Ad Widget

ಪೆರಾಜೆ :ದ್ವಿಚಕ್ರ ವಾಹನ ಕಳ್ಳತನಕ್ಕೆ ಯತ್ನ

ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು. ಪೆರಾಜೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿ ಚಕ್ರ ವಾಹನವನ್ನು ಕಳ್ಳನೊಬ್ಬ ಕದಿಯಲು ಯತ್ನಿ ಸಿದ್ದು ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನ 20 ರಂದು ರಾತ್ರಿ ಸುಮಾರು 10 ಘಂಟೆಗೆ ನಡೆದಿದೆ. ಪೆರಾಜೆ ಮಸೀದಿ ಬಳಿ ಮುಖ್ಯ ರಸ್ತೆಯ ಬದಿ ಇರುವ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ...

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಾಹನ ಪಾರ್ಕಿಂಗ್ ನ ಬಗೆಗಿನ ಪರ-ವಿರೋಧ ಆರೋಪಗಳಿಗೆ ಮಾತುಕತೆ ಮೂಲಕ ಇತ್ಯರ್ಥ

ವೈದ್ಯಾಧಿಕಾರಿ ಡಾ. ಕರುಣಾಕರ ರವರಿಂದ ಪತ್ರಿಕಾ ಪ್ರಕಟಣೆ ಸುಳ್ಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ವಾಹನ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿ ಆಂಬುಲೆನ್ಸ್ ಚಾಲಕರ ಮತ್ತು ಆಸ್ಪತ್ರೆಯ ವೈದ್ಯರ ನಡುವೆ ನಡೆಯುತ್ತಿದ್ದ ಪರ ವಿರೋಧ ಆರೋಪಗಳನ್ನು ನವಂಬರ್ 21ರಂದು ವೈದ್ಯಾಧಿಕಾರಿ ಡಾ. ಕರುಣಾಕರ ರವರ ನೇತೃತ್ವದಲ್ಲಿ ಮಾತುಕತೆ ನಡೆದು ವಿಷಯವನ್ನು ಇತ್ಯರ್ಥಪಡಿಸಿರುವುದಾಗಿ ವೈದ್ಯರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ....
Ad Widget

ದಾಖಲೆ ಪತ್ರಗಳು ಬಿದ್ದು ಸಿಕ್ಕಿದೆ

ಸುಳ್ಯದ ಕಾಂತಮಂಗಲ ಸಮೀಪ ದಾಖಲೆಪತ್ರಗಳು ಬಿದ್ದು ಸಿಕ್ಕಿದೆ ಕಳೆದುಕೊಂಡವರು 9483312579 ಈ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದ್ದಾರೆ

ದೇವರಕೊಲ್ಲಿ ವಾಹನದಡಿಗೆ ಬಿದ್ದು ಚಿರತೆ ಮರಿ ಸಾವು .

ಸಂಪಾಜೆ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಎಂಬಲ್ಲಿ ಇದೀಗ ಸುಮಾರು 9 ಗಂಟೆಯ ವೇಳೆಗೆ ಚಿರತೆ ಮರಿಯೊಂದು ಕಾಡಿನಿಂದ ರಸ್ತೆ ಮಾರ್ಗವಾಗಿ ದಾಟುವ ಸಂದರ್ಭದಲ್ಲಿ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ವಾನಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ . ಸದ್ಯ ಅರಣ್ಯ ಇಲಾಖೆಗೆ ಮಾಹಿತಿ ರವಾನೆಯಾಗಿದ್ದು ಇದರ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಗಾಂಧಿನಗರ : ತಲವಾರು ಹಿಡಿದು ಗಲಾಟೆ – ಆತಂಕ ಸೃಷ್ಟಿಸಿದ ವ್ಯಕ್ತಿಗಳ ಪತ್ತೆಗಿಳಿದ ಪೋಲೀಸರು

ಗಾಂಧಿನಗರ ವೈನ್ ಶಾಪ್ ಬಳಿ ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು ಕೆಲವು ಹೊತ್ತು ಅವರೊಳಗೆ ಗಲಾಟೆ ಮಾಡಿಕೊಂಡು ಆತಂಕ ಸೃಷ್ಟಿಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. https://youtube.com/shorts/FkSqp5uM9M0?si=5PCLqgZn1kacbDkN ದ್ವಿ ಚಕ್ರ ವಾಹನದಲ್ಲಿ ಬಂದ ಇಬ್ಬರು ಚೀಲದಿಂದ ತಲವಾ‌ರ್ ರೀತಿಯ ಕತ್ತಿಯನ್ನು ಹೊರಗೆ ತೆಗೆದು ಮತ್ತೆ ಚೀಲದಲ್ಲಿ ಇರಿಸುವ ದೃಶ್ಯ ಕಂಡು ಬರುತ್ತಿದೆ. ಸ್ವಲ್ಪ ಮುಂದಕ್ಕೆ...

ಪುಳಿಕುಕ್ಕು : ಏಳ್ವೆರ್ ದೈವಸ್ಥಾನದ ಪುನರ್ ಪ್ರತಿಷ್ಠೆ

ಪುಳಿಕುಕ್ಕು ಗಿರಿಯಮಜಲು ಕುಟುಂಬಕ್ಕೆ ಸಂಬಂಧಿಸಿದ ಏಳ್ವೆರ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಮುಗಿದು ನ.20 ರಂದು ಪುನರ್ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ತಂತ್ರಿಗಳಾದ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.‌ ಈ ಸಂದರ್ಭದಲ್ಲಿ ಕುಟುಂಬದ ಪ್ರಮುಖರಾದ ಕುಶಾಲಪ್ಪ ಗೌಡ ಹೊಳೆಕೆರೆ, ಶಿವಪ್ಪ ಗಿರಿಯಮಜಲು, ತಿಮ್ಮಪ್ಪ ಪೊಯ್ಯಮಜಲು, ಪರಮೇಶ್ವರ ಪುಳಿಕುಕ್ಕು ಹಾಗೂ ಕುಟುಂಬಸ್ಥರು, ಊರವರು...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು: ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

ಅಧ್ಯಕ್ಷರಾಗಿ ಹೊನ್ನಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಗೀತಾ ಕಟ್ಟತ್ತಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇಲ್ಲಿ ಇತ್ತೀಚೆಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಶ್ರೀ ಹೊನ್ನಪ್ಪ ನಾಯ್ಕ ಉದ್ದಂಪಾಡಿ , ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಕಟ್ಟತ್ತಾರು ಆಯ್ಕೆಯಾದರು. ಸದಸ್ಯರಾಗಿ ಶ್ರೀಮತಿ ಲೀಲಾವತಿ, ಶ್ರೀ ರಮೇಶ, ಶ್ರೀಮತಿ ಕುಸುಮ ಶ್ರೀಮತಿ ಪ್ರೇಮಾ ಮುಚ್ಚಿನಡ್ಕ...

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ

ಸುಬ್ರಹ್ಮಣ್ಯ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಗೆ ಈ ವರ್ಷ ರಾಷ್ಟ್ರ ಅಧ್ಯಕ್ಷರಾದ ಚಿತ್ರ ಕುಮಾರ್ ಅವರು ಮಂಗಳವಾರ ಅಧಿಕೃತ ಭೇಟಿ ನೀಡಿದರು.ಆರಂಭದಲ್ಲಿ ರಾಷ್ಟ್ರಾಧ್ಯಕ್ಷ ರನ್ನು ಕುಮಾರಧಾರ ದ್ವಾರದ ಬಳಿ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ನ ಅಧ್ಯಕ್ಷ ಡಾ.ರವಿಕಕ್ಕೆ ಪದವು, ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಸದಸ್ಯರುಗಳಾದ ಗೋಪಾಲ ಎಣ್ಣೆ...

ಕಳಂಜ-ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ 71ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು, ಸಹಕಾರ ಇಲಾಖೆ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ನಿ., ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಇತರ ಸಹಕಾರಿ ಸಂಘಗಳ ಸಹಕಾರದೊಂದಿಗೆ...

ಒಸಾಟ್ ಸಂಸ್ಥೆ ವತಿಯಿಂದ 1 ಕೋಟಿ ರೂ ವೆಚ್ಚದಲ್ಲಿ ಸುಳ್ಯ ಸ.ಪ.ಪೂ. ಕಾಲೇಜು ಕೊಠಡಿ ಮತ್ತು ನೂತನ ಸಭಾಭವನಕ್ಕೆ ಶಿಲಾನ್ಯಾಸ

ಸಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಅಮೇರಿಕಾದ ಒಸಾಟ್ ಸಂಸ್ಥೆ ವತಿಯಿಂದ ರೂ.1 ಕೋಟಿ ವೆಚ್ಚದಲ್ಲಿ ನಾಲ್ಕು ಕೊಠಡಿ ನಿರ್ಮಾಣವಾಗಲಿದ್ದು, ಅದರ ಶಿಲಾನ್ಯಾಸ ಕಾರ್ಯಕ್ರಮ ನ.20ರಂದು ನಡೆಯಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೂತನ ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.ಪುರೋಹಿತ ನಾಗರಾಜ ಭಟ್ ರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು, ಅಕಾಡೆಮಿ...
Loading posts...

All posts loaded

No more posts

error: Content is protected !!