- Monday
- August 31st, 2026
ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಜೂ.4 ರಂದು ಅಡ್ತಲೆ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ನಿವೃತ್ತ ಮಾಜಿ ಸೈನಿಕರಾದ ಕಮಲಾಕ್ಷಯವರು ಕಾರ್ಯಕ್ರಮ ಉದ್ಘಾಟಿಸಿ, ಸುಮಾರು 20 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ...
ದೇಶದ ಪ್ರತಿಯೊಬ್ಬ ಪ್ರಜೆಗೂ ನಿವೇಶನ ಕಲ್ಪಿಸುವುದು ಸರಕಾರದ ಮಹತ್ವದ ಯೋಜನೆ. ಈ ಯೋಜನೆಯ ಅಡಿಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ನಿಂತಿಕಲ್ಲು ಸಮೀಪ ಕಾಪಡ್ಕ ಎಂಬಲ್ಲಿ ಫಲಾಭವಿಗಳಿಗೆ ನಿವೇಶನ ಕಲ್ಪಿಸಲಾಗಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದು ಎಂಬಂತೆ ಈ ನಿವೇಶನ ಮೊದಲ ಮಳೆಗೆ ಹಾಕಿದ ಮಣ್ಣೆಲ್ಲಾ ಕೊಚ್ಚಿ ಹೋಗಿದೆ . ಈ...
ಗುತ್ತಿಗಾರು ಗ್ರಾಮದ ವಳಲoಬೆ ಯಲ್ಲಿ ಇರುವ ಕಡ್ತಲ್ ಕಜೆ ಬಸ್ ತಂಗುದಾಣ ದ ಮೇಲೆ ಗಾಳಿ ಮಳೆಗೆ ಮರ ವೊಂದು ಬಿದ್ದು ದರಿಂದ,ಅದನ್ನು ಕಾಂಗ್ರೆಸ್ ಕಾರ್ಯಕರ್ತರು ತೆರವು ಗೊಳಿಸಿದರು, ಈ ಸಂದರ್ಭದಲ್ಲಿ ಸನತ್ ಮುಳುಗಾಡು, ಪರಮೇಶ್ವರ್ ಚಣಿಲ ಕೇಶವ ಹೊಸೋಳಿಕೆ ರಂಜಿತ್, ಸುರೇಶ್, ರವಿ ಪೈಕ, ಲಕ್ಷಣ ಆಚಾರಿ,ಮೊದಲಾದ ವರು ಇದ್ದರು
ಅರಂತೋಡು – ಅಡ್ತಲೆ ರಸ್ತೆ ಅಭಿವೃದ್ಧಿಗಾಗಿ ಮಾಜಿ ಶಾಸಕ ಹಾಗೂ ಸಚಿವ ಎಸ್.ಅಂಗಾರರು ಅನುದಾನ ಒದಗಿಸಿ 3.9 ಕಿ.ಮೀ. ರಸ್ತೆ ಅಭಿವೃದ್ಧಿಗೊಳಿಸಿದ್ದಾರೆ. ಅದಕ್ಕಾಗಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಊರವರು ಸೇರಿ ಜೂ.10ರಂದು ಮಾಜಿ ಸಚಿವ ಎಸ್.ಅಂಗಾರರಿಗೆ ನಾಗರಿಕ ಸನ್ಮಾನ ಏರ್ಪಡಿಸಿದ್ದು, ಜತೆಗೆ ರಸ್ತೆ ಅಭಿವೃದ್ಧಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸಲಿದ್ದೆವೆಂದು ಅಡ್ತಲೆ ನಾಗರಿಕ...
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾಲಡ್ಕ ಬಳಿ ಟೂರಿಸ್ಟ್ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ನಡೆದಿದೆ. ಈ ಘಟನೆಯಿಂದ ವಿದ್ಯುತ್ ಕಂಬ ಮುರಿದಿದ್ದು, ಕಾರಿನಲ್ಲಿದ್ದ ಹುಣಸೂರು ಮೂಲದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ,ನೀರು, ಮಣ್ಣು,ಮರಗಳು, ಕಾಡುಗಳು,ಸಾಗರಗಳು ಇತ್ಯಾದಿಗಳನ್ನು ಎಂದೆಂದಿಗೂ ಇತ್ಯಾದಿಗಳನ್ನು ಎಂದೆಂದಿಗೂ ಉಳಿಸುವುದು ಮುಖ್ಯವಾಗಿದೆ. ನಾವುಗಳು ಅವಲಂಬಿ ಅವಲಂಬಿತವಾಗಿಸಿರುವ ಈ ಪರಿಸರವನ್ನು ಯುಗ ಯುಗಗಳವರೆಗೂ ಉಳಿಸಬೇಕಿದೆ. ಜೀವ ರಾಶಿಗಳ ರಕ್ಷಣೆ ಪೋಷಣೆಗೆ ತನ್ನೆಲ್ಲಾವನ್ನು ನೀಡಿದ ಭೂಮಿ ಇಂದು ಬರಿದಾಗುತ್ತಿದೆ. ತನ್ನೊಡಲಲ್ಲಿ ಬೆಂಕಿಯ ಕೆಂಡವನ್ನೇ ಆವರಿಸಿದರೂ ನಮ್ಮನ್ನು ಇಂದಿಗೂ ತಂಪು...
ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ ನಿರ್ಮಾಣವಾಗಲಿದ್ದು ಈ ಹಿನ್ನೆಲೆಯಲ್ಲಿ ರಥ ನಿರ್ಮಾಣ ಕಾರ್ಯಕ್ಕೆ ಕಾಷ್ಟ ಶಿಲ್ಪಿಗೆ ವೀಳ್ಯ ಮುಹೂರ್ತವು ಜೂ.05 ಸೋಮವಾರದಂದು ಬೆಳಗ್ಗೆ ಗಂಟೆ 9.30ಕ್ಕೆ ನಡೆಯಲಿದೆ. ರಥ ನಿರ್ಮಾಣದ ಬಗ್ಗೆ ದೇವಸ್ಥಾನದಲ್ಲಿ ಊರ ಭಕ್ತಾದಿಗಳ ಪೂರ್ವಭಾವಿ ಸಭೆಯು ಇತ್ತೀಚೆಗೆ ನಡೆದಿತ್ತು. ಮಾ.23 ರಂದು ಪನ್ನೆಯಲ್ಲಿ ರಥ ನಿರ್ಮಾಣಕ್ಕೆ ದಾನವಾಗಿ ನೀಡಿದ...
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇವುಗಳ ಆಶ್ರಯದಲ್ಲಿ ಜೂ.14 ರಂದು ಅಪರಾಹ್ನ 2:00 ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ, ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳಿಗೆ ಸನ್ಮಾನ ಹಾಗೂ ನೂತನ ಶಾಸಕರಿಗೆ...
ಸುಳ್ಯದ ಜೂನಿಯರ್ ಕಾಲೇಜು ಬಳಿಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ಕ್ಷೇತ್ರದ ಪ್ರತಿಷ್ಠಾ ಮಹೋತ್ಸವ ಜೂ.10 ರಿಂದ ಆರಂಭಗೊಂಡು ಜೂ.12 ರವರೆಗೆ ನಡೆಯಲಿದೆ ಎಂದು ಕಸಬಾಮೂಲೆ ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಮುರಳಿ ಮಾವಂಜಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೆರಾಜೆಯ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ...
ಸುಳ್ಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಭರತ್ ಬಿ.ಎಂ. ರವರು ಪ್ರಭಾರ ವಹಿಸಿಕೊಂಡಿದ್ದಾರೆ.ಪುತ್ತೂರು ಜಿ.ಪಂ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಭರತ್ ಬಿ.ಎಂ.ರವರು ೨೦೧೬ರಲ್ಲಿ ಎ.ಇ. ಆಗಿ ಸರಕಾರಿ ಹುದ್ದೆಗೆ ನೇಮಕಗೊಂಡು ಚಿಕ್ಕಮಗಳೂರು ಕಡೂರು ತಾಲೂಕಿನಲ್ಲಿ ಸೇವೆ ಆರಂಭಿಸಿದರು. ೨೦೨೦ರಲ್ಲಿ ಎ.ಇ.ಇ. ಆಗಿ ಪದೋನ್ನತಿಗೊಂಡು ಪುತ್ತೂರು ಜಿ.ಪಂ. ಉಪವಿಭಾಗಕ್ಕೆ...
Loading posts...
All posts loaded
No more posts
