Ad Widget

ಕೊಡಗು ಸಂಪಾಜೆ ಪರೀಕ್ಷಾ ಕೇಂದ್ರದಲ್ಲಿ ವಿಖಾಯ ತಂಡದಿಂದ ಶುಚಿತ್ವ ಹಾಗೂ ಸ್ಯಾನಿಟೈಸರ್ ಸಿಂಪಡಣೆ

ಸುಳ್ಯ ವಿಖಾಯ ಸಮಿತಿಯ ವತಿಯಿಂದ ಮಡಿಕೇರಿ ತಾಲೂಕು ಸಂಪಾಜೆ ಪದವಿಪೂರ್ವ ಕಾಲೇಜು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದ ಪರಿಸರದಲ್ಲಿ ಶುಚಿತ್ವ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಣೆ,ಔಷದೀಯ ಗಿಡ ನೆಡುವ ಕಾರ್ಯಕ್ರಮ ಇಂದು ನಡೆಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಐತಪ್ಪ,ದೈಹಿಕ ಶಿಕ್ಷಕರಾದ ಕುಶಾಲಪ್ಪ,ರಮಾನಂದ , ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸುಬ್ರಮಣ್ಯ ಉಪಾಧ್ಯಾಯ,ಎಸ್,ಕೆ,ಮಹಮ್ಮದ್ ಹನೀಫ್,ಸಿಬ್ಬಂದಿಗಳಾದ...

ದ.ಕ. ಜಿಲ್ಲೆಯಲ್ಲಿ ಕೊರೊನ ಸೋಂಕಿಗೆ ಮತ್ತೊಂದು ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ .ಜೂನ್ 7ರಂದು ಬೆಂಗಳೂರಿನಿಂದ ಆಗಮಿಸಿದ್ದ 70 ವರ್ಷದ ಪ್ರಾಯದ ವೃದ್ಧ ಮಧುಮೇಹ ಮತ್ತು ನಿಮೋನಿಯ ದಿಂದ ಬಳಲುತ್ತಿದ್ದರು. ಜೂನ್12ರಂದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
Ad Widget

ಮುಕ್ಕೂರು ‌: ಕಥಾ ಮತ್ತು ಕವನ ಸ್ಪರ್ದೆಯ ಫಲಿತಾಂಶ

ಬೆಳ್ಳಾರೆ : ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಡಿಕೇರಿ ತಾಲೂಕಿನವರಿಗೆ ಏರ್ಪಡಿಸಿದ ಕಥಾ ಮತ್ತು ಕವನ ಸ್ಪರ್ದೆಯ ಫಲಿತಾಂಶ ಪ್ರಕಟಗೊಂಡಿದೆ. ಕವನ ಸ್ಪರ್ದೆಯಲ್ಲಿ ನಾರಾಯಣ ಕೇಳತ್ತಾಯ, ಸುಳ್ಯ (ಪ್ರ), ಆಶ್ಲೇಷ್ ಕುಮಾರ್ ಕಾಣಿಯೂರು (ದ್ವಿ),  ಸುಜಯ ಶ್ರೀ ವಿಟ್ಲ (ತೃ) ಹಾಗೂ ಸತ್ಯವತಿ ಭಟ್ ಕೊಳಚಪ್ಪೆ,...

ಕು.ರಚನಾ ಕೆ ನವೋದಯ ಶಾಲೆಗೆ ಆಯ್ಕೆ

ಕಳೆದ ಬಾರಿ ನಡೆಸಲಾದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಕು. ರಚನಾ ಕೆ ಯವರು‌ ಉತ್ತೀರ್ಣಗೊಂಡು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಕಳೆದ ಜನವರಿ 06 ರಂದು ಈ ಪ್ರವೇಶ ಪರೀಕ್ಷೆ ನಡೆದಿತ್ತು. ಈಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆಯ ವಿದ್ಯಾರ್ಥಿನಿ. ಇವಳು ಗುತ್ತಿಗಾರು ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ನವೋದಯ ಪರೀಕ್ಷೆಯ ಬಗ್ಗೆ ತರಬೇತಿ...

ಕೊಡಗಿನ‌ ಕೊರೋನಾ‌ ನಂಜಿನಿಂದ ಗದಗ ಜಿಲ್ಲೆ ಪೊಲೀಸ್ ಠಾಣೆ ಸೀಲ್

ಗದಗ: ಕೊಡಗು ಜಿಲ್ಲೆಯ ಕೊರೋನಾ ಸೋಂಕಿತ ವ್ಯಕ್ತಿಯೋರ್ವನಿಂದ ಪೊಲೀಸ್ ಠಾಣೆ ಸೀಲ್ ಆಗಿರುವ ಘಟನೆ ಜಿಲ್ಲೆ ಮುಂಡರಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಪಿ-9215 ರ ವ್ಯಕ್ತಿ ದಿನಾಂಕ 18 ರಂದು ಖಾಸಗಿ ವಿಷಯಕ್ಕೆ ಸಂಬಂಧಿಸಿಯ ಕೊಡಗು ನಿಂದ ಮುಂಡರಗಿ ಠಾಣೆಗೆ ಬಂದಿದ್ದ. ಆದ್ರೆ ನಿನ್ನೆ ಹೆಲ್ತ್ ಬುಲೆಟಿನ್ ನಲ್ಲಿ ಆ ವ್ಯಕ್ತಿಗೆ ಪಾಸಿಟಿವ್ ದೃಢವಾಗಿದೆ. ಇದರಿಂದ...

ಬೆಳ್ಳಾರೆಯಲ್ಲಿ ನೂತನ ಎಂಡೋ ಪಾಲನ ಕೇಂದ್ರ – 60ಲಕ್ಷ ಅನುದಾನ ಬಿಡುಗಡೆ

ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮ ಎಂಡೋ ಪಾಲನ ಕೇಂದ್ರ (ಎಂಡೋ ಡೇ ಕೇರ್ ಸೆಂಟರ್) ಆರಂಭಿಸಲು ಸರಕಾರ ಅನುದಾನ ಬಿಡುಗಡೆಗೊಳಿಸಿದೆ. ಬೆಳ್ಳಾರೆಯ ಹಳೆ ಆಸ್ಪತ್ರೆ ಕಟ್ಟಡವನ್ನು ದುರಸ್ತಿಗೊಳಿಸಿ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಇಂಜಿನಿಯರ್ ವಿಭಾಗ ತೀರ್ಮಾನಿಸಿದ್ದು ಜೂನ್ 22ರಂದು ಬೆಳ್ಳಾರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಕಾರ್ಯ...

ಬೊಳುಬೈಲು ಬಳಿ ರಾಜ್ಯ ಹೆದ್ದಾರಿಗೆ ಬೀಳುವ ಸ್ಥಿತಿಯಲ್ಲಿರುವ ಅಪಾಯಕಾರಿ ಮರ

ಜಾಲ್ಸೂರು ಗ್ರಾಮದ ಬೊಳುಬೈಲು ಬಳಿ ರಾಜ್ಯ ಹೆದ್ದಾರಿ ಸಮೀಪದಲ್ಲಿರುವ ಬೃಹತ್ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು ಇಂದೋ ನಾಳೆಯೋ ಎಂಬಂತಿದೆ. ಬರೆಯ ಸಮೀಪವಿದ್ದು ಮರ ಬುಡದ ವರೆಗೆ ಮಣ್ಣು ಕುಸಿದಿದೆ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆಬದಿಯಲ್ಲಿ ಸುಳ್ಯಕ್ಕೆ ಬರುವ ಮುಖ್ಯ ವಿದ್ಯುತ್ ಲೈನ್ ಕೂಡ ಹಾದು ಹೋಗುತ್ತಿದ್ದ ಮರ ಬಿದ್ದರೆ ದಿನಪೂರ್ತಿ ವಿದ್ಯುತ್...

ಕ್ಯಾಂಪ್ಕೋ ಇಂದಿನ ಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(23.06.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 270ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...

ಕಟ್ಟೆಕಾರ್ ಬಳಿ ಒಡೆದಿರುವ ಪೈಪ್ ದುರಸ್ತಿ ಮಾಡಿದ ನ.ಪಂ.

ಕಟ್ಟೆಕಾರ್ ಬಳಿ ಚೆನ್ನಕೇಶವ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರಿನಲ್ಲಿ ಸೇರುತ್ತಿತ್ತು. ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಶಾರೀಕ್ ನಗರ ಪಂಚಾಯಿತಿಗೆ ತಿಳಿಸಿ ಸರಿಪಡಿಸುವಂತೆ ಮನವಿ ಮಾಡಿದ್ದರು. ಬಗ್ಗೆ ಸ್ಪಂದಿಸಿದ ನಗರ ಪಂಚಾಯತ್ ಇಂದು ದುರಸ್ತಿ ಕಾರ್ಯ ನಡೆಸಿದೆ.

ಮುದ್ದು ಕಂದ

ನನ್ನ ಮುದ್ದು ಕಂದಮ್ಮ ನೀನು…ನಮ್ಮ ಮನೆಯ ಪುಟ್ಟ ಲಕ್ಷ್ಮೀ….ದೇವರು ನೀಡಿದ ಉಡುಗೊರೆ ಇವಳು…ನಮ್ಮೆಲ್ಲರ ಖುಷಿಗೆ ಕಾರಣಳಿವಳು…ನಿಶ್ಕಲ್ಮಶ ಮನಸ್ಸಿನ‌ ಪುಟ್ಟ ರಾಜಕುಮಾರಿ…ನಗುವಿನ ಮುಖ ತೋರಿ ತಾನುನಗುತ್ತಾ ನಮ್ಮನ್ನು ‌ನಗಿಸುವವಳು..ನೋವನ್ನು‌ ಮರೆಸುವ ಮನಸ್ಸುಳ್ಳವಳು….ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಕುಣಿಯುತ್ತಾ,ಆ ತೊದಲುನುಡಿಯಲ್ಲಿ ಮಾತನ್ನಾಡುತ್ತಾಎಲ್ಲರ‌ ಮನಸ್ಸನ್ನು ಕದ್ದಿರೋ ಪುಟ್ಟ‌ ಮಗು‌ …..ನನ್ನ‌ ಮನದರಸಿ ಇವಳು…ಎಂದೆಂದಿಗೂ ಖುಷಿಯಾಗಿ ನಗುತ್ತಾ, ತುಂಟಾಟವಾಡುತ್ತಾ ಹೀಗೆಯೆ ಇರು…. ಜ್ಯೋತ್ಸ್ನಾ‌...
Loading posts...

All posts loaded

No more posts

error: Content is protected !!