- Tuesday
- September 1st, 2026
ಅಜ್ಜಾವರ ಗ್ರಾಮದ ಕಾಂತಮಂಗಲ ಪ್ರಾಥಮಿಕ ಶಾಲೆಯಲ್ಲಿ ಅಪರಿಚಿತ ವ್ಯಕ್ತಿ ಅನಾರೋಗ್ಯದಿಂದ ಇರುವುದನ್ನು ಗಮನಿಸಿದ ಸ್ಥಳೀಯರು ಪ್ರಗತಿ ಆ್ಯಬುಲೆನ್ಸ್ ಅಚ್ಚುನವರಿಗೆ ಮಾಹಿತಿ, ಅವರ ಸಹಕಾರದಿಂದ ಅಂಬ್ಯುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಹೆಸರು ಪದ್ಮನಾಭ ಎಂದು ತಿಳಿದುಬಂದಿದ್ದು, ಹೆಚ್ಚಿನ ವಿವರ ಲಭ್ಯವಾಗಿಲ್ಲ. ಅವರ ಮನೆಯವರು ಅಥವಾ ವಾರಿಸುದಾರರು ಯಾರಾದರೂ ಇದ್ದರೇ ಆಸ್ಪತ್ರೆಗೆ ಆಗಮಿಸುವಂತೆ ವಿನಂತಿಸಲಾಗಿದೆ.
ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ಗಳ ಮುಂದಿನ ಎರಡೂವರೆ ವರ್ಷಗಳ ಅಧ್ಯಕ್ಷ ಉಪಾಧ್ಯಕ್ಷ ರ ಆಯ್ಕೆಗಾಗಿ ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಬೆಳ್ಳಾರೆ,ಪೆರುವಾಜೆ ಮತ್ತು ಕೊಡಿಯಾಲ ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ. ಕೆ,ಅಮರಮೂಡ್ನೂರು, ಬಾಳಿಲ ಹಾಗೂ ಕಳಂಜ...
ಬರಹ : ಡಾ| ಮುರಲೀ ಮೋಹನ್ ಚೂಂತಾರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ ಜ್ಯೋತಿಯಲ್ಲಿ ಮೊಂಬತ್ತಿ ಹಚ್ಚಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ....
ಅತೀ ಹೆಚ್ಚುಮಳೆಯಾದ ಪ್ರದೇಶದಲ್ಲಿ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಎಂದು ಜು.25 ರಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ವರದಿ ಮಾಡಿದೆ. ಮಂಡೆಕೋಲಿನಲ್ಲಿ 217 ಮಿ.ಮೀ, ಅರಂತೋಡು ಗ್ರಾಮದಲ್ಲಿ 185ಮಿ.ಮೀ ಹಾಗೂ ಬೆಳ್ಳಾರೆ ಯಲ್ಲಿ183.5 ಮಿ.ಮೀ. ಮಳೆಯಾಗಿದೆ.
ಸುಳ್ಯದ ರಥಬೀದಿಯ ಬಳಿಯಲ್ಲಿ ಇಂದು ಸಂಜೆ ಆಲ್ಟೊ ಕಾರೊಂದು ರಸ್ತೆ ಬದಿಯ ಗುಂಡಿ ತಪ್ಪಿಸಲು ಹೋಗಿ ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಪಾದಚಾರಿಯನ್ನು ಕಾರಿನ ಚಾಲಕ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ರಸ್ತೆ ಬದಿ ಉಂಟಾಗಿರುವ ಗುಂಡಿಯನ್ನು ನಗರ ಪಂಚಾಯತ್ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿರುವುದೇ ಈ ಅಪಘಾತ ಸಂಭವಿಸಲು ಕಾರಣವೆಂದು ಜನರಾಡಿಕೊಳ್ಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಪ.ಪೂ ಕಾಲೇಜುಗಳಿಗೆ ಜು.26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಹಿರಿಯ ಪತ್ರಕರ್ತೆ, ಲೇಖಕಿ, ಅನುವಾದಕಿ ಚಂದ್ರಾವತಿ ಬಡ್ಡಡ್ಕ ಅವರ “ಲಘುಬಿಘು” ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ 2022ನೇ ಸಾಲಿನ “ನುಗ್ಗೇಹಳ್ಳಿ ಪಂಕಜ ದತ್ತಿ ಪ್ರಶಸ್ತಿ” ಲಭಿಸಿದ್ದು, ಜು.23 ರಂದು ಬೆಂಗಳೂರಿನ ಜೆ.ಸಿ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಂದ್ರಾವತಿ ಬಡ್ಡಡ್ಕ ಅವರು ಪ್ರಶಸ್ತಿ ಸ್ವೀಕರಿಸಿದರು.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರರು, ಮಾಜಿ ಸಚಿವೆ ರಾಣಿ...
ಜು.23ರಂದು ಶ್ರೀ ಸಾಯಿ ಕಲ್ಯಾಣ ಮಂಟಪ ಬಾಗಲಗುಂಟೆ ಬೆಂಗಳೂರು.ಕರ್ನಾಟಕ ಜನಸ್ಪಂದನ ಟ್ರಸ್ಟ್ (ರಿ) ಕರ್ನಾಟಕ ರಾಜ್ಯ ಸಂಸ್ಥೆ ಟಿ.ದಾಸರಹಳ್ಳಿ ಬೆಂಗಳೂರು, ಹನುಮಂತಪ್ಪ ಎಸ್ ಮೇಡೆಗಾರ ರಾಜ್ಯಾಧ್ಯಕ್ಷರು ಇವರು ಹಮ್ಮಿಕೊಂಡ ಟ್ರಸ್ಟಿನ 6 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ...
ಮಳೆಯಿಂದ ಹಾನಿಗೊಂಡ ಕೊಲ್ಲಮೊಗ್ರ ಹಾಗೂ ಹರಿಹರ ಪ್ರದೇಶಗಳಿಗೆ ಪುತ್ತೂರು ಸಹಾಯಕ ಆಯುಕ್ತರು ಗಿರೀಶ್ ನಂದನ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಪ್ರವಾಹ ಪರಿಸ್ಥಿತಿಯ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಸಮಸ್ಯೆಗಳ ಬಗ್ಗೆ ವಿವರ ನೀಡಿದರು. ಈ ಭಾಗದ ಜನರಿಗೆ ಕಳೆದ ಮೂರು ದಿನಗಳಿಂದ ನೆಟ್ವರ್ಕ್ ಇಲ್ಲದೆ ಪರದಾಡುತ್ತಿರುವ...
Loading posts...
All posts loaded
No more posts
