- Thursday
- April 3rd, 2025

ಮನು ಸಚಿನ್ ರೈ ಬಾಲಕೃಷ್ಣ ಸುನಿಲ್ ಬೆಳ್ಳಾರೆಯಲ್ಲಿ ವಿಶ್ವ ಹಿಂದೂ ಪರಿಷತ್ , ಭಜರಂಗದಳ ಮುಖಾಂತರ ಹಿಂದೂ ಸಂಘಟನೆ ಕಾರ್ಯೋನ್ಮುಖವಾಗಿದೆ. ನೂತನ ಸಂಘಟನೆಯ ಅಧ್ಯಕ್ಷರಾಗಿ ಪ್ರಸಾದ್ ಕೆ.ಬಿ., ಕಾರ್ಯದರ್ಶಿಯಾಗಿ ಮನು ಬಾಯಂಬಾಡಿ, ಸತ್ಸಂಗ ಪ್ರಮುಖರಾಗಿ ಉಮೇಶ್ ಮಣಿಮಜಲು, ಬಜರಂಗದಳ ಸಂಯೋಜಕರಾಗಿ ಸಚಿನ್ ರೈ ಪೂವಾಳಿಕೆ, ಸಹ ಸಂಯೋಜಕರಾಗಿ ಬಾಲಕೃಷ್ಣ ಮಣಿಮಜಲು, ಗೋ ರಕ್ಷಕ್ ಪ್ರಮುಖರಾಗಿ ಸುನಿಲ್...

ಕೊಲ್ಲಮೊಗ್ರ ಗ್ರಾಮದ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಡಳಿತದ ಅವಧಿಯು ಕೊನೆಗೊಂಡಿದ್ದು, ನೂತನ ಆಡಳಿತಾಧಿಕಾರಿಯಾಗಿ ಕೊಲ್ಲಮೊಗ್ರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ ವಹಿಸಿಕೊಂಡಿರುವರು. ಈ ಸಂದರ್ಭದಲ್ಲಿ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಟ್ಟ ಹಾಗೂ ಸದಸ್ಯರು,ಅರ್ಚಕರು, ಭಕ್ತಭಿಮಾನಿಗಳು ಉಪಸ್ಥಿತರಿದ್ದರು.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಇಂದು ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವಗಳ ಆಯೋಜನೆ
ಎಲ್ಲ ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂಗಳು ಕುಟುಂಬಸಮೇತರಾಗಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವದ ಲಾಭ ಪಡೆಯಬೇಕು ಹಾಗೂ ತಮ್ಮ ಸ್ನೇಹಿತರು, ಪರಿಚಿತರು, ಕುಟುಂಬದವರು ಇವರಿಗೂ ಇದರ ಆಮಂತ್ರಣ ನೀಡಬೇಕು ಎಂದು ಸನಾತನ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜುಲೈ 5 ರ ಸಾಯಂಕಾಲ 5 ಗಂಟೆಗೆ ಕನ್ನಡ ಭಾಷೆಯ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ ನಡೆಯಲಿದ್ದು FaceBook ಅಥವಾ...

ಸಂಪಾಜೆ ಅರಮನೆತೋಟ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಈ ಹಿಂದೆ ಕೊರೊನಾ 19 ನಿಷೇಧಾಜ್ಞೆಯಿಂದಾಗಿ ಮೇ 10 ಮತ್ತು ಮೇ 11 ರಂದು ವರ್ಷಾಂಪ್ರತಿ ನಡೆಯಬೇಕಾಗಿದ್ದ ಕಾಲಾವಧಿ ಒತ್ತೆಕೋಲ ಉತ್ಸವ ನಡೆಸಲು ಸಾಧ್ಯವಾಗಲಿಲ್ಲದ್ದರಿಂದ ದೈವಜ್ಞರ ಸಲಹೆಯಂತೆ ತಂಬಿಲ ಕಾರ್ಯಕ್ರಮವನ್ನು ಶಾಸ್ತ್ರ ಬದ್ಧವಾಗಿ ಶ್ರೀ ದೇವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಶ್ರೀ ಕಳಗಿ...

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಅತಿಥಿ ಆಗಮಿಸಿದ್ದು ಕೊರೊನ ಸಂಕಷ್ಟದ ಮಧ್ಯೆ ಖುಷಿ ಆವರಿಸಿದೆ. ದೇಗುಳದ ಲಕ್ಷ್ಮೀ ಆನೆಯು ನಿನ್ನೆ ರಾತ್ರಿ ಹೆಣ್ಣು ಮರಿಗೆ ಜನ್ಮ ನೀಡಿದೆ.ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿರೋದು ದೇವಾಲಯದ ಆಡಳಿತ ಮಂಡಳಿ , ಸಿಬ್ಬಂದಿ ಹಾಗು ಭಕ್ತರ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ . ಈ ಲಕ್ಷ್ಮೀ ಆನೆಯನ್ನು...

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ಆಶ್ರಯದಲ್ಲಿ ಜರುಗಲಿರುವ 29ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆಯು ಜೂ. 28 ರಂದು ಯುವಕ ಮಂಡಲ(ರಿ) ಕಳಂಜ ಇದರ ಸಭಾಭವನದಲ್ಲಿ ಜರುಗಿತು.ಈ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ರಾಜೇಶ್ ಪಟ್ಟೆ, ಕಾರ್ಯದರ್ಶಿ ಗಿರಿಧರ ಕಳಂಜ, ಉಪಾಧ್ಯಕ್ಷ ಹರಿಯಪ್ಪ ಗೌಡ ಮುಂಡುಗಾರು, ಕೋಶಾಧಿಕಾರಿ ಸತೀಶ್ ಬಿ ದಳ,ಗೌರವ...

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ವಿಶ್ವವ್ಯಾಪಿ ಹರಡುತ್ತಿರುವ ಕೊರೋನ ವೈರಸ್ ನಾಶಕ್ಕಾಗಿ ವೇ.ಮೂ.ವೆಂಕಟ್ರಮಣ ಭಟ್ ಬಳ್ಳಕ ಇವರ ನೇತೃತ್ವದಲ್ಲಿ ಶ್ರೀ ಆದಿತ್ಯಾತ್ಮಕ ರುದ್ರಹವನ ನಡೆಯಿತು. ದೇವಾಲಯದ ಪ್ರಧಾನ ಅರ್ಚಕರಧ ರಾಮಚಂದ್ರ ಭಟ್, ನಾಗರಾಜ್ ಹೆಗ್ಡೆ ಮತ್ತು ದೇವಾಲಯದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಉಪಸ್ಥಿತರಿದ್ದರು.

ವಿಶ್ವದಾದ್ಯಂತ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಬಾರದೆ ಇರುವ ಹಿನ್ನೆಲೆಯಲ್ಲಿ ಮುಸಲ್ಮಾನರ ಪವಿತ್ರ ಹಜ್ಜ್ ಕಾರ್ಯವನ್ನು 2020ರ ಈ ವರ್ಷದಲ್ಲಿ ಕೇವಲ ಸೌದಿ ಅರಬ್ ದೇಶದಲ್ಲಿ ನೆಲೆಸಿರುವ ಸೀಮಿತ ಸಂಖ್ಯೆಯ ವಿದೇಶಿಯರು ಮತ್ತು ಮೂಲನಿವಾಸಿಗಳಿಗೆ ಈ ವರ್ಷದ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಹಜ್ ಮತ್ತು ಉಮ್ರಾ ಸಚಿವಾಲಯ ಸೋಮವಾರದಂದು ತೀರ್ಮಾನವನ್ನು ಪ್ರಕಟಿಸಿದೆ ಎಂದು ಸೌದಿ ಗಝಟ್...

ಇಂದು ನಡೆದ ಸೂರ್ಯಗ್ರಹಣದ ದೋಷ ನಿವಾರಣೆಯ ಪ್ರಯುಕ್ತ ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾದಲ್ಲಿ ಗ್ರಹಣಶಾಂತಿ ಹೋಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು, ಆರ್ಚಕರು, ಭಕ್ತಾಬಿಮಾನಿಗಳು ಭಾಗವಹಿಸಿದ್ದರು.

All posts loaded
No more posts