ಪ್ರೇಮನಾಥ ರೈ ಪೆರುವಾಜೆ ನಿಧನ

ಬೆಳ್ಳಾರೆ ಸಮೀಪದ ಪೆರುವಾಜೆ ನಿವಾಸಿ ಪ್ರೇಮನಾಥ ರೈ ಯವರು ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರು ಭಾವೈಕ್ಯ ಯುವಕ ಮಂಡಲ ಪೆರುವಾಜೆ ಇದರ ಮಾಜಿ ಅಧ್ಯಕ್ಷರಾಗಿದ್ದರು.

ಮಡಪ್ಪಾಡಿ ಪಂಚಾಯತ್ ವತಿಯಿಂದ ಕೋವಿಡ್ ಪರೀಕ್ಷೆ -ಎಲ್ಲರ ವರದಿ ನೆಗೆಟಿವ್

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಕೋವಿಡ್ ಪರೀಕ್ಷೆಯಲ್ಲಿ 50 ಜನ ಪರೀಕ್ಷೆಗೆ ಒಳಗಾಗಿದ್ದರು. ಇವರೆಲ್ಲರ ವರದಿಗಳು ಕೂಡ ನೆಗೆಟಿವ್ ಬಂದಿರುತ್ತದೆ ಎಂದು ತಿಳಿದುಬಂದಿದೆ.
Ad Widget

ಸಾಧನೆಗೆ ವಿಕಲಚೇತನ ಅಡ್ಡಿಯಲ್ಲ ಎನ್ನುವುದನ್ನು ತೋರಿಸಿಕೊಟ್ಟ ಸಿಂಚನ್

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿಕಲಚೇತನ ವಿದ್ಯಾರ್ಥಿ ಪ್ರಥಮಶೇಣಿಯಲ್ಲಿ ಅಂಕವನ್ನು ಪಡೆದು ವಿಕಲಚೇತನವು ಶಾಪವಲ್ಲ. ಧೈರ್ಯ ಮತ್ತು ಛಲದಿಂದ ಎದುರಿಸಿದರೆ ಸಮಾಜದಲ್ಲಿ ಯಾವುದೇ ವ್ಯಕ್ತಿಯೂ ಸಾಧನೆಯ ಶಿಖರವನ್ನು ಏರಬಹುದು ಎಂಬ ವಿಶ್ವಾಸವನ್ನು ಈ ಭಾರಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸಿಂಚನ್ ಎಸ್ ಎಂಬ ವಿದ್ಯಾರ್ಥಿಯೂ ತೋರಿಸಿಕೊಟ್ಟಿದ್ದಾರೆ. ಮೂಲತಃ ಗೂನಡ್ಕ ದೊಡ್ಡಡ್ಕ ಪರಿಸರದ ಸದಾನಂದ ಮತ್ತು ಆಶಾ ಬಿ.ಆರ್ ದಂಪತಿಗಳ ಪುತ್ರರಾಗಿದ್ದು,...

ಐವರ್ನಾಡು : ಕೊಲೆ ಆರೋಪಿಗೆ ಜಾಮೀನು

ದಿನಾಂಕ 05/02/2020 ರಂದು ಸಂಜೆ 6 ಗಂಟೆಗೆ ಬೆಳ್ಳಾರೆ ಗ್ರಾಮದ ಬೋಳಿಯಮೂಲೆ ಮುತ್ತುಲಿಂಗಂ ಎಂಬುವರನ್ನು ಅದೇ ಗ್ರಾಮದ ಐವರ್ನಾಡು ಸಿ ಕೂಪಿನ ಎಸ್.ರಮೇಶ್ ಎಂಬಾತನು ಸೌದೆ ಮರದ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಮೃತನ ಮಗಳು ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಬಳಿಕ ಆರೋಪಿಯನ್ನು ಬೆಳ್ಳಾರೆ...

ಅರಂತೋಡು : ಆಧಾರ್ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನ

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ಸಹಭಾಗಿತ್ವದಲ್ಲಿ ಸೆ.16 ಮತ್ತುಸೆ.17 ರಂದು ಎರಡು ದಿವಸಗಳ ನಡೆಯಲಿರುವ ಆಧಾರ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನ ಸೆ.16ರಂದು ಅರಂತೋಡು ಕೃಷಿ ಪತ್ತಿನ ಸಿರಿ ಸೌಧ ಸಭಾಂಗಣದಲ್ಲಿ ನಡೆಯಿತು.ಸರ್ವರ್ ಸಮಸ್ಯೆ ಗಳಿಂದ ಸ್ಥಗಿತ ಗೊಂಡಿದ್ದ ಆಯುಷ್ಮಾನ್ ಕಾರ್ಡ್ ಅಭಿಯಾನದಲ್ಲಿ ಟೋಕನ್ ಪಡೆದವರು ಹಾಗೂ ಹೊಸಬರಿಗೆ...

ಸೆ. 18 : ಗುತ್ತಿಗಾರು ಸಹಕಾರಿ ಸಂಘದ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ಇದರ ವತಿಯಿಂದ ಆರಂಭವಾಗಿದ್ದ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಸರ್ವರ್ ಸಮಸ್ಯೆಯಿಂದ ಬಾಕಿಯಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದ್ದು ಸೆ. 18 ರಂದು ಶುಕ್ರವಾರ ಬೆಳಿಗ್ಗೆ 7.45 ರಿಂದ ಪ್ರಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ.

ಪಡ್ಪಿನಂಗಡಿ : ಪೋಷಣ್ ಅಭಿಯಾನ್ ಮಾಸಾಚರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲ್ಮಡ್ಕ ಗ್ರಾ.ಪಂ. ಹಾಗೂ ಸಪ್ತಶ್ರೀ ಗೊಂಚಲು ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ನಡ್ಕ ಶಿವಗೌರಿ ಕಲಾ ಮಂದಿರದಲ್ಲಿ ಪೋಷಣ್ ಅಭಿಯಾನ್ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಜರುಗಿತು. ಕಾರ್ಯಕ್ರಮದಲ್ಲಿ ಶ್ರೀಮತಿ ರುಕ್ಮಿಣಿ.ಬಿ.ಸಿ. ಇವರು ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಮೇಲ್ವಿಚಾರಕಿ ರವಿಶ್ರೀ.ಕೆ ಪ್ರಾಸ್ತಾವಿಕ...

ಚೆಂಬು : ಕಾಡಾನೆ‌ ದಾಳಿಗೆ ಅಪಾರ ಪ್ರಮಾಣದ ಕೃಷಿ ನಾಶ

ಕಾಡಾನೆ ದಾಳಿ ನಡೆಸಿ ಕೊಡಗು ಜಿಲ್ಲೆಯ ಚೆಂಬು ಗ್ರಾಮದ ನಿಡಿಂಜಿ ಗುಡ್ಡೆ ಮೋಹಿನಿ ಯವರ ಅಡಿಕೆ ತೋಟದ ಸುಮಾರು 40 ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿವೆ. ಅಲ್ಲದೆ ತೆಂಗು ಬಾಳೆ ಅಡಿಕೆ ಮರಳನ್ನು ಮುರಿದು ಹಾಕಿವೆ ಎಂದು ತಿಳಿದು ಬಂದಿವೆ. ಇಲ್ಲಿಯ ತೋಟಕ್ಕೆ ಕಳೆದ ಕೆಲವು ವರ್ಷಗಳಿಂದ ನಿರಂತರ ಆನೆ ದಾಳಿ ನಡೆಸುತ್ತಿವೆ ನಡೆಯುತ್ತಿವೆ.

ಅಚ್ರಪ್ಪಾಡಿ ಶಾಲೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನ ಹಸ್ತಾಂತರ

ದೇವಚಳ್ಳ‌ ಗ್ರಾಮದ ಅಚ್ರಪ್ಪಾಡಿ ಸ.ಕಿ.ಪ್ರಾ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸಹಾಯಧನವನ್ನು ಶಾಲಾ ಆವರಣ ಗೋಡೆ ರಚನೆಗಾಗಿ ಮಂಜೂರಾತಿ ಮಾಡಿದ್ದು ಈ ಮಂಜೂರಾದ ಹಣವನ್ನು ಗುತ್ತಿಗಾರು ವಲಯದ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ ಮತ್ತು ಸೇವಾಪ್ರತಿನಿಧಿ ಉಷಾಲತಾ ಇವರು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹರೀಶ ಕಡಪಳ ಇವರಿಗೆ ಮಂಗಳವಾರ...

ಸೆ.17 : ಕಂದ್ರಪ್ಪಾಡಿಯಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ

ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಇದರ ಆಶ್ರಯದಲ್ಲಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಶಿಬಿರ ಸೆ. 17 ಗುರುವಾರದಂದು ಬೆ.ಗಂಟೆ 8 ರಿಂದ ಸಂಜೆ ಗಂಟೆ 5ರ ತನಕ ಕಂದ್ರಪ್ಪಾಡಿ ಶಾಲಾ ವಠಾರದಲ್ಲಿ ನಡೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಇಚ್ಚಿಸುವವರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಯನ್ನು ತರಬೇಕು ಹಾಗೂ...
Loading posts...

All posts loaded

No more posts

error: Content is protected !!