Ad Widget

ಪಂಜ : ವ್ಯಕ್ತಿಯೋರ್ವ ಆತ್ಮಹತ್ಯೆ

ಪಂಜದ ಮರಿಯ ಮಹಲ್ ಸಮೀಪ ಬಾಡಿಗೆ ರೂಂ ನಲ್ಲಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ. ಹೆಚ್ಚಿನ ವಿವರ ಲಭ್ಯವಾಗಬೇಕಿದೆ.

ವಿಧಾನ ಪರಿಷತ್ ಗೆ ಬಿಜೆಪಿ ಅಭ್ಯರ್ಥಿಯಾಗಿರುವ ಕಿಶೋರ್ ಕುಮಾರ್ ಅವರಿಂದ ನಾಳೆ ( ಅ.18)ಪೆರುವಾಜೆಯಲ್ಲಿ ಪ್ರಚಾರ ಸಭೆ

ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನೆಯಿಂದ ತೆರವಾದ ದ.ಕ.ಮತ್ತು ಉಡುಪಿ ಕ್ಷೇತ್ರಗಳನ್ನು ಒಳಗೊಂಡ ವಿಧಾನ ಪರಿಷತ್ ಕ್ಷೇತ್ರಕ್ಕೆ  ಬಿಜೆಪಿ ಅಭ್ಯರ್ಥಿಯಾಗಿರುವ ಕಿಶೋರ್ ಕುಮಾರ್ ಅವರು  ನಾಳೆ ( ಅ.18)  ಪೂರ್ವಾಹ್ನ 10 ಗಂಟೆಗೆ ಪೆರುವಾಜೆಯ ಜೆ.ಡಿ.ಅಡಿಟೋರಿಯಂ ನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad Widget

ಹರಿಹರ ಪಳ್ಳತ್ತಡ್ಕ : ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಭವ – ತೀರ್ಥಸ್ನಾನ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಸಿದ್ಧಪರ್ವತದಿಂದ ಕೋಟಿ ತೀರ್ಥ ನದಿಯು ಹರಿಯುತ್ತಿದ್ದು, ಅದು ಶ್ರೀ ದೇವಳದ ಎದುರು ಭಾಗದಲ್ಲಿ ಸಂಗಮವಾಗಿ “ಅಘನಾಶಿನಿ” ಯಾಗಿ ಮುಂದಕ್ಕೆ ಹರಿಯುತ್ತದೆ. ಇಲ್ಲಿ ತುಲಾ ಸಂಕ್ರಮಣ ಅ.17 ರಂದು ಬೆಳಿಗ್ಗೆ 7:40ರ ಶುಭ ಮುಹೂರ್ತದಲ್ಲಿ ತೀರ್ಥೋದ್ಭವವಾಗಿದ್ದು, ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್...

ಸುಳ್ಯ ಅದ್ದೂರಿ ದಸರಾ ಮೆರವಣಿಗೆಗೆ ಚಾಲನೆ

ಸುಳ್ಯದಲ್ಲಿ ನಿರಂತರವಾಗಿ 9 ದಿನಗಳ ಕಾಲ ಪೂಜಿಸ್ಪಟ್ಟ ಶಾರದಾ ದೇವಿಯ ವಿಸರ್ಜನ ಮೆರವಣಿಗೆಗೆ ಇದೀಗ ಚಾಲನೆ ನೀಡಲಾಯಿತು.  ಸಂಸದ ಕ್ಯಾ ಬೃಜೇಶ್ ಚೌಟ , ಶಾಸಕಿ ಭಾಗೀರಥಿ ಮುರುಳ್ಯ , ನಾರಾಯಣ ಕೇಕಡ್ಕ , ಕೆ ಗೋಕುಲ್ ದಾಸ್ , ಡಾ .ಲೀಲಾಧರ ಡಿವಿ , ಶಶಿಕಲಾ ನೀರಬಿದಿರೆ ಮತ್ತಿತರರು ಓಂಕಾರ ಧ್ವಜ ಹಾರಿಸುವ ಮೂಲಕ...

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಲೀಲಾ ದಾಮೋದರ್ ಆಯ್ಕೆ

ಅರಂತೋಡಿನಲ್ಲಿ ನ. 23 ರಂದು ನಡೆಯಲಿರುವ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ್ ಆಯ್ಕೆಯಾಗಿದ್ದಾರೆ. ಇಂದು ಕನ್ನಡ ಭವನದಲ್ಲಿ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರು, ಸಮ್ಮೇಳನ ಸ್ವಾಗತ ಸಮಿತಿ ಮತ್ತು ಸಮ್ಮೇಳನದ ಪೂರ್ವಾಧ್ಯಕ್ಷರ ಸಭೆಯಲ್ಲಿ ಲೀಲಾ ದಾಮೋದರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯ...

ಬಾಲಚಂದ್ರ ಕಳಗಿ ಕೊಲೆ ಪ್ರಕರಣ –  ಆರೋಪಿಗಳ ವಿರುದ್ದ ಆರೋಪ ಸಾಬೀತು !

ಬಿಜೆಪಿ ಮುಖಂಡ ಸಂಪಾಜೆಯ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ತೀರ್ಪು ನಿನ್ನೆ ಪ್ತಕಟವಾಗಿದ್ದು, ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಲಯವು ಆದೇಶಿಸಿದೆ. ಕಳಗಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಹರಿಪ್ರಸಾದ್ ಪಿ ಕೆ ಯಾನೆ ಮಣಿ ಹಾಗೂ ಜಯನ್ ಕೆ ಇವರನ್ನು ನ್ಯಾಯಾಲಯವು ತಪ್ಪಿತಸ್ಥರು ಎಂದು ಹೇಳಿದ್ದು, ಶಿಕ್ಷೆಯ ಪ್ರಮಾಣವನ್ನು ದಿನಾಂಕ 19-10-2024 ರಂದು ನ್ಯಾಯಾಲಯ ಪ್ರಕಟಿಸಲಿದೆ...

ಗೂನಡ್ಕ : ಅಕ್ರಮವಾಗಿ ಸಂಗ್ರಹಿಸಿದ್ದ ವೈನ್ ವಶ – ಪ್ರಕರಣ ದಾಖಲು

ಗೂನಡ್ಕ ಪ್ರದೇಶದ ಪಯಶ್ವಿನಿ ರಿಫ್ರೆಶ್‌ಮೆಂಟ್‌ ಆ್ಯಂಡ್‌ ಕೂಲ್ ಜೋನ್ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು 111.750 ಲೀಟರ್ ಕೂರ್ಗ್ ವಿಂಟೇಜ್ ಹೋಮ್ ಮೇಡ್ ವೈನ್‌ನ್ನು ಅಬಕಾರಿ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಸುಳ್ಯ ವಲಯ ವಾಪ್ತಿಯ ಅರಂತೋಡು ಗ್ರಾಮದಲ್ಲಿ ಅಬಕಾರಿ ಅಧಿಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದಾಗ ದೊರೆತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ...

ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ – ಅಕ್ವೇರಿಯಂ ಜೋಡಣೆ ಮತ್ತು ನಿರ್ವಹಣೆ ಹಾಗೂ ಉದ್ಯಮಶೀಲತೆ ಬಗ್ಗೆ ತರಬೇತಿ

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಹ್ಯೊಗೆ ಬಝಾರ್‌ನ ಆವರಣದಲ್ಲಿರುವ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಸಚಿವಾಲಯದ ಅಧೀನದಲ್ಲಿರುವ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಪ್ರಾಯೋಜಿತ ಯೋಜನೆಯಾದ ‘ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃಧ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ’ ದಲ್ಲಿ ನವೆಂಬರ್ ತಿಂಗಳ ಮೂರನೇ ವಾರದಲ್ಲಿ ಉಚಿತವಾಗಿ ಕೌಸಲ್ಯಾಭಿವೃದ್ಧಿ...

ದೇವರಕೊಲ್ಲಿ : ಸೇತುವೆ ಬಳಿ ಪ್ರಪಾತಕ್ಕೆ ಬಿದ್ದ ಕಾರು – ಅಪಾಯದಿಂದ ಪಾರು

ದೇವರಕೊಲ್ಲಿ ಜಂಕ್ಷನ್ ನಲ್ಲಿರುವ ಸೇತುವೆ ಕೆಳಗೆ  ಕಾರೊಂದು  ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. ಕಾರಿನಲ್ಲಿ 4 ಜನ ಪ್ರಯಾಣಿಕರಿದ್ದು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಕಾರು ಕಾಂಞಕಾಡಿನಿಂದ ಹೊರಟು ದೇವರಕೊಲ್ಲಿ ಸಮೀಪ ಬಂದಾಗ ನಿದ್ರೆ ಮಂಪರಿನಲ್ಲಿ ರಸ್ತೆ ಬಿಟ್ಟು  ಸೇತುವೆಯಿಂದ ಕೆಳಗೆ  ಉರುಳಿದೆ. ವಾಹನ ಬಿದ್ದ ಶಬ್ದ ಕೇಳಿ ಸ್ದಳೀಯರಾದ ರಿಯಾಸ್ ವರು ಸ್ಥಳಕ್ಕೆ...

ಸುಳ್ಯ ದಸರಾ ಸಾಂಸ್ಕೃತಿಕ ಉತ್ಸವಕ್ಕೆ ತೆರೆ – ಇಂದು (ಅ.17) ಶ್ರೀ ಶಾರದಾ ದೇವಿಯ ಭವ್ಯ ಶೋಭಯಾತ್ರೆ

ಇದು ಸಂಸ್ಕೃತಿಗಳ ತವರು ಜಿಲ್ಲೆ , ನೈತಿಕ ಮೌಲ್ಯಗಳನ್ನು ಅಳವಡಿಸುವ ಮೂಲಕ ಆಚರಣೆ - ಜುಬಿನ್ ಮಹಪಾತ್ರ ಶಾರದೆಯ ಮೆರವಣಿಗೆ ಹಿಂದುಗಳಾದ ನಾವು ತೀರ್ಮಾನಿಸಬೇಕು ಸರಕಾರವಲ್ಲ - ಕಟೀಲ್ ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ ನಡೆಯುತ್ತಿರುವ 53...
Loading posts...

All posts loaded

No more posts

error: Content is protected !!