- Thursday
- November 21st, 2024
ಸುಳ್ಯ: ರಾಜ್ಯ ಕಾಂಗ್ರೆಸ್ ಘಟಕವು ಕಾರ್ಯಕರ್ತರ ನಡುವಿನ ನಾಯಕರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂಬ ಕಲ್ಪನೆಯೊಂದಿಗೆ ರಾಷ್ಟ್ರೀಯ ನಾಯಕರು ಮಾಜಿ ಎ ಐ ಸಿ ಸಿ ಅಧ್ಯಕ್ಷರು ಹಾಗೂ ಸಂಸದರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಹಿಂದೆ ಯುವ ಕಾಂಗ್ರೆಸ್ ಘಟಕಕ್ಕೆ ಚುನಾವಣೆ ನಡೆಸಿ ಯಶಸ್ವಿಯಾದ ಬಳಿಕ ಎಲ್ಲಾ ರಾಜ್ಯಗಳಲ್ಲಿಯೂ ಯುವ ಕಾಂಗ್ರೆಸ್ ನಾಯಕರ ಆಯ್ಕೆ...
ಐವರ್ನಾಡು ಗ್ರಾಮದ ಜಬಳೆ ಮಿಥುನ ಅಶ್ವಥ್ ರವರು ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಗಮನಿಸಿ ಕಲಾಭೂಮಿ ಪ್ರತಿಷ್ಠಾನ ಸಂಸ್ಥೆಯು ಈ ವರ್ಷದ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದ್ದು, ನವಂಬರ್ 29ರಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಆಸ್ಕರ್ ಕೃಷ್ಣ ತಿಳಿಸಿದ್ದಾರೆ. ಇವರು ಐವರ್ನಾಡು ಗ್ರಾಮದ ಜಬಳೆ ಅಶ್ವಥ್...
ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ೫೫೦ ಕೆ ಜಿ ವಿಭಾಗದ ಮುಕ್ತ ಹಗ್ಗಜಗ್ಗಾಟ ಮತ್ತು ಕ್ರೀಡಾಕೂಟ ನ.೧೭ರಂದು ದುಗಲಡ್ಕದಲ್ಲಿ ನಡೆಯಿತು. ಕ್ರೀಡಾ ಕೂಟವನ್ನು ಮಾಜಿ ಜಿ.ಪಂ.ಸದಸ್ಯರಾದ ಧನಂಜಯ ಅಡ್ಡಂಗಾಯ ನೆರವೇರಿಸಿದರು. ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈ...
ಸುಳ್ಯ ನಗರದ ದೇವಸ್ಯದಲ್ಲಿರುವ ಜ್ಯೋತಿ ನಿವಾಸದ ಜೋನ್ ಬ್ಯಾಪ್ಟಿಸ್ಟ್ ಲೋಬೋ ನ.18 ರಂದಯ ನಿಧನರಾದರು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ವಿಕ್ಟೋರಿಯಾ ಜ್ಯೋತಿ ಅಮೀನ್ ಬಿ, ಮಕ್ಕಳಾದ ಪಿಲಿಕುಳ ನಿಸರ್ಗಧಾಮದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿರುವ ಜೆರಾಲ್ಡ್ ವಿಕ್ರಂ ಲೋಬೋ ಮತ್ತು ಬೆಂಗಳೂರಿನಲ್ಲಿ ಸೈಂಟಿಸ್ಟ್ ಆಗಿರುವ ಒಲಿವಿಯಾ ರಶ್ಮಿ ಲೋಬೋ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಅಂತಿಮ...
ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಚ್ಯ ಪ್ರಜ್ಞೆ ವಿಷಯಾಧಾರಿತ ಸ್ಪರ್ಧಾ ಕಾರ್ಯಕ್ರಮ ನವೆಂಬರ್ 16ರಂದು ನಡೆಯಿತು. ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ ಕಾರ್ಯಕ್ರಮ ಉದ್ಘಾಟಿಸಿ ಪ್ರಾಚ್ಯ ವಸ್ತುಗಳ ಮಾಹಿತಿ ತಿಳಿದುಕೊಂಡು ಅದನ್ನು ಕಾಪಾಡಿಕೊಳ್ಳುವ ಅನಿವಾರ್ಯ ಇದೆ ಎಂದು ತಿಳಿಸಿದರು. ಪ್ರಾಚ್ಯ ವಸ್ತುಗಳ ವಸ್ತು ಪ್ರದರ್ಶನವನ್ನು ಶ್ರೀಮತಿ...
33 ಕಾವು - ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.19ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್ ಗಳಲ್ಲಿ...
ಅಜ್ಜಾವರ ಗ್ರಾಮದ ಮೇನಾಲ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನ.೧೭ ರಂದು ಶಾಲಾ ವೇದಿಕೆಯಲ್ಲಿ ನಡೆಯಿತು. ಅಂಗನವಾಡಿ ಮಕ್ಕಳಿಗೆ, ಶಾಲೆಯ ವಿಧ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ದೇವಕಿ ಮೇನಾಲ ವಹಿಸಿದ್ದರು. ಕಾರ್ಯಕ್ರಮದಲ್ಲಿರಾಮಚಂದ್ರ ಪಳ್ಳತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಗ್ರಾ.ಪಂ...
ಅಲೆಟ್ಟಿ ಗ್ರಾಮದ ಬಡ್ಡಡ್ಕ - ತಿಮ್ಮನಮೂಲೆ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿಯವರ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ರೂ. 3.00 ಲಕ್ಷ ಅನುದಾನ ಬಿಡುಗಡೆ ಗೊಂಡಿದ್ದು ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ರಸ್ತೆಯ ಪಲಾನುಭವಿಗಳಾದ ರಾಧಕೃಷ್ಣ ನಾಯ್ಕ, ಶಶಿಧರ ನಾಯ್ಕ, ನಾರಾಯಣ...
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಜಿ.ಎಲ್. ಆಚಾರ್ಯ ಜನ್ಮಶತಮಾನೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಜಿ.ಎಲ್. ಆಚಾರ್ಯ ಸಂಸ್ಮರಣಾ ಕಾರ್ಯಕ್ರಮವು ನ.೧೭ರಂದು ಪುತ್ತೂರು ಬೈವಾಸ್‌ನಲ್ಲಿರುವ ಅಶ್ಮಿ ಕಂಫಟ್ಸ್ ಸಭಾಂಗಣದಲ್ಲಿ ನಡೆಯಿತು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ ಪೂರ್ವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು....
ಸುಬ್ರಹ್ಮಣ್ಯ ನ.17: ಸುಬ್ರಹ್ಮಣ್ಯದ ಕೆ ಎಸ್ ಎಸ್ ಕಾಲೇಜಿನ ಎನ್ ಎಸ್ ಎಸ್ ಘಟಕವು ಬಿಳಿನೆಲೆ ಕೈಕಂಬ ಗ್ರಾಮವನ್ನು ದತ್ತು ಗ್ರಾಮ ವಾಗಿ ಸ್ವೀಕರಿಸಿದ್ದು, ಇದರ ಮೊದಲ ಕಾರ್ಯಯೋಜನೆ ಇಂದು ಚಾಲನೆಗೊಂಡಿದ್ದು, ದತ್ತುಗ್ರಾಮ ಸ್ವಿಕಾರದ ಉದ್ಘಾಟನಾ ಸಮಾರಂಭವು ಇಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದ ದಿನೇಶ್ ವಹಿಸಿದ್ದರು. ಉದ್ಘಾಟನೆ ಯನ್ನು...
Loading posts...
All posts loaded
No more posts