ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುತ್ಯ, ಮಂಡೆಕೋಲು ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಅಮೃತವಲ್ಲಿಯವರು ಪದೋನ್ನತಿ ಹೊಂದಿದ್ದು, ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿಗೆ ವಿಜ್ಞಾನ ಶಿಕ್ಷಕಿಯಾಗಿ ಭಡ್ತಿ ಹೊಂದಿದ್ದಾರೆ. ಸುಮಾರು 12 ವರ್ಷಗಳ ಸೇವೆಯ ಬಳಿಕ ಇದೀಗ ಪ್ರೌಢಶಾಲೆಗೆ ಭಡ್ತಿಗೊಂಡಿದ್ದಾರೆ. 11.06.2008 ರಂದು ಸ.ಕಿ.ಪ್ರಾ. ಶಾಲೆ ಪುತ್ಯ ಮಂಡೆಕೋಲು ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಆರಂಭಿಸಿದ ಇವರು ಅತಿಥಿ ಶಿಕ್ಷಕಿ ಹಾಗೂ ಗೌರವ ಶಿಕ್ಷಕಿಯವರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಶ್ರಮಿಸಿದರು. 2017 ರಲ್ಲಿ ಜರುಗಿದ ಪುತ್ಯ ಶಾಲಾ ಸುವರ್ಣ ಮಹೋತ್ಸವವು ಎಸ್.ಡಿ.ಎಂ.ಸಿ ಹಾಗೂ ಊರವರ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯುವಲ್ಲಿಯೂ ಇವರ ಪಾತ್ರ ಶ್ಲಾಘನೀಯವಾದುದು.
ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ‘ವರ್ಗ’ ಮನೆ ಶಿಕ್ಷಕ ದಂಪತಿಗಳಾದ ಶ್ರೀ ಜಗನ್ನಾಥ.ಆರ್ ಪೂಜಾರಿ ಹಾಗೂ ಶ್ರೀಮತಿ ಮಲ್ಲಿಕಾ.ಪಿ.ಎಸ್ ರವರ ಪುತ್ರಿಯಾಗಿರುವ ಇವರು ಎಂ.ಎಸ್ಸಿ ಬಿ.ಎಡ್ ಪದವೀಧರೆ. ಮಂಗಳೂರಿನ ಕಾವೂರು ನಿವಾಸಿಯಾಗಿರುವ ಇವರು ಶ್ರೀ ನಾರಾಯಣ ಗುರು ಐ.ಟಿ.ಐ ಕಾಲೇಜು ಕುದ್ರೋಳಿ ಮಂಗಳೂರಿನಲ್ಲಿ ಉಪನ್ಯಾಸಕರಾಗಿರುವ ಶ್ರೀ ಚಂದ್ರಹಾಸರವರ ಪತ್ನಿ. ಇವರಿಗೆ ಬೇಬಿ| ತ್ರಿಷಾ.ಸಿ.ಕೆ ಎಂಬ ಮಗಳಿದ್ದು, ಸಹೋದರ ಕುವೈತ್ ನಲ್ಲಿ ಅನಸ್ತೇಶಿಯಾ ಟೆಕ್ನೀಶನ್ ಆಗಿರುವ ಯಶ್ಪಾಲ್.ಜೆ.ಪೂಜಾರಿ ಹಾಗೂ ಸಹೋದರಿ ಬೆಳ್ತಂಗಡಿಯ ನಿಶ್ಮಿತಾ ಸುಧೀರ್ ಸುವರ್ಣ ಗೃಹಿಣಿಯಾಗಿದ್ದಾರೆ.
- Saturday
- November 2nd, 2024