
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಗುತ್ತಿಗಾರು ವಲಯದ ‘ಮಡಪ್ಪಾಡಿ ಘಟಕ’ವು ಇಂದು ಮಡಪ್ಪಾಡಿಯ ‘ಯುವಕ ಮಂಡಲ’ದಲ್ಲಿ ರಾಷ್ಟ್ರಿಯ ಸ್ವಯಂಸೇವಕ ಸಂಘದ ಗುತ್ತಿಗಾರು ಮಂಡಲ ಕಾರ್ಯವಾಹಕರಾದ ಕರುಣಾಕರ ಪಾರೆಪ್ಪಾಡಿ ಇವರ ಸಮ್ಮುಖದಲ್ಲಿ ರಚನೆಗೊಂಡಿತು . ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಲೋಕಪ್ಪ ಶೀರಡ್ಕ, ಅಧ್ಯಕ್ಷರಾಗಿ ಹೇಮಕುಮಾರ್ ಹಾಡಿಕಲ್ಲು, ಉಪಾಧ್ಯಕ್ಷರಾಗಿ ವೇಣುಗೋಪಾಲ ಶೀರಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಶೀರಡ್ಕ, ಕಾರ್ಯದರ್ಶಿಗಳಾಗಿ ಪ್ರೇಕ್ಷಿತ್ ಬೊಮ್ಮೆಟ್ಟಿ, ವಿನ್ಯಾಸ್ ಪಾರೆಮಜಲು, ಸಂಪರ್ಕ ಪ್ರಮುಖರಾಗಿ ಸಚಿನ್ ಬಳ್ಳಡ್ಕ, ಧನ್ಯಕುಮಾರ್, ಭರತ್ ಕೇವಳ, ಪ್ರಚಾರ ಪ್ರಮುಖರಾಗಿ ದುಷ್ಯಂತ್ ಶೀರಡ್ಕ, ಹಿಂದೂ ಯುವವಾಹಿನಿ ಪ್ರಮುಖರಾಗಿ ಸುಯೋಗ್ ವಾಲ್ತಾಜೆ, ಮಾತೃಸುರಕ್ಷಾ ಪ್ರಮುಖರಾಗಿ ವಿನೋದ್ ಪೂಂಬಾಡಿ. ಹಾಗೂ ಸುಮಂತ್ ಶೀರಡ್ಕ ವಲಯ ಸಮಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಮಡಪ್ಪಾಡಿ, ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೊಡಿಯಾಲ, ಪ್ರಚಾರ ಪ್ರಮುಖ್ ಚಂದು ಕೊಡಿಯಾಲ, ಹಿಂದೂ ಜಾಗರಣ ವೇದಿಕೆ ಪ್ರಮುಖ್ ಸತೀಶ್ ಮೂಕಮಲೆ ಹಾಗೂ ಯುವಕ ಮಂಡಲ ಅಧ್ಯಕ್ಷರಾದ ಲೋಹಿತ್ ಬಾಲಿಕಳ, ಕಾರ್ಯದರ್ಶಿ ಲೋಹಿತ್ ಬಳ್ಳಡ್ಕ ಉಪಸ್ಥಿತರಿದ್ದರು. ದುಷ್ಯಂತ್ ಶೀರಡ್ಕ ಸ್ವಾಗತಿಸಿ ಜಯಂತ್ ಮಡಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರುಣಾಕರ ಪಾರೆಪ್ಪಾಡಿ ನೂತನ ಘಟಕಕ್ಕೆ ಶುಭಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.