Ad Widget

ಸುಳ್ಯ ಸರ್ಕಾರಿ ಆಸ್ಪತ್ರೆಯ ಐಸಿಯು ಘಟಕಕ್ಕೆ ಕೊರೋನಾ ಮಹಾಮಾರಿ ಕಾಲು ಇಟ್ಟಿತೇ? – ನಿನ್ನೆ ಪ್ರಥಮ ಬಲಿ

ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ , ಹೃದಯಾಘಾತದಿಂದ ಮೃತಪಟ್ಟ ಸುಳ್ಯದ ಕೆರೆಮೂಲೆ ನಿವಾಸಿ ರೋಟರಿ ಶಾಲೆ ಸುಂದರಿಯವರ ಕೊರೋನ ಪರೀಕ್ಷೆಯ ವರದಿ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ . ಅವರು ವಾರದ ಹಿಂದೆ ಅಸೌಖ್ಯಕ್ಕೊಳಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಾಗಿದ್ದರು ಎಂದು ಹೇಳಲಾಗುತ್ತಿದೆ.. ಅದೇ ಸಮಯದಲ್ಲಿ ಆ ವಾರ್ಡಿನಲ್ಲಿ ಸೋಣಂಗೇರಿಯ ವೃದ್ಧರೊಬ್ಬರು ಕೂಡ...

ಜಟ್ಟಿಪಳ್ಳದ ಯುವಕನಿಗೆ ದುಬೈನಲ್ಲಿ ಹತ್ತು ಲಕ್ಷ ರೂಪಾಯಿಗಳ ಲಾಟರಿ

ಸುಳ್ಯದ ಯುವಕನಿಗೆ ದುಬೈ ಮೂಲದ ಆನ್ ಲೈನ್ ಬಿಗ್ ಟಿಕೆಟ್ ಲಾಟರಿ ಮೂಲಕ 50,000 ದಿರಾಮ್ಸ್ ಅಂದರೆ ಸುಮಾರು 10 ಲಕ್ಷ ರೂಪಾಯಿ ಬಹುಮಾನ ಬಂದಿದೆ . ಸುಳ್ಯದ ಜಟ್ಟಿಪಳ್ಳದ ಮಹಮ್ಮದ್ ರಫೀಕ್ ಎಂಬವರಿಗೆ ಈ ಲಾಟರಿ ಬಂದಿದೆ ಎಂದು ತಿಳಿದುಬಂದಿದೆ. ಕಳೆದ ಹಲವು ವರ್ಷಗಳಿಂದ ಯುವಕ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ . ಈ ಹಿಂದೆ ಸುಳ್ಯದ...
Ad Widget

ಸುಂದರಿ ಕೆರೆಮೂಲೆ ನಿಧನ

ಸುಳ್ಯ ಕಸಬಾ ಕೆರೆಮೂಲೆ ನಿವಾಸಿ ದಿ. ಸುಕುಮಾರ ಬಂಗೇರರವರ ಪತ್ನಿ ಸುಂದರಿಯ(62 ) ಹೃದಯಾಘಾತದಿಂದ ಇಂದು ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಕೆಲದಿನದ ಹಿಂದೆ ಎದೆನೋವು ಕಾಣಿಸಿಕೊಂಡ ಇವರನ್ನು ಸುಳ್ಯದ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಪರೀಕ್ಷೆ ವೇಳೆ ನ್ಯುಮೋನಿಯಾ ಇರುವುದು ಗೊತ್ತಾಗಿ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಅವರು ಹೃದಯಾಘಾತದಿಂದ ನಿಧನರಾದರು. ಸುಂದರಿಯವರು ರೋಟರಿ...

ಕಡಬ,ನೆಲ್ಯಾಡಿ, ಸುಬ್ರಹ್ಮಣ್ಯದಲ್ಲಿ ಜುಲೈ 4,7,9 ರಂದು ಕರೆಂಟಿಲ್ಲ

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತವು ಪ್ರಕಟಣೆ ಹೊರಡಿಸಿದ್ದು , 33.ಕೆ.ವಿ ಪುತ್ತೂರು - ಕಡಬ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಜುಲೈ 04 ಶನಿವಾರ , ಜುಲೈ 07 ಮಂಗಳವಾರ ಹಾಗೂ ಜುಲೈ 09 ಗುರುವಾರ ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು .ಆದುದರಿಂದ 33/11 ಕೆ.ವಿ. ಕಡಬ...

ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರ ವಿತರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ವತಿಯಿಂದ 9 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿ , ಬಾಣಂತಿಯರಿಗೆ ಪೌಷ್ಠಿಕ ಆಹಾರ ( ಅಕ್ಕಿ , ಹಾಲು ಹುಡಿ, ಸಕ್ಕರೆ , ಹೆಸರು , ಮೊಟ್ಟೆ , ಬೆಲ್ಲ , ನೆಲಕಡಲೆ ಇತ್ಯಾದಿ ) ವನ್ನು ಪಂಜ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾಯಿತು ....

ಜುಲೈ 31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧ

ನವದೆಹಲಿ : ವಿಮಾನಯಾನ ನಿಯಂತ್ರಕ ಡಿಜಿಸಿಎ ಶುಕ್ರವಾರ ದೇಶದಲ್ಲಿ ನಿಗದಿತ ಅಂತರರಾಷ್ಟ್ರೀಯ ಪ್ರಯಾಣಿಕರ ಹಾರಾಟವನ್ನು ಜುಲೈ 31 ರವರೆಗೆ ವಿಸ್ತರಿಸುವುದಾಗಿ ತಿಳಿಸಿದೆ . ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 23 ರಂದು ಭಾರತದಲ್ಲಿ ಪರಿಶಿಷ್ಟ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 2020 ರ ಜುಲೈ 15 ರವರೆಗೆ ನಿಗದಿತ ಅಂತರರಾಷ್ಟ್ರೀಯ ಪ್ರಯಾಣಿಕರ ಹಾರಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು...

ಗಗನ್ ಸ್ಟುಡಿಯೋ ಸ್ಥಳಾಂತರಗೊಂಡು ಸುಳ್ಯದಲ್ಲಿ ಶುಭಾರಂಭ

ಗಗನ್ ಸ್ಟುಡಿಯೋ ಸ್ಥಳಾಂತರಗೊಂಡು ಸುಳ್ಯದಲ್ಲಿ ಶುಭಾರಂಭಸುಬ್ರಹ್ಮಣ್ಯ ದಲ್ಲಿ ಕಾರ್ಯಚರಿಸುತ್ತಿದ ಗಗನ್ ಸ್ಟುಡಿಯೋ ಸ್ಥಳಾಂತರಗೊಂಡು ಸುಳ್ಯದ ಅಂಬಟೆಡ್ಕ ದಲ್ಲಿರುವ ಜಾನಕಿ ಕಾಂಪ್ಲೆಕ್ಸ್ ನಲ್ಲಿ ಜು. 2 ರಂದು ಶುಭಾರಂಭಗೊಂಡಿತು. ಮಾಲಕರಾದ ಗಗನ್ ದೀಪ್ ನಡುಮನೆ, ಆಗಮಿಸಿ ಶುಭಹಾರೈಸಿದ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು

ಸುಬ್ರಹ್ಮಣ್ಯ ಕಾರ್ಮಿಕ ಆತ್ಮಹತ್ಯೆ

ಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಶೌಚಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ 25 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದ್ಯಾಹ್ನದ ವೇಳೆಗೆ ಕೆಲಸಕ್ಕೆ ಆಗಮಿಸಿದ್ದ ಈ ಯುವಕ ಶೌಚಾಲಯದ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ದೇವಚಳ್ಳ ಕೋವಿಡ್ 19 ಸಹಾಯವಾಣಿ ಆರಂಭ

ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ -19 ಸಹಾಯವಾಣಿ ತೆರೆಯಲಾಗಿದೆ ಯಾವುದಾದರೂ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬಹುದಾಗಿದೆ. 948086238399451003319663668458

ಪೈಂಬೆಚ್ಚಾಲು ಎಸ್ಸೆಸ್ಸೆಫ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಣೆ

ಪೈಂಬೆಚ್ಚಾಲು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ಕಲಿಯುತ್ತಿರುವ, ಪೈಂಬೆಚ್ಚಾಲಿನ ಅರ್ಹ ಕುಟುಂಬಗಳ ಇಪ್ಪತ್ತೆರಡು ವಿದ್ಯಾರ್ಥಿಗಳಿಗೆ, ಮುಸ್ಹಫ್, ಕಿತಾಬ್, ನೋಟ್ ಬುಕ್ ಗಳನ್ನೊಳಗೊಂಡ ಕಲಿಕೋಪಕರಣಗಳಿಗೆ, ಪೈಂಬೆಚ್ಚಾಲು ಎಸ್ಸೆಸ್ಸೆಫ್ ವತಿಯಿಂದ ಹತ್ತು ಸಾವಿರ ರೂಪಾಯಿಗಳ ಸಹಾಯಧನ ವನ್ನು, ಜುಲೈ ೩ ರಂದು, ಬಿಜೆಎಂ ವಠಾರದಲ್ಲಿ ಮದ್ರಸ ಸದರ್ ಉಸ್ತಾದ್ ಅಲ್ ಹಾಜ್ ಬಿ.ಯಂ.ಇಸ್ಮಾಯಿಲ್ ಸಖಾಫಿ ಯವರಿಗೆ ಹಸ್ತಾಂತರಿಸಲಾಯಿತು....
Loading posts...

All posts loaded

No more posts

error: Content is protected !!