ರಾಮ ಮಂದಿರದ ಬ್ಯಾನರ್ ಹರಿದ ಪ್ರಕರಣ: ವಿವೇಕಾನಂದ ವೃತ್ತದ ಬಳಿಯಲ್ಲಿ ಹರಿದ ಬ್ಯಾನರ್ ತುಂಡು ಪತ್ತೆ – ಪೋಲೀಸರಿಂದ ತೀವ್ರ ವಿಚಾರಣೆ

ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಇಂದು ಮುಂಜಾನೆ ಕೆಲ ದಿನಗಳ ಹಿಂದೆ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣ ಬೆಳಕಿಗೆ ಬಂದಿದ್ದು ಈ ಕುರಿತಂತೆ ಹಿಂದು ಸಂಘಟನೆಯ ನಾಯಕರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಡಿಗೇಡಿಗಳು ಹರಿದ ಬ್ಯಾನರ್ ತುಂಡು ವಿವೇಕಾನಂದ ವೃತ್ತದ ಬಳಿಯಲ್ಲಿ ಸಂಜೆ ವೇಳೆಗೆ ಪತ್ತೆಯಾದ ಘಟನೆ ವರದಿಯಾಗಿದೆ....

ಬ್ಯಾನರ್ ಹರಿದ ಪ್ರಕರಣ – ರಿಕ್ಷಾ ಚಾಲಕರಿಂದ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ರಿಕ್ಷಾ ಚಾಲಕರು ಸುಳ್ಯದಲ್ಲಿ ಹಾಕಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ಇದನ್ನು ಖಂಡಿಸಿರುವ ಅಟೋ ರಿಕ್ಷಾ ಚಾಲಕರ ಸಂಘ ಆರೋಪಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೋಲೀಸರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ. ಹಾಗೂ ಕಲ್ಕುಡ ದೇವಸ್ಥಾನದಲ್ಲಿ ಸೇರಿದ ರಿಕ್ಷಾ ಚಾಲಕರು ಆರೋಪಿಗಳಿಗೆ ಶೀಘ್ರ...
Ad Widget

ಪೆರುವಾಜೆ ದೇವಾಲಯಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಭೇಟಿ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯಕ್ಕೆ ಶನಿವಾರ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ‌ ಪ್ರಶಾಂತ್ ಪಕ್ಕಳ ಭೇಟಿ‌ ನೀಡಿದರು.ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ‌‌ ಸಲ್ಲಿಸಿದ ಅವರು ಶ್ರೀ ಕ್ಷೇತ್ರದಲ್ಲಿ 100 ವರ್ಷಗಳ ಬಳಿಕ‌ ಬ್ರಹ್ಮರಥ‌ ನಿರ್ಮಾಣಗೊಂಡು ಜ.19 ರಂದು ಬ್ರಹ್ಮರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಬ್ರಹ್ಮರಥದ ಬಗ್ಗೆ ಸಮಿತಿಯವರಿಂದ...

ಸಜ್ಜನ ಸಭಾ ಭವನ ಬೀಜದಕಟ್ಟೆ ಗೂನಡ್ಕದಲ್ಲಿ ಸಜ್ಜನೋತ್ಸವ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರೊಂದಿಗೆ ಸಜ್ಜನ ಸಭಾ ಭವನ ಬೀಜದಕಟ್ಟೆ ಗೂನಡ್ಕದಲ್ಲಿ ನಡೆದ ಸಜ್ಜನೋತ್ಸವ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಪಾಲ್ಗೊಂಡು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಬ್ಯಾನರ್ ಹರಿದ ಪ್ರಕರಣ ಆರೋಪಿಗಳ ತಕ್ಷಣ ಬಂಧಿಸಲು ಸುಳ್ಯ ವೃತ್ತ ನಿರೀಕ್ಷಕರಿಗೆ ಸೂಚಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ.

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಬ್ಯಾನರನ್ನು ಸುಳ್ಯ ಪೇಟೆಯಲ್ಲಿ ಕಿಡಿಗೇಡಿಗಳು ಹಾನಿ ಮಾಡಿರುವ ಬಗ್ಗೆ ಮಾನ್ಯ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಳ್ಯ ವೃತ್ತ ನಿರೀಕ್ಷಕ ರೊಂದಿಗೆ ಮಾತನಾಡಿ ಸಮಾಜದಲ್ಲಿ ಅಶಾಂತಿ ಕದಡಲು ಯತ್ನಿಸುತ್ತಿರುವ ಶಕ್ತಿಗಳನ್ನು ನಿಗ್ರಹಿಸಿ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಹಾಗು...

ಸುಳ್ಯ ಚೆನ್ನಕೇಶವ ಜಾತ್ರೆ ರಥಬೀದಿಯಲ್ಲಿ ಸಂತೆ ಸ್ಥಳಗಳ ಬಹಿರಂಗ ಏಲಂ ಪ್ರಕ್ರಿಯೆ

ಸುಳ್ಯದ ಚೆನ್ನಕೇಶವ ದೇವಾಲಯದ ಜಾತ್ರೋತ್ಸವ ಹಿನ್ನಲೆಯಲ್ಲಿ ರಥಬೀದಿಯಲ್ಲಿ ಸಂತೆಗಳನ್ನು ಇರಿಸುವ ಸ್ಥಳಗಳ ಬಹಿರಂಗ ಏಲಂ ಪ್ರಕ್ರಿಯೆಯು ಇಂದು ನಡೆಯಿತು. https://youtu.be/11GqHdoyNKE?si=qybYowJo7vPkOKrK ಏಲಂನಲ್ಲಿ ಸುಮಾರು ಪ್ರತಿ ಅಂಗಡಿಗಳು 25 ರಿಂದ 35 ಸಾವಿರ ರೂಪಾಯಿಗಳಿಗೆ ಏಲಂ ನಡೆದವು.

ಸುಳ್ಯ : ಬ್ಯಾನರ್ ಹರಿದ ಪ್ರಕರಣ – ಹಿಂ.ಜಾ.ವೇದಿಕೆ ಖಂಡನೆ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರುವ ಬಗ್ಗೆ ಸುಳ್ಯದಲ್ಲಿ ಹಾಕಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆಯ ಬಗ್ಗೆ ಹಿಂದು ಜಾಗರಣ ವೇದಿಕೆ ಖಂಡನೆ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಹಿ.ಜಾ.ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ಸತೀಶ್ ಮೂಕಮಲೆ ಹಾಗೂ ತಾಲೂಕು ಸಂಚಾಲಕ ಸಚಿನ್ ವಳಲಂಬೆ ಆಗ್ರಹಿಸಿದ್ದಾರೆ.

ಸುಳ್ಯ : ಕಾರಿನಲ್ಲಿ ಬಂದು ಬಸ್ ನಿಲ್ದಾಣದಲ್ಲಿ ಕಸ ಎಸೆಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ – ಕ್ರಮಕ್ಕೆ ಒತ್ತಾಯ

https://youtu.be/FH-YNdpOKDI?feature=shared ಕಾರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಕ್ಕೆ ಬಂದು ಕಸ ಎಸೆಯುತ್ತಿರುವುದು ಜ.1 ರಂದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಇವರು ಹಲವು ಬಾರಿ ಕಸ ತಂದು ಎಸೆದು ಹೋಗುತ್ತಾರೆ. ಇವರಂತೆ ಇನ್ನೂ ಎಲ್ಲರೂ ಇಲ್ಲಿ ತಂದು ಕಸ ಎಸೆಯಲು ಪ್ರಾರಂಭಿಸಿದರೇ ಹೇಗಾಗಬಹುದು. ಇಂತಹ ಕೀಳು ಮಾನಸಿಕತೆ ಹೊಂದಿದವರ ವಿರುದ್ಧ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ವರ್ತಕರು, ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಸುಳ್ಯ : ಬ್ಯಾನರ್ ಹರಿದ ಪ್ರಕರಣ – ಹಿಂ.ಜಾ.ವೇದಿಕೆ ಖಂಡನೆ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರುವ ಬಗ್ಗೆ ಸುಳ್ಯದಲ್ಲಿ ಹಾಕಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆಯ ಬಗ್ಗೆ ಹಿಂದು ಜಾಗರಣ ವೇದಿಕೆ ಖಂಡನೆ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಹಿ.ಜಾ.ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ಸತೀಶ್ ಮೂಕಮಲೆ ಹಾಗೂ ತಾಲೂಕು ಸಂಚಾಲಕ ಸಚಿನ್ ವಳಲಂಬೆ ಆಗ್ರಹಿಸಿದ್ದಾರೆ.

ಸುಳ್ಯ : ಬ್ಯಾನರ್ ಹರಿದ ಪ್ರಕರಣ – ಆರೋಪಿಗಳ ತಕ್ಷಣ ಬಂಧಿಸಲು ಎಸ್.ಪಿ. ಯವರಿಗೆ ಸೂಚಿಸಿದ ಸಂಸದ ನಳಿನ್ ಕುಮಾರ್ ಕಟೀಲ್

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಬ್ಯಾನರನ್ನು ಸುಳ್ಯದಲ್ಲಿ ಕಿಡಿಗೇಡಿಗಳು ಹಾನಿ ಮಾಡಿರುವ ಬಗ್ಗೆ ಮಾನ್ಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಖಂಡನೆ ವ್ಯಕ್ತಪಡಿಸಿದ್ದು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಅವರೊಂದಿಗೆ ಮಾತನಾಡಿ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ
Loading posts...

All posts loaded

No more posts

error: Content is protected !!