Ad Widget

ನವಂಬರ್ 10 ಕ್ಕೆ ಸುಳ್ಯದಲ್ಲಿ ಅದ್ದೂರಿ ತಮಿಳು ಬಾಂಧವರ ಸುವರ್ಣ ಮಹೋತ್ಸವ.

ಕರ್ನಾಟಕ ಸರಕಾರದ ಸಚಿವರುಗಳ ಸಹಿತ ಅಧಿಕಾರಿಗಳ ದಂಡು ಆಗಮನ. ಸಾಂಸ್ಕೃತಿಕ ಹಾಗೂ ಆಚರಣೆಗಳ ಅನಾವರಣ , ಬೃಹತ್ ಕಾಲ್ನಾಡಿಗೆ ಜಾಥಾ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ತಮ್ಮ ನೆಲೆ ಕಂಡುಕೊಂಡಿರುವ ಸುಮಾರು 10 ಸಾವಿರ ತಮಿಳು ಭಾಂದವರ ಸಮ್ಮಿಲನ ಸ್ವರ್ಣ ಮಹೋತ್ಸವ ಅದ್ದೂರಿ ಕಾರ್ಯಕ್ರಮ ನವಂಬರ್ 10 ರಂದು ಸುಳ್ಯದ...

ರೇಣುಕಾ – ಚೇತನ್ ಕುಮಾರ್ ವಿವಾಹ ನಿಶ್ಚಿತಾರ್ಥ

ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುದುರೆಮಜಲು ಕುಶಾಲಪ್ಪ ಗೌಡರ ಪುತ್ರಿ ರೇಣುಕಾರವರ ವಿವಾಹ ನಿಶ್ಚಿತಾರ್ಥ ವು ಸುಳ್ಯ  ಪಂಬೆತ್ತಾಡಿ ಗ್ರಾಮದ ಶೆಟ್ಟಿಗದ್ದೆ ಹುಕ್ರಪ್ಪ ಗೌಡರ ಪುತ್ರ ಚೇತನ್ ಕುಮಾರ್ ರವರೊಂದು ಒ.20ರಂದು ವಧುವಿನ ಮನೆಯಲ್ಲಿ ನಡೆಯಿತು
Ad Widget

ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದ ವಿಧಾನ ಪರಿಷತ್ ಚುನಾವಣೆಗೆ ಮತದಾನ

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ ಕರ್ಲಪ್ಪಾಡಿ, ಸತ್ಯವತಿ ಬಸವನಪಾದೆ, ದಿವ್ಯಾ ಪಡ್ಡಂಬೈಲು, ಸರೋಜಿನಿ ಕರಿಯಮೂಲೆ, ರತ್ನಾವತಿ ಹನಿಯಡ್ಕ ತಮ್ಮ ಮತವನ್ನು ಚಲಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಅಜ್ಜಾವರ ಶಕ್ತಿ ಕೇಂದ್ರ ಪ್ರಮುಖರಾದ ರಾಜೇಶ್ ಮೇನಾಲ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ, ಮಾಜಿ ತಾಲೂಕು...

ಎಣ್ಮೂರು ನಿವಾಸಿ ಲೀಲಾವತಿ ಯವರಿಗೆ ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ವತಿಯಿಂದ ಧನ ಸಹಾಯ

ಅನಾರೋಗ್ಯಕ್ಕೆ ತುತ್ತಾಗಿರುವ ಎಣ್ಮೂರು ನಿವಾಸಿ ಲೀಲಾವತಿ ಯವರಿಗೆ ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಪುತ್ತೂರು ಇದರ ವತಿಯಿಂದ ಧನ ಸಹಾಯ ಮಾಡಲಾಯಿತು.  ಪತಿಯನ್ನು ಕಳೆದುಕೊಂಡಿರುವ ಇವರು ಪತಿಯನ್ನು ಕಳೆದುಕೊಂಡಿದ್ದು, ಇದೀಗ ಇವರು ಎರಡು ಕಿಡ್ನಿ ಸಮಸ್ಯೆಯಿಂದ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ.  ಇಬ್ಬರು ಹೆಣ್ಣಮಕ್ಕಳ ಜವಾಬ್ದಾರಿಯನ್ನು ಕೂಲಿ ನಾಲಿ ಮಾಡಿ ಸಾಕುತ್ತಿದ್ದ ಈ ಬಡ ಕುಟುಂಬ...

ಮಧ್ಯವಯಸ್ಕ ಮಹಿಳೆಯರನ್ನು ಕಾಡುವ ಫೈಬ್ರಾಯ್ಡ್ – ರೋಗದ ಲಕ್ಷಣಗಳೇನು? –  ಪೈಬ್ರಾಯ್ಡ್ ಬರದಂತೆ ತಡೆಯುವುದು ಹೇಗೆ?

ಬರಹ : ಡಾ|| ಮುರಲೀ ಮೋಹನ್‍ಚೂಂತಾರು ಗರ್ಭಕೋಶದ ಬಳಭಾಗದ ಪದರಗಳಲ್ಲಿ ಸ್ಥಾನೀಯವಾಗಿ ಬೆಳೆಯುವ ಗಡ್ಡೆಗಳಿಗೆ ಫೈಬ್ರಾಯ್ಡ್ ಎಂದು ಕರೆಯುತ್ತಾರೆ. ಬಹಳ ನಿಧಾನವಾಗಿ ಬೆಳೆಯುವ ಕ್ಯಾನ್ಸರ್ ಅಲ್ಲದ ಗಡ್ಡೆ ಇದಾಗಿರುತ್ತದೆ. ಇದನ್ನು ಲಿಯೋಮಯೋಮಾ ಅಥವಾ ಮಯೋಮಾ ಎಂದೂ ಕರೆಯುತ್ತಾರೆ. ಹೆಚ್ಚಾಗಿ ಗರ್ಭಾಶಯದ ಮಾಂಸಖಂಡದ ಪದರಗಳಲ್ಲಿ ಇದು ಕಂಡುಬರುತ್ತದೆ. ಫೈಬ್ರಾಯ್ಡ್‍ಗಳ ಗಾತ್ರದಲ್ಲಿ ಬಹಳ ಅಂತರವಿರುತ್ತದೆ. ಸಣ್ಣ ಬಟಾಣಿ ಗಾತ್ರದಿಂದ...

ಪಾಲಡ್ಕ : ಮೆಸ್ಕಾಂ ಸಿಬ್ಬಂದಿ ಚಲಾಯಿಸುತ್ತಿದ್ದ ಬೈಕ್ ಗೆ ಕಾರು ಢಿಕ್ಕಿ – ಪವಾಡಸದೃಶ ಅಪಾಯದಿಂದ ಪಾರಾದ ಸವಾರ

https://youtu.be/zARVoTk-yeA?si=bM590x2YxHIMXGK- ಬೈಕ್ ನ ಹಿಂಬದಿಗೆ ಕಾರೊಂದು ಢಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಮೆಸ್ಕಾಂ ಸಿಬ್ಬಂದಿ ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಪಾಲಡ್ಕ ಸಮೀಪ ಅ.20ರಂದು ಅಪರಾಹ್ನ ಸಂಭವಿಸಿದೆ. ಸುಳ್ಯದ ಮೆಸ್ಕಾಂ ನಲ್ಲಿ ಮೀಟರ್ ರೀಡರ್ ಆಗಿರುವ ಜಯಪ್ರಕಾಶ್ ಕಜ್ಜೋಡಿ ಅವರು ಚಲಾಯಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದಿಂದ...

ಸುಳ್ಯ : ಆನೆಗಳ ಹಿಂಡು ದಾಳಿ – ಅಪಾರ ಕೃಷಿ ಹಾನಿ

ಸುಳ್ಯ ಅಟಲ್ ನಗರದ ಕೋಡಿಮೂಲೆ ಎಂಬಲ್ಲಿ ಕಳೆದ ರಾತ್ರಿ ಡಿ.ಎಸ್ ಗಿರೀಶ್ ದೇವರಗುಂಡ ರವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿಗೆ ಹಾನಿ ಮಾಡಿದೆ.  5 ಅನೆಗಳ ಹಿಂಡು ದಾಳಿ ನಡೆಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌

ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ : ಸೇವೆಯ ಮೂಲಕ ಸಾರ್ಥಕ ಜೀವನ ಸಾಧ್ಯ – ಮಂಜುನಾಥ್ ಎಂ.

ಮನುಷ್ಯ ತನ್ನ ಜೀವನದಲ್ಲಿ ಸಮಾಜಕ್ಕೆ ಕಿಂಚಿತ್ ಸೇವೆಯನ್ನು ಮಾಡುವ ಮೂಲಕ ಸಾರ್ಥಕ ಜೀವನವನ್ನು ಕಟ್ಟಿಕೊಳ್ಳಬೇಕು. ರೆಡ್ ಕ್ರಾಸ್ ಸಂಸ್ಥೆ ಬಹಳಷ್ಟು ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದು ಅದರ ದ್ಯೇಯೋದ್ದೇಶವನ್ನು ಅರಿತು ಸೇವಾ ಮನೋಭಾವದೊಂದಿಗೆ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಿ.‌ ಆ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಎಂದು ಸುಳ್ಯದ ಪ್ರಭಾರ ತಹಶೀಲ್ದಾರರಾದ ಮಂಜುನಾಥ್ ಎಂ ಅಭಿಪ್ರಾಯಪಟ್ಟರು. ಅವರು ಸುಳ್ಯದ...

ಸುಳ್ಯ ವಿಷ್ಣು ಸರ್ಕಲ್ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಪ್ರಾಣಾಪಾಯದಿಂದ ಪಾರು

ಸುಳ್ಯ ದ ವಿಷ್ಣು ಸರ್ಕಲ್ ಬಳಿಯಲ್ಲಿ ಕಳೆದ ರಾತ್ರಿ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಡಿಸೈರ್ ಕಾರ್ (KL 14 V 2721) ಚಾಲಕನ ನಿಯಂತ್ರಣ ತಪ್ಪಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನಕ್ಕೆ ತಿರುಗುವಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರ್ ಮುಂಭಾಗ ಜಖಂಗೊಂಡಿದ್ದು ವಿದ್ಯುತ್ ಕಂಬ ತುಂಡಾಗಿ ಕಾರ್ ನ ಮೇಲೆ...

ನವೀನ್ ಚಾತುಬಾಯಿಯವರಿಗೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ

ಸುಳ್ಯ : ಐವರ್ನಾಡು ಗ್ರಾಮದ ಕೃಷಿಕರಾದ ಸಿ. ಕೆ. ನವೀನ್ ಚಾತುಬಾಯಿಯವರೀಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ದೊರೆತಿದೆ.ಶಿವಮೊಗ್ಗದ ನವುಲೆ ವಿಶ್ವವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 18 ರಿಂದ 24ರ ವರೆಗೆ ನಡೆದ ಕೃಷಿ ಮತ್ತು ತೋಟಗಾರಿಕೆ ಮೇಳ 2024ರಲ್ಲಿ...
Loading posts...

All posts loaded

No more posts

error: Content is protected !!