- Tuesday
- September 1st, 2026
ಗುತ್ತಿಗಾರು ಆಟೋ ರಿಕ್ಷಾ ನಿಲ್ದಾಣದ ಬಿ.ಯಂ.ಎಸ್. ಘಟಕದ ಚಾಲಕ ಸದಸ್ಯರಿಂದ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಈ ಸ್ವಚ್ಛತಾ ಶ್ರಮ ಸೇವೆಯಲ್ಲಿ ಬಿ.ಯಂ.ಎಸ್. ಸದಸ್ಯರಾದ ವಿಶ್ವನಾಥ ಚತ್ರಪ್ಪಾಡಿ, ಧರ್ಮಪಾಲ ಪಂಜಿಪಳ್ಳ, ಸತ್ಯನಾರಾಯಣ ಬಾಕಿಲ, ಉದಯ ಕುಮಾರ ಹಾಲೆಮಜಲು, ಪ್ರದೀಪ್ ಪುಲ್ಲಡ್ಕ, ಯತೀಶ ಪಾರೆಪ್ಪಾಡಿ, ತೀರ್ಥೇಶ್ ಪೈಕ, ಶಶಿಧರ ಕುಕ್ಕುಜೆ, ರವೀಂದ್ರ ಕೋಡಂಬು, ಜಯಪ್ರಕಾಶ್ ಕಡ್ಲಾರು, ಉಮೇಶ್ ಗೌರಿಗುಂಡಿ,...
ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ತಮ್ಮನಿಂದ ಅಣ್ಣ ಕೊಲೆಯಾದ ಘಟನೆ ಇಂದು ವರದಿಯಾಗಿದೆ. ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ. ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ...
ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2023-24ನೇ ಸಾಲಿನ 6 ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಫಾಯಿ ಕರ್ಮಚಾರಿ, ಸ್ಮಶಾನ ಕಾರ್ಮಿಕ, ದೇವದಾಸಿ, ಮ್ಯಾನುವಲ್ ಸ್ಕ್ಯಾವೆಂಜ ಸಮುದಾಯದ ಮಕ್ಕಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರವಾಗಿ ದಾಖಲಾತಿಯನ್ನು ನೀಡಲಾಗುವುದು. ವಸತಿ ಶಾಲೆಗಳಲ್ಲಿ ಉಚಿತ ಊಟ ವಸತಿಯೊಂದಿಗೆ ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಾಗ್ರಿಗಳು ಮೂಲಸೌಲಭ್ಯವನ್ನು ಒದಗಿಸಲಾಗುವುದು....
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಎಲಿಮಲೆ ಇವರನ್ನು ಆಯ್ಕೆ ಮಾಡಲಾಯಿತು. ಪುತ್ತೂರಿನಲ್ಲಿ ನಡೆದ ಜಿಲ್ಲಾ ಬೈಠಕ್ ನಲ್ಲಿ ಈ ಆಯ್ಕೆ ಮಾಡಲಾಯಿತು.ಇವರು ಸುಳ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ವಿ.ಹೆಚ್.ಪಿ ಬಜರಂಗದಳ ಸಂಘಟನೆಯಲ್ಲಿ ಸಕ್ರಿಯ ವಾಗಿದ್ದಾರೆ.
ದೇವಚಳ್ಳದ ಗ್ರಾಮದ ತಳೂರಿನ ಯುವಕನೋರ್ವ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ. ದೇವಚಳ್ಳ ಗ್ರಾಮದ ತಳೂರಿನ ಬಾಲಕೃಷ್ಣ ಎಂಬವರ ಪುತ್ರ ಹೇಮನಾಥ ಮೃತ ವ್ಯಕ್ತಿ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಪರವಾನಗಿ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕೇರಳ ನೋಂದಾವಣಿಯ ವಾಹನವನ್ನು ಅಡಗಟ್ಟಿ ವಶಕ್ಕೆ ಪಡೆದುಕೊಂಡ ಘಟನೆ ಇದೀಗ ಸುಳ್ಯದಲ್ಲಿ ವರದಿಯಾಗಿದೆ. ಮೂರು ಜಾನುವಾರುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಹೋಗುತ್ತಿರುವ ವಿಚಾರ ತಿಳಿದ ಪೊಲೀಸರು ಸುಳ್ಯದ ಜಾಲ್ಸೂರು ಬಳಿ ವಾಹನವನ್ನು ಅಡ್ಡಗಟ್ಟಿದ್ದು ಎರಡು ಜಾನುವಾರು ಹಾಗೂ ರತೀಶ್ ಎಂಬಾತನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ...
ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು, ಕೊಪ್ಪಡ್ಕದಲ್ಲಿ ತೋಟಗಳಿಗೆ ಆನೆ ದಾಳಿ ಮಾಡಿದ ಘಟನೆ ಜು.12 ರಂದು ರಾತ್ರಿ ನಡೆದಿದೆ.ಮುಳ್ಳುಬಾಗಿಲು ಸುರೇಂದ್ರ ಎಂಬುವವರ ತೋಟದಲ್ಲಿ ಬಾಳೆ ಗಿಡಗಳನ್ನು ಹಾಳುಗೆಡವಿದ್ದು ನಂತರ ಮಾಧವ ಕೊಪ್ಪಡ್ಕ ಎಂಬುವವರ ತೋಟಕ್ಕೆ ಬಂದ ಆನೆ ಅಲ್ಲಿ ಹಲಸಿನ ಹಣ್ಣುಗಳನ್ನು ತಿಂದು 4-5 ಅಡಿಕೆ ಗಿಡಗಳನ್ನು ಹಾಳುಮಾಡಿ ಗಿರಿಯಪ್ಪ ಕೊಪ್ಪಡ್ಕ, ಜಯಪ್ರಕಾಶ್ ಕಜ್ಜೋಡಿ, ನಾರಾಯಣ ಮುಳ್ಳುಬಾಗಿಲು,...
3 ದಿನಗಳ ಹಿಂದೆ ಹರಿಹರ ಪಲ್ಲತ್ತಡ್ಕ ಎಕ್ಸ್ ಚೇಂಜ್ ಬಳಿಯ ತೆಂಗಿನ ಮರಗಳನ್ನು ಹಾಳುಗೆಡವಿದ ಆನೆ ಮತ್ತೆಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು, ಕೊಪ್ಪಡ್ಕದಲ್ಲಿ ತೋಟಗಳಿಗೆ ಆನೆ ದಾಳಿ ಮಾಡಿದ ಘಟನೆ ಜು.12 ರಂದು ರಾತ್ರಿ ನಡೆದಿದೆ. ಮುಳ್ಳುಬಾಗಿಲು ಸುರೇಂದ್ರ ಎಂಬುವವರ ತೋಟದಲ್ಲಿ ಬಾಳೆ ಗಿಡಗಳನ್ನು ಹಾಳುಗೆಡವಿದ್ದು ನಂತರ ಮಾಧವ ಕೊಪ್ಪಡ್ಕ ಎಂಬುವವರ ತೋಟಕ್ಕೆ ಬಂದ ಆನೆ ಅಲ್ಲಿ...
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ನಿರ್ವಹಣೆ, ದಾರಿದೀಪ ಸಮಸ್ಯೆ ಕುಡಿಯುವ ನೀರಿನ ಪೈಪ್ ಲೈನ್ ಸಮಸ್ಯೆ, ಕೇರ್ಪಳದ ಹಿಂದೂ ರುಧ್ರಭೂಮಿ ನಿರ್ವಹಣೆ, ಪುರಭವನ ನಿರ್ವಹಣೆ, ಸಾರ್ವಜನಿಕ ಶೌಚಾಲಯ ಶುಚಿತ್ವ, ಮಳೆಗಾಲದ ಚರಂಡಿ ಸ್ವಚ್ಛತೆ ಸೇರಿದಂತೆ ತುರ್ತು ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಸುಳ್ಯದ ಕಾಂಗ್ರೆಸ್ ಮುಖಂಡರಾದ ಮಾಜಿ ನಗರ...
ಸುಳ್ಯ ತಾಲೂಕಿನಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಆಚರಣೆ ಜು.19 ರಂದು ಬಂಟರ ಭವನ ಕೇರ್ಪಳ, ಸುಳ್ಯ ಇಲ್ಲಿ ನಡೆಯಲಿದ್ದು ಈ ಪ್ರಯುಕ್ತ ರಾಜ್ಯದ ವಿವಿಧ ಕಡೆ ಕಾರ್ಯನಿರ್ವಹಿಸುತ್ತಿರುವ ಸುಳ್ಯದ ಪತ್ರಕರ್ತರ ಸ್ನೇಹ ಸಂಗಮ ಸಂಜೆ 3ರಿಂದ ನಡೆಯಲಿದೆ. ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಪ್ರೆಸ್ ಕ್ಲಬ್...
Loading posts...
All posts loaded
No more posts
