ಹಳೆಗೇಟು : ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ 42ನೇ  ಗಣೇಶೋತ್ಸವ

ಸಾಂಸ್ಕೃತಿಕ ಸಂಘ ಹಳೆಗೇಟು, ಸುಳ್ಯ ಇದರ ಆಶ್ರಯದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು. ಅಗಸ್ಟ್ 27ರಂದು ಬೆಳಿಗ್ಗೆ ಸ್ಥಳ ಶುದ್ದಿ, ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ...

“ಅಮರ ಸುದ್ದಿ ವಿಶೇಷ ವರದಿ”

ಕೃಷಿ ತೋಟಗಳಿಗೆ ಆನೆ ಹಾಗೂ ಇತರೆ ಕಾಡುಪ್ರಾಣಿಗಳ ನಿರಂತರ ದಾಳಿಯಿಂದ ಕಂಗೆಟ್ಟಿರುವ ಸುಳ್ಯ ತಾಲೂಕಿನ ಕೃಷಿಕರು

ಒಂದೆಡೆ ಅಡಿಕೆಗೆ ಹಳದಿ ಎಲೆಚುಕ್ಕೆ ರೋಗವಾದರೆ ಇನ್ನೊಂದೆಡೆ ಕೃಷಿ ತೋಟಗಳಿಗೆ ಕಾಡುಪ್ರಾಣಿಗಳ ನಿರಂತರ ದಾಳಿ ; “ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ” ಎಂಬಂತಾಗಿದೆ ತಾಲೂಕಿನ ಕೃಷಿಕರ ಪರಿಸ್ಥಿತಿ

✍️ಉಲ್ಲಾಸ್ ಕಜ್ಜೋಡಿ

“ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬ ಗಾದೆ ಮಾತಿದೆ. ಇಂದು ಈ ಗಾದೆಮಾತು ಅದೇಕೋ ಅಡಿಕೆ ಬೆಳೆಯನ್ನು ಮುಖ್ಯ ಬೆಳೆಯನ್ನಾಗಿ ಹಾಗೂ ತೆಂಗು, ಬಾಳೆ, ಕಾಳುಮೆಣಸು, ಕೊಕ್ಕೊ ಹಾಗೂ ರಬ್ಬರ್ ಸೇರಿದಂತೆ ಇನ್ನಿತರ ಕೆಲವು ಬೆಳೆಗಳನ್ನು ಉಪಬೆಳೆಗಳಾಗಿ ಬೆಳೆಯುತ್ತಿರುವ, ಇದರಿಂದಲೇ ತಮ್ಮ ಬದುಕನ್ನು ನಡೆಸುತ್ತಿರುವ ಸುಳ್ಯ ತಾಲೂಕಿನ ಕೃಷಿಕರ ಬದುಕಿನಲ್ಲಿ ನಿಜವಾಗುತ್ತಿದೆ ಎಂದೆನಿಸುತ್ತಿದೆ. ಏಕೆಂದರೆ...
Ad Widget

ಕರುಣಾಕರ ಪಾಂಗಲಾಯಿರವರು ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆ

ಆಲೆಟ್ಟಿ ಗ್ರಾಮದ ಕರುಣಾಕರ ಪಾಂಗಲಾಯಿರವರು ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ 48ನೇ ಸಾಲಿನ ಮಹಾಸಭೆಯಲ್ಲಿ 2025-26ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಆಲೆಟ್ಟಿ ಗ್ರಾಮದ ತಲೆಪಳ್ಳ ನಾರಾಯಣ ನಾಯ್ಕರವರ ಪುತ್ರರಾಗಿರುವ ಇವರು ಕೇಂದ್ರ ಸರ್ಕಾರದ ನೌಕರಿಯಲ್ಲಿ ಸುಧೀರ್ಘ 40 ವರ್ಷಗಳ ಕಾಲ ಸೇವೆಗೈದು ನಿವೃತ್ತರಾದ ನಂತರ ಸಾಮಾಜಿಕ ಹಾಗೂ ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಕಡಬ ಪಟ್ಟಣ ಪಂಚಾಯತ್ ಚುನಾವಣೆ – 8 ಸ್ಥಾನ ಪಡೆದು ಅಧಿಕಾರಕ್ಕೇರಿದ ಕಾಂಗ್ರೆಸ್ –  ಅಧಿಕಾರ ಕಳೆದುಕೊಂಡ ಬಿಜೆಪಿ

ತೀವ್ರ ಕುತೂಹಲ ಕೆರಳಿಸಿದ್ದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಒಟ್ಟು 13 ವಾರ್ಡ್ ಗಳ ಪೈಕಿ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢ ಬಿಜೆಪಿಯು 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.ಮತ ಎಣಿಕೆ ಕೇಂದ್ರದಲ್ಲಿ ನಡೆದ ಎಣಿಕೆ ಪ್ರಕ್ರಿಯೆಯು ಬಿಗಿ ಪೊಲೀಸ್ ಬಂದೋಬಸ್ ನಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು....

ಅಮರ ಸುದ್ದಿ ಸ್ಪೆಷಲ್ ರಿಪೋರ್ಟ್

ಪ್ರತೀ ವರ್ಷವೂ ಬೇಸಿಗೆ ರಜೆ ಕಳೆದು ಶಾಲೆಗಳು ಪ್ರಾರಂಭವಾಗುವ ಬೆನ್ನಲ್ಲೇ ಶುರುವಾಗುವ ಮಳೆ ; ಮಳೆಗಾಲದಲ್ಲಿ ಶಾಲೆಗೆ ತೆರಳಲು ಕಷ್ಟಪಡುವ ವಿದ್ಯಾರ್ಥಿಗಳು

ವಿದ್ಯಾರ್ಥಿಗಳಿಗೆ ವಾರ್ಷಿಕ ಬೇಸಿಗೆ ರಜೆಯನ್ನು ಬೇಸಿಗೆಯ ಬದಲು ಮಳೆಗಾಲದಲ್ಲಿ ನೀಡಿದರೆ ಉತ್ತಮವಲ್ಲವೇ…!?

✍️ ಉಲ್ಲಾಸ್ ಕಜ್ಜೋಡಿ

ಇತ್ತೀಚೆಗೆ ಕೇರಳ ರಾಜ್ಯದ ಶಿಕ್ಷಣ ಸಚಿವರಾದ ವಿ.ಶಿವನ್ ಕುಟ್ಟಿ ಅವರು ತಮ್ಮ ರಾಜ್ಯದ ಶಾಲೆಗಳ ವಾರ್ಷಿಕ ಬೇಸಿಗೆ ರಜೆಯ ಕುರಿತಾಗಿ “ಕೇರಳ ರಾಜ್ಯದಲ್ಲಿ ತೀವ್ರ ಬಿಸಿಲು ಇರುವ ಸಂದರ್ಭದಲ್ಲಿ ಮಕ್ಕಳಿಗೆ ವಾರ್ಷಿಕ ರಜೆ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದರ ಬದಲಾಗಿ ಭಾರೀ ಮಳೆಯಿಂದಾಗಿ ಅದೆಷ್ಟೋ ದಿನಗಳ ಕಾಲ ತರಗತಿಗಳೇ ರದ್ದಾಗುವ ಜೂನ್-ಜುಲೈ ತಿಂಗಳ ಅವಧಿಯಲ್ಲಿ...

ಭಾರೀ ಮಳೆ ಹಿನ್ನೆಲೆ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನಾಳೆ(ಆ.18) ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಾಥಮಿಕ & ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇದರ ಮುನ್ಸೂಚನೆಯಂತೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಬೀಸುವ ಸಾಧ್ಯತೆ ಇದ್ದು, ಆ.18 ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಿಸಿ...

“ಸೇವಾ ಮಿತ್ರ” ಪ್ರಶಸ್ತಿ ಪಡೆದ ಸುಬ್ರಹ್ಮಣ್ಯ ಶಾಖೆಯ ಪವರ್ ಮ್ಯಾನ್ ಉಮೇಶ್ ಲಕ್ಷ್ಮಣ ಹಂಜಗಿ

ಸುಬ್ರಹ್ಮಣ್ಯ ಶಾಖೆಯಲ್ಲಿ ಪವರ್ ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಲಕ್ಷ್ಮಣ ಹಂಜಗಿ ಅವರು ಪುತ್ತೂರು ವಿಭಾಗದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿದ್ದಕ್ಕಾಗಿ “ಸೇವಾ ಮಿತ್ರ” ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಆ.15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಂಗಳೂರಿನ ಆಡಳಿತ ಕಛೇರಿಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.(ವರದಿ : ಉಲ್ಲಾಸ್ ಕಜ್ಜೋಡಿ)

ನೆತ್ತರಕೆರೆ ತುಳು, ಕನ್ನಡ ಸಿನೆಮಾ ಆ.29ರಂದು ತೆರೆಗೆ

ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ಲಂಚುಲಾಲ್.ಕೆ.ಎಸ್ ನಿರ್ಮಾಣ ಮಾಡಿರುವ, ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ "ನೆತ್ತರಕೆರೆ" ತುಳು, ಕನ್ನಡ ಸಿನಿಮಾ ಆಗಸ್ಟ್ 29 ರಂದು ಬಿಡುಗಡೆಯಾಗಲಿದೆ.  ಬಹು ದೊಡ್ಡ ತಾರಾಂಗಣ ಇರುವ ಈ ಸಿನಿಮಾ ಟೀಸರ್ ನಿಂದಲೆ ಕುತೂಹಲ ಹುಟ್ಟಿಸಿದೆ.ತಾಂತ್ರಿಕವಾಗಿ ಛಾಯಾಗ್ರಹಣ ಉದಯ ಬಲ್ಲಾಲ್,  ವಿನೋದ್ ರಾಜ್ ಕೋಖಿಲ ರವರ ಸಂಗೀತ...

ಪ್ರಧಾನಿಗೆ ಪತ್ರ ಬರೆದ ಕೆ.ಎಸ್.ಎಂ.ಸಿ.ಎ ಅಧ್ಯಕ್ಷ ಬಿಟ್ಟಿ ಬಿ.ನೆಡುನಿಲಂ ; ಕ್ರೈಸ್ತರ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಲು ಮನವಿ

"ಇತ್ತೀಚಿನ ತಿಂಗಳಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಹಿಂಸೆ ಹೆಚ್ಚುತ್ತಿರುವುದು ನಮ್ಮನ್ನು ಗಂಭೀರವಾಗಿ ಕಳವಳಗೊಳಿಸಿದೆ. ಪಾದ್ರಿಗಳು, ಸನ್ಯಾಸಿನಿಯರು, ಇಗರ್ಜಿಗಳು ಮತ್ತು ಕ್ರೈಸ್ತ ಸಂಸ್ಥೆಗಳ ಮೇಲೆ ದಾಳಿಗಳು ನಡೆಯುತ್ತಿರುವ ವರದಿಗಳು ಜಾಗತಿಕ ಸಮುದಾಯದ ಗಮನ ಸೆಳೆದಿವೆ, ಏಕೆಂದರೆ ಇಂತಹ ಕೃತ್ಯಗಳು ಭಾರತದ ಸಂವಿಧಾನದಲ್ಲಿ ಭರವಸೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ...

ದ.ಕ ಜಿಲ್ಲೆಯಾದ್ಯಂತ ಎಂದಿನಂತೆ ಬಸ್ ಸಂಚಾರ

ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಸರಕಾರ ನಿರಾಕರಿಸಿ ಹಿನ್ನೆಲೆ ಸಾರಿಗೆ ನೌಕರರ ಸಂಘದ ಅಧ್ಯಕ್ಷರು ಇಂದು ಮುಷ್ಕರಕ್ಕೆ ಕರೆ ನೀಡಿದ್ದರು. ಆದರೆ ದ.ಕ ಭಾಗದಲ್ಲಿ ಮುಷ್ಕರದಿಂದ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ, ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಬೆಂಗಳೂರು ಕಡೆಗೆ ಸದ್ಯಕ್ಕೆ ಬಸ್ ಗಳು ತೆರಳುತ್ತಿಲ್ಲ ಎಂದು ಸುಳ್ಯ ಡಿಪೋದ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.
Loading posts...

All posts loaded

No more posts

error: Content is protected !!