾಜೆ ಕೊಡಗು ಇವರ ಜಂಟಿ ಆಶ್ರಯದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ ಹಾಗೂ ಮಧುಮೇಹ ಮತ್ತು ರಕ್ತದೊತ್ತಡ ಬರದಂತೆ ತಡೆಯುವ ಮಾರ್ಗಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಡಿ.4 ರಂದು ಶನಿವಾರ ದಂದು ಜ್ಯೋತಿ ಪ್ರೌಢಶಾಲೆ ಪೆರಾಜೆ ಇಲ್ಲಿ ನಡೆಯಲಿದೆ. ಈ...

ಕಡಬ : ಬಿಸಿ ಸಾಂಬಾರು ಬಿದ್ದು ಗಾಯಗೊಂಡ ಮಗುವಿನ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ಬಿಸಿ ಸಾಂಬಾರು ಬಿದ್ದು ಗಾಯಗೊಂಡ ಬೇಬಿ ಹೃತಿಕಾ ಳ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ. ಸಹೃದಯಿಗಳು ಈ ಕೆಳಗೆ ಕಾಣಿಸಿದ ಖಾತೆಗೆ ಧನಸಹಾಯ ಮಾಡಿ ನೆರವಾಗಬಹುದು.

ಡಿ.1 ರಿಂದ 15 ರವರೆಗೆ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ – ಡಿ.9 ರಂದು ಬ್ರಹ್ಮರಥೋತ್ಸವ

ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವಕ್ಕೆ ದಿನಗಣನೆ ಆರಂಭವಾಗಿದೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ ಆರಂಭವಾದರೆ, ಡಿ.15 ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರಾ ಉತ್ಸವ ಸಮಾಪನಗೊಳ್ಳಲಿದೆ.ಡಿ.9ರಂದು ಚಂಪಾಷಷ್ಠಿಯ ವೈಭವದ ಬ್ರಹ್ಮ ರಥೋತ್ಸವ ಕ್ಷೇತ್ರದಲ್ಲಿ ಜರುಗಲಿದೆ. ಉದ್ಯಮಿ ದಿ.ಮುತ್ತಪ್ಪ ರೈ ಸೇವಾ ರೂಪದಲ್ಲಿ ನೀಡಿದ ಬ್ರಹ್ಮರಥದಲ್ಲಿ...
Loading posts...

All posts loaded

No more posts

error: Content is protected !!