Ad Widget

ಡ್ರಗ್ಸ್ ಮುಕ್ತ ಭಾರತ ನಮ್ಮದಾಗಲಿ

ಬಾಲಿವುಡ್ ಅಂಗಳದಲ್ಲಿ ನಟ ಸುಶಾಂತ್ ಸಿಂಗ್ ಪ್ರಕರಣವು ಒಂದೊಂದೇ ಕೂತೂಹಲಕಾರೀ ತಿರುವುಗಳು ಪಡೆದುಕೊಳ್ಳುತ್ತಿದ್ದಂತೆ ದೇಶಕ್ಕೆ ಕಂಟಕವಾಗಿರುವ ಮಾದಕ ವಸ್ತುಗಳ ಜಾಲ ಬೆಳಕಿಗೆ ಬಂದಿದೆ. ಆದರೆ ಈಗ ಚಂದನವನದಲ್ಲೂ ಡ್ರಗ್ಸ್ ಮಾಫಿಯಾದ ಗುಟ್ಟು ಹೊರ ಬರುತ್ತಿದೆ. ಕನ್ನಡದ ನಟ ನಟಿಯರು ಮಾದಕ ವಸ್ತುಗಳ ದಾಸರಾಗಿರುವುದು ಅಚ್ಚರಿಯನ್ನು ಉಂಟು ಮಾಡಿದೆ.

. . . . . .

ಬೆಂಗಳೂರಿಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಕೊಂಡಿ ಇರುವುದು ಬಹಿರಂಗವಾಗುತ್ತಿದ್ದಂತೆ ಸರಕಾರ ಮತ್ತು ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾದ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗೂ ಈ ಜಾಲವನ್ನು ಎಳೆ ಎಳೆಯಾಗಿ ಬಿಡಿಸಲು ಶ್ರಮ ಪಡುತ್ತಿದ್ದಾರೆ. ಆದರೆ ಈ ನಡುವೆ ಅನೇಕರಿಂದ ಒತ್ತಡ ಬರುತ್ತಿರುವುದೂ ವರದಿಯಾಗುತ್ತಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತಡ ನೀಡುವವರನ್ನೂ ವಿಚಾರಣೆಗೆ ಒಳಪಡಿಸಬೇಕು. ಅವರಿಗೂ ಡ್ರಗ್ಸ್ ಮಾಫಿಯಕ್ಕೂ ನಂಟು ಇದ್ದರೂ ಇರಬಹುದು. ಅಂಥವರ ವಿಚಾರಣೆ ನಡೆಸುವುದರಿಂದ ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್ ಗಳು ಅರೆಸ್ಟ್ ಆಗೋದಂತೂ ಪಕ್ಕಾ.

ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಸಿಕೊಂಡಿರುವ ಯಾರೇ ಆಗಲಿ ಕಾನೂನಿಗೆ ಶರಣಾಗತಿ ಆಗಲೇ ಬೇಕು. ವಿದ್ಯಾರ್ಥಿಗಳು ಹಾಗೂ ಯುವಜನರು ಮಾದಕ ವ್ಯಸನಿಗಳಾಗಲು ಕಾರಣರಾಗಿರುವವರು ಶಿಕ್ಷೆಯನ್ನು ಅನುಭವಿಸಲೇ ಬೇಕು. ವಿದ್ಯಾರ್ಥಿಗಳು, ಯುವಜನರು ಮಾತ್ರವಲ್ಲದೇ ಪುಟಾಣಿ ಮಕ್ಕಳಿಗೂ ಚಾಕಲೇಟ್, ಐಸ್ ಕ್ರೀಂಗಳಲ್ಲಿ ಡ್ರಗ್ಸ್ ಸವರಿ, ಸೇರಿಸಿ ನೀಡಲಾಗುತ್ತಿದೆ ಎಂಬ ವಿಚಾರವೂ ಹೊರಬಿದ್ದಿದೆ. ಹೀಗಾಗಿ ಮಕ್ಕಳ ಮತ್ತು ಯುವಜನರ ಭವಿಷ್ಯಕ್ಕೆ ಮಾರಕವಾಗಿರುವ ಮಾದಕ ವಸ್ತುಗಳ ಕಿಂಗ್ ಪಿನ್ ಗಳ ಅಸಲಿ ರೂಪವನ್ನು ಬಯಲು ಮಾಡಬೇಕು.

ಅಕ್ರಮ ಮಾದಕ ವಸ್ತುಗಳ ಬಳಕೆ ಸಂಪೂರ್ಣವಾಗಿ ನಿಷೇಧವಾಗಬೇಕು. ಡ್ರಗ್ಸ್ ಜಾಲದಿಂದಾಗಿ ಯಾರ ಭವಿಷ್ಯವೂ ಕಮರುವುದು ಬೇಡ. ಆದ್ದರಿಂದ ಡ್ರಗ್ಸ್ ಮುಕ್ತ ಭಾರತದ ನಿರ್ಮಾಣಕ್ಕೆ ಎಲ್ಲರೂ ಬೆಂಬಲಿಸೋಣ. ಮಾದಕ ದ್ರವ್ಯಗಳನ್ನು ಬಳಸದೇ, ಬಳಸುವವರಿಗೆ ಅರಿವು ಮೂಡಿಸಿ ಆ ಚಟದಿಂದ ದೂರ ಮಾಡಲು ಪ್ರಯತ್ನಿಸೋಣ.

– ಸೌಜನ್ಯ.ಬಿ.ಎಂ.ಕೆಯ್ಯೂರು.
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು ಪುತ್ತೂರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!