- Thursday
- August 6th, 2026
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸುಳ್ಯ ಮಂಡೆಕೋಲು ಮಾರ್ಗ ಮುಹಿಯುದ್ದೀನ್ ಜುಮಾ ಮಸ್ಜಿದ್ ನಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಝ್ ನೆರವೇರಿಸಲಾಯಿತು. ಇದು ನಮಾಜಿನ ನೇತೃತ್ವವನ್ನು ಸ್ಥಳೀಯ ಜುಮಾ ಮಸ್ಜಿದ್ ನ ಖತೀಬರಾದ ಶಮೀಮ್ ಅರ್ಷದಿ ಬೆಳ್ಳಾರೆ ವಹಿಸಿದ್ದರು . ನಮಾಜಿನ ನಂತರ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸುನ್ನಿ ಫೆಡರೇಷನ್...
ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯುತ್ತಿರುವ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಎಪಿಎಂಸಿ ಅಧ್ಯಕ್ ದೀಪಕ್ ಕುತ್ತಮೊಟ್ಟೆ, ಉಪಾಧ್ಯಕ್ಷ ಸಂತೋಷ್ ಜಾಕೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನ.ಪಂ....
📝 *ಪೂರ್ಣಿಮಾ ಪಂಜ ಚೊಕ್ಕಾಡಿ* ಹಿಂದಿನಿಂದಲೂ ಶಿಕ್ಷಣದ ಮಹತ್ವವನ್ನು ಅರಿತಿರುವ ಜನ ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿ ಕಾಳಜಿ ವಹಿಸಿರುವುದು ನಿಜ. ಗುರುಕುಲ ಪದ್ಧತಿಯಲ್ಲಿ ಕಾರ್ಯ ಚಟುವಟಿಕೆಗಳನ್ನು ಆಧಾರಿಸಿಕೊಂಡು ಗುರುವಿನ ಬಳಿ ಬಂದು ಶಿಷ್ಯ ಶಿಕ್ಷಣ ಪಡೆಯುವಂತ ಪದ್ಧತಿ, ತದನಂತರ ಕ್ರಮೇಣ ಶಿಕ್ಷಣದಲ್ಲಿ ಬದಲಾವಣೆ ಕಂಡು ಗುರು ಶಿಷ್ಯರು ಒಂದೇಡೆ ಸೇರಿ ಅಲ್ಲಿಯೇ ಶಿಕ್ಷಣವನ್ನು ಮುಂದುವರಿಸುವ...
ಗೂನಡ್ಕ ಪೇರಡ್ಕ ಜುಮ್ಮಾ ಮಸ್ಜಿದ್ ನಲ್ಲಿ ಬಕ್ರಿದ್ ಹಬ್ಬದ ಅಂಗವಾಗಿ ಈದ್ ನಮಾಝ್ ಹಾಗೂ ಪ್ರಾರ್ಥನಾ ಸಂಗಮ ನಡೆಯಿತು. ಸ್ಥಳೀಯ ಮಸೀದಿ ಖತೀಬರಾದ ಸುಹೇಲ್ ದಾರಿಮಿ ನೇತೃತ್ವವನ್ನು ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಜಮಾಹತ್ ಸದಸ್ಯರು,ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊರೋನವೈರಸ್ ಹಿನ್ನೆಲೆಯಲ್ಲಿ ಪ್ರಾರ್ಥನಾ ಸಂಗಮದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತು.
ಎಡಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕಿ ತಾರಾವತಿ ಎ ಜು .31 ರಂದು ಸೇವೆಯಿಂದ ನಿವೃತ್ತರಾದರು. ಎಡಮಂಗಲ ಗ್ರಾಮದ ದೇವಸ್ಯ ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ತಿಮ್ಮಪ್ಪ ಗೌಡ ದೇವಸ್ಯ ಇವರ ಪತ್ನಿಯಾದ ಇವರು ಸುಮಾರು 35 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ . ಇವರು ಗುತ್ತಿಗಾರು ಗ್ರಾಮದ ಆರ್ನೋಜಿ...
ಪಯಸ್ವಿನಿ ಯುವಕ ಮಂಡಲ ಕೇರ್ಪಳದ ಸದಸ್ಯರಿಂದ ಕೋರ್ಟ್ ಸಮೀಪದಿಂದ ಕುರುಂಜಿಗುಡ್ಡೆಗೆ ಹೋಗುವ ರಸ್ತೆಯನ್ನು ಶ್ರಮದಾನದ ಮೂಲಕ ಜುಲೈ 26 ರಂದು ದುರಸ್ತಿಗೊಳಿಸಿದರು. ನ.ಪಂ.ಸದಸ್ಯ ವಿನಯಕುಮಾರ್ ಕಂದಡ್ಕ, ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ಕೇರ್ಪಳ ನೇತೃತ್ವ ವಹಿಸಿದ್ದರು. ಈ ಕಾರ್ಯದಲ್ಲಿ ದಯಾನಂದ್ ಕೇರ್ಪಳ, ವಿನ್ಯಾಸ ಕುರುಂಜಿ,ಮನೋಜ್, ಸುಧೀರ್, ದಯಾನಂದ ಕೇರ್ಪಳ, ಮೋಹನ ಕೇರ್ಪಳ, ಗೋಪಾಲ ನಡುಬೈಲು, ಲಕ್ಷ್ಮೀಶ...
ಬೆಳ್ಳಾರೆ ಜಕ್ರೀಯ ಜುಮಾ ಮಸ್ಜಿದ್ ನಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಝ್ ಹಾಗೂ ಪ್ರಾರ್ಥನಾ ಸಂಗಮ ನಡೆಯಿತು. ಸ್ಥಳೀಯ ಮಸ್ಜಿದ್ ನ ಖತೀಬರಾದ ಯೂನುಸ್ ಸಖಾಫಿ ವಯನಾಡ್ ನೇತೃತ್ವ ವಹಿಸಿದ್ದರು. ಸರ್ಕಾರದ ನಿಯಮಾನುಸಾರವಾಗಿ ಪರಿಸರದಲ್ಲಿ ಮುಸಲ್ಮಾನ ಬಾಂಧವರ ಸಂಖ್ಯೆ ಹೆಚ್ಚಿರುವ ಕಾರಣ ಮೂರು ಹಂತಗಳಲ್ಲಿ ನಮಾಜ್ ನಿರ್ವಹಿಸಲಾಯಿತು ಎಂದು ತಿಳಿದುಬಂದಿದೆ.
ಡೆಂಗ್ಯೂ, ಮಲೇರಿಯಾ, ಮತ್ತು ಕೊರೋಣ ರೋಗಗಳ ಉಲ್ಬಣ, ಹರಡುವಿಕೆ ಮತ್ತು ತಡೆಗಟ್ಟುವಿಕೆ ಬಗ್ಗೆ ಜನ ಜಾಗೃತಿ ಮೂಡಿಸಲು ಮತ್ತು ಪರಿಸರ ಶುಚಿತ್ವದ ಪ್ರಾಮುಖ್ಯತೆ ತಿಳಿಯಪಡಿಸಲು ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ರಿಲೀಫ್ ಸರ್ವಿಸ್ ಗೂನಡ್ಕ ವತಿಯಿಂದ ಪವಿತ್ರ ಈದುಲ್ ಅಝ್ಹಾ ದಿನದಂದು ಕರ ಪತ್ರ ಬಿಡುಗಡೆ ಗೊಳಿಸಲಾಯಿತು.ಸ್ಥಳೀಯ ಜಮಾಅತ್ ಉಪಾಧ್ಯಕ್ಷ ಅಶ್ರಫ್...
ಪಂಜ ನೆಕ್ಕಿಲ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಸ್ಥಳೀಯ ಜಮಾ ಅತರು ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಝ್ ನಿರ್ವಹಿಸಿದರು. ನಮಾಜಿನ ನಂತರ ಮಹಾಮಾರಿ ಕರೋನವೈರಸ್ ನಿರ್ಮೂಲನಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನಮಾಜಿನಲ್ಲಿ ಸಾಮಾಜಿಕ ಅಂತರವನ್ನು ಬಳಸಿಕೊಂಡು ಮೂರು ಹಂತವಾಗಿ ನಮಾಜ್ ನಿರ್ವಹಿಸಿದರು.
Loading posts...
All posts loaded
No more posts
