ದಿನಾಂಕ 05/02/2020 ರಂದು ಸಂಜೆ 6 ಗಂಟೆಗೆ ಬೆಳ್ಳಾರೆ ಗ್ರಾಮದ ಬೋಳಿಯಮೂಲೆ ಮುತ್ತುಲಿಂಗಂ ಎಂಬುವರನ್ನು ಅದೇ ಗ್ರಾಮದ ಐವರ್ನಾಡು ಸಿ ಕೂಪಿನ ಎಸ್.ರಮೇಶ್ ಎಂಬಾತನು ಸೌದೆ ಮರದ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಮೃತನ ಮಗಳು ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಬಳಿಕ ಆರೋಪಿಯನ್ನು ಬೆಳ್ಳಾರೆ ಪೊಲೀಸರು ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿತ್ತು. ತದನಂತರ ತನಿಖೆಯನ್ನು ಪೂರೈಸಿದ ಪೊಲೀಸರು ಆರೋಪಿ ರಮೇಶನ ಮೇಲೆ ಕೊಲೆ ಆರೋಪದಡಿಯಲ್ಲಿ ದೋಷಾರೋಪಣಾ ಪಟ್ಟಿಯನ್ನು ಆರೋಪಿಯ ವಿರುದ್ಧ ಸಲ್ಲಿಸಲಾಗಿತ್ತು.
ಈ ಮದ್ಯೆ ಆರೋಪಿಯ ಬಿಡುಗಡೆಗಾಗಿ ಪುತ್ತೂರು ಐದನೇ ಹೆಚ್ಚುವರಿ ಸೆಶನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು. ಸದ್ರಿಯ ಅರ್ಜಿಯ ಮೇಲೆ ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಆರೋಪಿ ರಮೇಶನಿಗೆ ಮಾನ್ಯ ಪುತ್ತೂರು ಐದನೇ ಹೆಚ್ಚುವರಿ ಸೆಶನ್ ನ್ಯಾಯಾಲಯದ ನ್ಯಾಯದಿಶರಾದ ಶ್ರೀ ರುಡಾಲ್ಫ್ ಪಿರೇರರವರು ಆರೋಪಿಯ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಶರ್ತ ಬದ್ಧ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡುವಂತೆ ದಿನಾಂಕ 09/09/2020 ರಂದು ಆದೇಶವನ್ನು ಹೊರಡಿಸಿರುತ್ತಾರೆ.
ಆರೋಪಿಯ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಶ್ರೀ ಎಂ. ವೆಂಕಪ್ಪ ಗೌಡ, ಶ್ರಿಮತಿ ಚಂಪಾ ವಿ. ಗೌಡ ಮತ್ತು ರಾಜೇಶ್ ಬಿ.ಜಿ. ವಾದಿಸಿರುತ್ತಾರೆ.