ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಪ್ರಯುಕ್ತ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಪ್ರಯುಕ್ತ ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ಕರಸೇವಕರಾದ ವಾರಣಾಶಿ ಗೋಪಾಲಕೃಷ್ಣ ಹಾಗೂ ಅಶೋಕ್ ಕೆದಿಲ ಅಯೋಧ್ಯೆಯಲ್ಲಿ ತಮ್ಮ ಕರಸೇವೆಯ ಅನುಭವದ ಸಿಹಿ ನೆನಪುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರು, ಅರ್ಚಕರು ಹಾಗೂ ಭಕ್ತರು...

ಕರ ಸೇವೆಯಲ್ಲಿ ಪಾಲ್ಗೊಂಡಿದ್ದ ಪದ್ಮಾನಂದ ಗೌಡ ಕೊರತ್ಯಡ್ಕರಿಗೆ ಸನ್ಮಾನ

ಅಯೋಧ್ಯೆಯ ಕರ ಸೇವೆಯಲ್ಲಿ ಪಾಲ್ಗೊಂಡಿದ್ದ ಪದ್ಮಾನಂದ ಗೌಡ ಕೊರತ್ಯಡ್ಕ ರವರ ಮನೆಗೆ ಭೇಟಿಕೊಟ್ಟು ರಾಮ ಭಕ್ತರಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮುರಳಿ ನಾಳಿಯಾರು,ಅರುಣ್ ಪರಮಲೆ, ಗರುಡಯುವಕ ಮಂಡಲ ಚೊಕ್ಕಾಡಿ ಅಧ್ಯಕ್ಷರಾದ ಮನೋಜ್ ಪಡ್ಪು, ಶರಣ್ ಕರ್ಮಜೆ, ಯಕ್ಷಿತ್ ಬೊಳ್ಳುರು, ರಾಮ ಭಕ್ತರು ಉಪಸ್ಥಿತರಿದ್ದರು.
Ad Widget

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಪ್ರಯುಕ್ತ ನಾವೂರು ಮಹಮ್ಮಾಯಿ ದೈವಸ್ಥಾನದಲ್ಲಿ ಭಜನಾ ಕಾರ್ಯಕ್ರಮ

ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಗಾಂಧಿನಗರದ ನಾವೂರು ಮಹಮ್ಮಾಯಿ ದೈವಸ್ಥಾನದಲ್ಲಿ ಸೇವಾ ಭಾರತಿ ಹೆಲ್ಪೈನ್ ಟ್ರಸ್ಟ್ ಸುಳ್ಯ ಮತ್ತು ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಭಜನಾ ಕಾರ್ಯಕ್ರಮ ಜರಗಿತು. ಶ್ರೀ ಮಹಾಮ್ಮಾಯಿ ಭಜನಾ ಮಂಡಳಿ, ಮಿತ್ರ ಬಳಗ ಕಾಯರ್ತೋಡಿ, ಜಯನಗರ, ಶಾಂತಿನಗರದ ಭಜನಾ ತಂಡಗಳು ಒಟ್ಟಿಗೆ ಸೇರಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ರಾಷ್ಟ್ರೀಯ...

ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಎಣ್ಮೂರು ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ – ಕರಸೇವಕರಿಗೆ ಸನ್ಮಾನ

ಕಡಬ ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ (ರಿ) ಕೋಟಿ-ಚೆನ್ನಯ ನಗರ ಇವರ ವತಿಯಿಂದ ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಎಣ್ಮೂರಿನ ಶ್ರೀರಾಮಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಣಪತಿ ಹವನ, ಶ್ರೀರಾಮನಾಮ ತಾರಕ ಹೋಮ, ವಿವಿಧ ಭಜನಾ ತಂಡಗಳಿಂದ ಭಜನೆ, ಹಾಗೂ ಶ್ರೀರಾಮ ದೇವರಿಗೆ ಕಲಶಾಭಿಷೇಕ ನಡೆದು, ಮಧ್ಯಾಹ್ನ ಧಾರ್ಮಿಕ ಸಭಾ...

ಕಲ್ಲುಗುಂಡಿ ವಾರ್ಷಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ : ಸಯ್ಯಿದ್ ಹುಸೈನ್ ಪಾಷ ಸಅದಿ ತಂಙಳ್ ನೇತೃತ್ವ

ಕರ್ನಾಟಕ ಮುಸ್ಲಿಂ ಜಮಾಅತ್, SჄS, SSF ಕಲ್ಲುಗುಂಡಿ ಯೂನಿಟ್ ವತಿಯಿಂದ ಜ. 21ರಂದು ನಡೆದ ವಾರ್ಷಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಸಯ್ಯಿದ್ ಹುಸೈನ್ ಪಾಷ ಸಅದಿ ತಂಙಳ್ ರವರು ಮಹ್ಳರತುಲ್ ಬದ್ರಿಯಾ ಗೆ ನೇತೃತ್ವ ನೀಡಿ ಪ್ರಾರ್ಥನೆಯ ಮೂಲಕ ಚೈತನ್ಯ ನೀಡಿದರು. ನಂತರದ ಸಭಾ ಕಾರ್ಯಕ್ರಮವನ್ನು ನೌಷಾದ್ ಮದನಿ ಅನ್ಸಾರಿಯಾ ರವರು ಉಧ್ಘಾಟಿಸಿದರು. ಜಲೀಲ್ ಸಖಾಫಿ...

ಕಂದ್ರಪ್ಪಾಡಿ : ಶಾಲೆಯ ಎದುರು ಭಾಗಕ್ಕೆ ಇಂಟರ್ ಲಾಕ್ ಅಳವಡಿಕೆ – ಗುದ್ದಲಿಪೂಜೆ ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಶತಮಾನದ ಹೊಸ್ತಿಲಲ್ಲಿರುವ ಕಂದ್ರಪ್ಪಾಡಿ ಹಿ.ಪ್ರಾ.ಶಾಲೆಯ  ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆಗೆ  ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ‌ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ,...

ಗುತ್ತಿಗಾರು : ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಅಂಗವಾಗಿ ಭಜನಾ ಕಾರ್ಯಕ್ರಮ

ಗುತ್ತಿಗಾರು ಗುತ್ತಿಗಾರಿನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರದ ಪ್ರತಿಷ್ಠಾ ದಿನದ ಅಂಗವಾಗಿ ಭಜನೆ ಕಾರ್ಯಕ್ರಮ ನೆರವೇರಿತು.

ಕಂದ್ರಪ್ಪಾಡಿ : ಮುಳಿಯಡ್ಕ ವಾಲ್ತಾಜೆ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಕಂದ್ರಪ್ಪಾಡಿ : ಮುಳಿಯಡ್ಕ ವಾಲ್ತಾಜೆ ರಸ್ತೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಕಾಮಗಾರಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎ.ವಿ.ತೀರ್ಥರಾಮ, ದಿವಾಕರ ಮುಂಡೋಡಿ, ವಿನಯಕುಮಾರ್ ಮುಳುಗಾಡು, ಸಂತೋಷ್ ಜಾಕೆ, ಕಿಶೋರ್ ಅಂಬೆಕಲ್ಲು, ಭವಾನಿಶಂಕರ ಮುಂಡೋಡಿ, ಕಾಳಿಕಾ ಪ್ರಸಾದ್ ಮುಂಡೋಡಿ, ವಿನೋದ್ ಕುಮಾರ್...

ಮುಸ್ಲಿಂ ಯುವಕರು ಅಲ್ಲಾಹ್ ಅಕ್ಬರ್ ಎನ್ನುತ್ತಾ ಬಾಂಬ್ ಹಾಕುತ್ತಾರೆ ಎಂದು ಸುಳ್ಳಾರೋಪಗೈದ ಕಾಂಗ್ರೆಸ್ ನಾಯಕ ಟಿ.ಎಂ ಶಹೀದ್ ಹೇಳಿಕೆಗೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ಆಕ್ರೋಶ

ಸುಳ್ಯ ಜ 22: ಕಾಂಗ್ರೆಸ್ ನಾಯಕ ಟಿ.ಎಂ ಶಹೀದ್ ಪತ್ರಿಕಾಗೋಷ್ಠಿಯಲ್ಲಿ ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಮಾತನಾಡುತ್ತಾ ಸಂಘಪರಿವಾರ ಕ್ರೌರ್ಯತೆಯನ್ನು ಹೇಳಿ ಬ್ಯಾಲೆನ್ಸ್ ಮಾಡಲು, ಅಥವಾ ಬಿಜೆಪಿ ಸಂಘ ಪರಿವಾರದ ಪ್ರೀತಿ ಗಳಿಸಲು, ಮುಸ್ಲಿಂ ಯುವಕರು ಅಲ್ಲಾಹ್ ಅಕ್ಬರ್ ಎಂದು ಹೇಳುತ್ತಾ ಬಾಂಬ್ ಹಾಕುತ್ತಾರೆ ಎಂದು ಸುಳ್ಳಾರೋಪಗೈದ ಅವರ ಹೇಳಿಕೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ವೆಂಕಮ್ಮ ಕೊಮ್ಮಾಡ್ಕ ಮಾವಿನಕಟ್ಟೆ ನಿಧನ

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಕೊಮ್ಮಾಡ್ಕ ದಿ| ಚಿನ್ನಪ್ಪ ಗೌಡ ರ ಪತ್ನಿ ವೆಂಕಮ್ಮ ರವರು ಅಲ್ಪಕಾಲದ ಅಸೌಖ್ಯತೆಯಿಂದ ಸ್ವಗೃಹದಲ್ಲಿ ಜ.21ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ
Loading posts...

All posts loaded

No more posts

error: Content is protected !!