- Wednesday
- May 6th, 2026
ಪ್ರಜಾಧ್ವನಿ ಕರ್ನಾಟಕ ಇದರ ಸಭೆಯು ಸೆ.15ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎ. ಕೆ. ಇಬ್ರಾಹಿಂ ವಹಿಸಿದ್ದರು.ಸಾಹುಕಾರ್ ಆಶ್ರಫ್ ಸ್ವಾಗತಿಸಿ, ಆಶೋಕ್ ಎಡಮಲೆ ಸಂವಿಧಾನ ಪೀರಿಕೆ ವಾಚಿಸಿದರು. ಲೂಕಾಸ್ ಟಿ. ಐ. ಪ್ರಜಾಧ್ವನಿ ಸಂಘಟನೆಯ ಬೈಲಾವನ್ನು ಮಂಡಿಸಿದರು.ಬೈಲಾದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಅಂತಿಮವಾಗಿ ಕೇಂದ್ರ ಸಮಿತಿಯವರಿಗೆ ಜವಾಬ್ದಾರಿ ವಹಿಸಲಾಯಿತು. ಪ್ರಜಾಧ್ವನಿ ಕರ್ನಾಟಕ ಇದರ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇದರ 2025-26ನೇ ಸಾಲಿನ ವಿದ್ಯಾರ್ಥಿ ಸಂಘ ರಚನೆ ಮಾಡಲಾಯಿತು.ಸಂಘದ ಅಧ್ಯಕ್ಷೆಯಾಗಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ನಿಶಾ ಗೌರಿ.ಎಂ, ಉಪಾಧ್ಯಕ್ಷರಾಗಿ ತೃತೀಯ ಬಿ.ಎ ವಿದ್ಯಾರ್ಥಿ ಕೀರ್ತನ್.ಬಿ.ಎಲ್ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಎಂ.ಕೆ ಆಯ್ಕೆಯಾಗಿದ್ದಾರೆ.
ಸುಬ್ರಹ್ಮಣ್ಯ : "ಯುವ ಜನಾಂಗದಲ್ಲಿ ಕಲಾ ಸಂಸ್ಕೃತಿಯ ಔನತ್ಯಕ್ಕೆ ಉತ್ಸವಗಳು ಅಡಿಗಲ್ಲಾಗಿದೆ. ಆಧುನಿಕ ಜನತೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿಂಬಿಸುವ ಕಲಾ ಪ್ರಾಕಾರಗಳತ್ತ ಆಕರ್ಷಿತರಾಗಲು ಹಬ್ಬಾಚರಣೆಗಳು ಪ್ರೇರಣೆಯಾಗುತ್ತದೆ. ಅಲ್ಲದೆ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯೂ ಆಚರಣೆಗಳಿಂದ ದೊರಕುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಆನಂದ ನೀಡುವುದು ಮಾತ್ರವಲ್ಲದೆ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಸ್ಪೂರ್ತಿಯಾಗುತ್ತದೆ” ಎಂದು...
ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ "ಮಾನಸಿಕ ಆರೋಗ್ಯ ಜಾಗೃತಿ"ಕಾರ್ಯಕ್ರಮ ನಡೆಯಿತು.ಕಾಲೇಜಿನ ಪ್ರಾಂಶುಪಾಲರಾದ ಅಣ್ಣಯ್ಯ.ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ "ಹದಿಹರೆಯದಲ್ಲಿ ಉಂಟಾಗುವ ಮಾನಸಿಕ ಅಸಮತೋಲನ ಮತ್ತು ಅದರಿಂದ ಹೊರ ಬರುವ ಬಗ್ಗೆ" ಸಲಹೆಗಳನ್ನು ನೀಡಿದರು.ಸಮಾರಂಭದ ವೇದಿಕೆಯಲ್ಲಿ ಆಟೊಮೊಬೈಲ್ ವಿಭಾಗದ ಮುಖ್ಯಸ್ಥ...
ಮಂಗಳೂರು ಮರೋಳಿಯ ತಾರಸಿ ತೋಟದ "ಕೃಷಿ ತಜ್ಞ" ರಾಜ್ಯ ಪ್ರಶಸ್ತಿ ವಿಜೇತರಾದ ಕೃಷ್ಣಪ್ಪ ಗೌಡ ಪಡ್ಡಂಬೈಲ್ ಇವರ ತಾರಸಿ ತೋಟದಲ್ಲಿ ಬೆಳೆದ ಭತ್ತದ ತೆನೆಯನ್ನು ಭದ್ರಕಾಳಿ ಮತ್ತು ಗುಳಿಗಸಾನಿಧ್ಯ, ಪೆದಮಲೆ ಸರಿಪಲ್ಲ ನೀರುಮಾರ್ಗ ಮಂಗಳೂರು ಇಲ್ಲಿಗೆ ಕದಿರು ಕಟ್ಟಲು ಹಾಗೂ ಹೊಸ ಅಕ್ಕಿ ಊಟಕ್ಕೆ ಉಚಿತವಾಗಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಾನಿಧ್ಯದ ಸೇವಾ ಕಾರ್ಯಕರ್ತರಾದ ನಾಗೇಶ್...
ನಿವೃತ್ತ ಪ್ರಾಂಶುಪಾಲ ಗಾಂಧಿನಗರ ನಿವಾಸಿ ದೇವರಗುಂಡ ಡಿ.ಎಸ್.ಕುಶಾಲಪ್ಪ ಸೆ.30 ರಂದು ನಿಧನರಾದರು. ಮೃತರ ಅಂತಿಮ ದರ್ಶನ ನಾಳೆ ಅಕ್ಟೋಬರ್ 01ರಂದು ಬುಧವಾರ ಬೆಳಿಗ್ಗೆ 10:30 ರಿಂದ 12:00 ರವರೆಗೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಏರ್ಪಡಿಸಲಾಗಿದ್ದು, ನಂತರ ಅವರ ಅಂತ್ಯ ಸಂಸ್ಕಾರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಡಲ ಸೇರುವ ಆ ನದಿಯ ಹಣೆಯಲ್ಲಿ ಬರೆದಿರುವುದು “ನಿನ್ನ ಅಸ್ತಿತ್ವವೇ ಆ ಕಡಲು-ನೀ ಹೋಗಿ ಸೇರು ಅದರ ಒಡಲು” ಎಂದು...ಹಾಗೆಯೇ ನದಿಯಂತೆ ಸಾಗುವ ಈ ನಮ್ಮ ಬದುಕಿಗೂ ಇಹುದು ಅಂತಹುದೇ ಒಂದು ಕಡಲು, ಕೊನೆಗೊಂದು ದಿನ ನಾವೂ ಕೂಡ ಸೇರಲೇಬೇಕು ಅದರ ಒಡಲು...ಹಣೆಯ ಬರಹದಲ್ಲಿ ಬರೆದಂತೆ ಸಾಗುವ ಈ ನಮ್ಮ ಬದುಕಿನಲ್ಲಿ ಸುಖಾಸುಮ್ಮನೆ ಏತಕೆ ಈ...
ಬೆಳ್ಳಾರೆಯ ಹಿದಾಯತುಲ್ ಇಸ್ಲಾಂ ಹೈಯರ್ ಸೆಖೆಂಡರಿ ಮದರಸದಲ್ಲಿ ಸಮಸ್ತ ಪ್ರಾರ್ಥನಾ ದಿನವನ್ನು ಸೆ 28ರಂದು ಬೆಳಿಗ್ಗೆ ಆಚರಿಸಲಾಯಿತು.ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಮುದರ್ರಿಸ್ ಮತ್ತು ಖತೀಬ್ ಬಹು:ನಸೀಹ್ ದಾರಿಮಿಯವರು ಪ್ರಾರ್ಥನೆಗೆ ನೇತೃತ್ವ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಯು.ಹೆಚ್ ಅಬೂಬಖರ್ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರಿನ ಕಲ್ಲೇಗ ಜುಮುಅ: ಮಸೀದಿಯ ಖತೀಬ್...
ಏನೇಕಲ್ಲು ಗ್ರಾಮದ ಪೂಜಾರಿಮನೆ ಚಿನ್ನಪ್ಪ ಗೌಡರು ಸೆ.21ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಕರ್ನಾಟಕ ಸರಕಾರದ ವಿಧಾನಸೌಧದಲ್ಲಿ ಗಣ್ಯವ್ಯಕ್ತಿಗಳ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದು, ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ಚಾಲಕರಾಗಿಯೂ ಕರ್ತವ್ಯ ನಿರ್ವಹಿಸಿ 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಅವಿವಾಹಿತರಾಗಿದ್ದ ಇವರು ಅಣ್ಣ...
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸುಳ್ಯದ ವಿವಿಧೆಡೆ ಇಂದು ಕೂಡ ಸರ್ವರ್ ಸಮಸ್ಯೆಯಿಂದ ಸಮೀಕ್ಷೆದಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಸರ್ವರ್ ಸಮಸ್ಯೆಯಿಂದ ಇಂದು ಓಟಿಪಿ ಸಿಗದೆ ಸಮೀಕ್ಷೆಗೆ ತೀವ್ರ ಹಿನ್ನಡೆಯಾಯಿತು. ಸಮೀಕ್ಷೆದಾರರಿಗೆ ಮೇಲಾಧಿಕಾರಿಗಳು ದಿನಕ್ಕೆ 100 ಸಮೀಕ್ಷೆಯಂತೆ ಗುರಿ ನೀಡಲಾಗಿದ್ದು, ಸಮೀಕ್ಷೆದಾರರು...
Loading posts...
All posts loaded
No more posts
