ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರನ್ನು ಬಂಧಿಸಿ ಅವರ ಮೇಲೆ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ಆಶ್ರಯದಲ್ಲಿ ಸಹಿ ಸಂಗ್ರಹ ಅಭಿಯಾನ ಇಂದು ಸುಳ್ಯದಲ್ಲಿ ನಡೆಯಿತು.
ಎಲ್.ಡಿ. ಬ್ಯಾಂಕ್ ಎದುರುಗಡೆ ಮುಖ್ಯ ರಸ್ತೆಯ ಬದಿಯಲ್ಲಿ ಬೋರ್ಡ್ ಅಳವಡಿಸಿ ಅದಕ್ಕೆ ಸಾರ್ವಜನಿಕ ರಿಂದ ಸಹಿ ಸಂಗ್ರಹ ನಡೆಯಿತು. ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದರು.
ಎ.ಬಿ.ವಿ.ಪಿ. ತಾಲೂಕು ಸಂಚಾಲಯ ಧನ್ಯರಾಜ್ ಕಾಪುಮಲೆ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಕು.ಭವ್ಯ, ನಗರ ಕಾರ್ಯದರ್ಶಿ ಭವಿತೇಶ್, ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ರಮೇಶ್ ಚಂದ್ರ, ಎನ್.ಎ. ರಾಮಚಂದ್ರ, ಕಿಶನ್ ಜಬಳೆ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ನ.ಪಂ.ಸದಸ್ಯ ವಿನಯ್ ಕಂದಡ್ಕ, ಶ್ರೀಮತಿ ಯಶೋದ ರಾಮಚಂದ್ರ, ಐ.ಬಿ.ಚಂದ್ರಶೇಖರ್, ಗೋಪಾಲಕೃಷ್ಣ ಕರೋಡಿ, ನ್ಯಾಯವಾದಿ ಜಗದೀಶ್ ಡಿ.ಪಿ. ಮತ್ತಿತರರು ಉಪಸ್ಥಿತರಿದ್ದರು.
- Sunday
- November 24th, 2024