Ad Widget

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆಯಿಂದ (ಸೆ.14) ಸೇವೆಗಳು ಆರಂಭ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇರಿದಂತೆ ಇತರ ಸೇವೆಗಳು ಸೆ .14 ರಿಂದ ಸರ್ಕಾರದ ಮಾರ್ಗಸೂಚಿಯಂತೆ ನಡೆಯಲಿವೆ . ಸೇವಾರ್ಥಿಗಳಿಗೆ ಮಾತ್ರ ಭೋಜನ ಪ್ರಸಾದ ವಿತರಣೆ ಯಾಗಲಿದೆ . ಬೆಳಗ್ಗೆ 6.30 ರಿಂದ11.30 ಮಧ್ಯಾಹ್ನ 12.15 ರಿಂದ 1.30 ರ ತನಕ , ಮಧ್ಯಾಹ್ನ 3.30 ರಿಂದ ರಾತ್ರಿ 7.00, ರಾತ್ರಿ 7.30 ರಿಂದ 8.30 ಗಂಟೆ ತನಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಸಮಯ ಬದಲಾವಣೆ ಮಾಡಲಾಗುವುದು . ಪ್ರತಿದಿನ 30 ಭಕ್ತರಿಗೆ ಮಾತ್ರ ಸರ್ಪಸಂಸ್ಕಾರ ಮತ್ತು ಆಶ್ಲೇಷಾ ಬಲಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ . ಈ ಸೇವೆಗಳಿಗೆ ದಿನದಲ್ಲಿ 30 ರಸೀದಿ ಮಾತ್ರ ನೀಡಲಾಗುತ್ತದೆ . ಸೇವೆ ಸಂದರ್ಭ ಕಡ್ಡಾಯವಾಗಿ ಮಾಸ್ಕ್ ಧರಿಸಿ , ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು . ಪ್ರತಿ ರಸೀದಿಗೆ ಇಬ್ಬರಿಗೆ ಮಾತ್ರ ಸೇವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು . ಬೆಳಗ್ಗೆ ಮಾತ್ರ ಆಶ್ಲೇಷ ಬಲಿ ಸೇವೆ ಇರುತ್ತದೆ . ಮಹಾಪೂಜೆ ಮತ್ತು ಪಂಚಾಮೃತ ಸೇವೆಗಳಿಗೆ ಪ್ರತಿದಿನ 10 ರಸೀದಿಗೆ ಅವಕಾಶ ನೀಡಲಾಗಿದ್ದು , ಈ ಸೇವೆಗಳಲ್ಲಿ ಇಬ್ಬರು ಮಾತ್ರ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ .
ಸೇವಾರ್ಥಿಗಳಿಗೆ ವಸತಿ ವ್ಯವಸ್ಥೆ ಸರ್ಪಸಂಸ್ಕಾರ ಸೇವಾರ್ಥಿಗಳಿಗೆ ದೇವಳದ ವಸತಿಗೃಹದಲ್ಲಿ 2 ದಿನ , ಉಳಿದ ಸೇವೆ ಮಾಡಿಸುವ ಭಕ್ತರಿಗೆ ಒಂದು ದಿನ ತಂಗಲು ಅವಕಾಶ ಕಲ್ಪಿಸಲಾಗುವುದು . ಪ್ರತಿದಿನ ಸೇವೆ ನಡೆಸಿದ ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗುವುದು . ಎಲ್ಲ ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸೇಷನ್ ನಡೆಯಲಿದೆ . ಭಕ್ತರ ನಿರ್ಗಮನದ ನಂತರ ಕೊಠಡಿಗಳನ್ನು ಸ್ಮಾನಿಟೈಸ್ ಮಾಡಲಾಗುವುದು . ಆ ಬಳಿಕವೇ ಮುಂದಿನ ಸೇವಾರ್ಥಿಗಳಿಗೆ ಕೊಠಡಿ ನೀಡಲಾಗುವುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ .

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!