ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಪ್ಲಾಸ್ಮಾ ದಾನಿಗಳ ಮಾದರಿ ರಕ್ತಸಂಗ್ರಹ ಇಂದು ಕೈಕಂಬದಲ್ಲಿ ನಡೆದ ವಿಖಾಯ ರಕ್ತದಾನಿ ಬಳಗದ ರಕ್ತದಾನ ಶಿಬಿರದಲ್ಲಿ ಮಾಡಲಾಯಿತು. ಹದಿನಾಲ್ಕು ಜನರ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದಾಗ ಹನ್ನೆರಡು ಜನರ ರಕ್ತವನ್ನು ಪ್ಲಾಸ್ಮಾ ದಾನಕ್ಕಾಗಿ ಪಡೆಯಬಹುದು ಎಂದು ತಿಳಿದುಬಂತು. ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗದ ವತಿಯಿಂದ ಜಿಲ್ಲೆಯಲ್ಲಿ ರಕ್ತದಾನ ಅಭಿಯಾನ ನಡೆಯುತ್ತಿದ್ದು
ಸುಮಾರು ಎರಡು ಸಾವಿರದ ಐನೂರು ಯೂನಿಟ್ ರಕ್ತ ಸಂಗ್ರಹದ ಗುರಿ ಹೊಂದಲಾಗಿದೆ. ಇದೇ ತಿಂಗಳು 26 ರಂದು ಸುಳ್ಯ ಆರಂತೋಡಿನಲ್ಲಿ ನಡೆಯಲಿರುವ ರಕ್ತದಾನ ಶಿಬಿರದಲ್ಲಿ ಸುಳ್ಯ ಹಾಗೂ ಮಡಿಕೇರಿ ಮೂಲದ ಸುಮಾರು 50 ಜನ ಪ್ಲಾಸ್ಮಾ ದಾನಿಗಳ ಮಾದರಿ ರಕ್ತ ಸಂಗ್ರಹ ನಡೆಯಲಿದೆ ಎಂದು ಜಿಲ್ಲಾ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ(9686947071) ಪ್ರಕಟಣೆಯಲ್ಲಿ ತಿಳಿಸಿದ್ದು ದಾನಿಗಳು ಸಹಕರಿಸುವಂತೆ ಕೋರಿದ್ದಾರೆ.
- Friday
- November 1st, 2024