ಪ್ರಾಚೀನ ಕಾಲದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯು ನಾಟಿ ವೈದ್ಯ ಪದ್ಧತಿಯನ್ನು ಬಹಳ ಮುಖ್ಯವಾಗಿ ಅನುಸರಿಸಿಕೊಂಡು ಬಂದಿದೆ. ಪ್ರಾಕೃತಿಕ ರಮಣೀಯವಾಗಿ ಕಂಗೊಳಿಸುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳಿಂದ ಆವರಿಸಿಕೊಂಡಿದೆ. ಈ ಕಾರಣದಿಂದಾಗಿ ಕಾಡಿನಲ್ಲಿ ಸಿಗುವ ಆಯುರ್ವೇದ ಔಷಧಿಗಳು, ಮದ್ದಿನ ಗಿಡಬಳ್ಳಿಗಳು, ಔಷಧೋಪಚಾರಕ್ಕೆ ಬೇಕಾದ ಎಲೆ ಮತ್ತು ಕಾಯಿಗಳು ಧಾರಾಳವಾಗಿ ನಮ್ಮ ಜಿಲ್ಲೆಗಳಲ್ಲಿ ಬೇಡಿಕೆಯಲ್ಲಿ ಇರುತ್ತವೆ. ಇದರೊಂದಿಗೆ ನಮ್ಮ ಜಿಲ್ಲೆಯ ಪ್ರತಿಯೊಂದು ಭಾಗಗಳಲ್ಲಿಯೂ ಬಹಳ ಬೇಡಿಕೆ ಇರುವ ಮನೆಮದ್ದಾಗಿದೆ ಗೆಂದಾಳೆ. ಹಿಂದಿನ ಕಾಲದಲ್ಲಿ ಅಪರೂಪಕ್ಕೊಂದು ಮನೆಗಳಲ್ಲಿ ಕಂಡುಬರುತ್ತಿದ್ದ ಗೆಂದಾಳೆ ಸಾಂಪ್ರದಾಯಿಕವಾದ ಪ್ರತೀಕವಾಗಿ ಔಷದೋಪಚಾರ ಕ್ಕಾಗಿ ಮಾತ್ರ ಉಚಿತವಾಗಿ ನೀಡುವ ವಸ್ತುವಾಗಿ ದೂರದೂರದ ಮನೆಗಳಲ್ಲಿ ಇದರ ಒಂದೊಂದು ಮರಗಳು ಕಾಣಸಿಗುತ್ತಿದ್ದವು. ಆದರೆ ಕಾಲಗಳು ಕಳೆದಂತೆ ವೈಜ್ಞಾನಿಕವಾಗಿ ಯುಗಗಳು ಬದಲಾದಂತೆ ಪ್ರಾಕೃತಿಕ ಸಂಪತ್ತುಗಳು ಮರೆಯಾಗುತ್ತಾ ಬಂದವು. ಇಂದು ಈ ರೀತಿಯ ಮನೆಮದ್ದುಗಳು ವಾಣಿಜ್ಯ ಬೆಳೆಯಾಗಿ ಮಾರ್ಪಾಡು ಗೊಂಡಿದೆ. ಸಾದಾ ಎಳನೀರು ಮತ್ತು ಗೆಂದಾಳೆ ನೀರಿಗೂ ಜನರು ಔಷಧಿ ಯುಕ್ತವಾಗಿ ಸೇವಿಸಲು ಇಷ್ಟಪಡುತ್ತಾರೆ. ನಾಟಿ ವೈದ್ಯರುಗಳು ಹಲವಾರು ರೋಗರುಜಿನಗಳಿಗೆ ಮನೆಮದ್ದನ್ನು ನೀಡುವಾಗ ಗೆಂದಾಳಿ ಯ ಮಹತ್ವ ಅಲ್ಲಿ ಬಹಳ ಪ್ರಾಮುಖ್ಯವಾಗಿ ಕಂಡುಬರುತ್ತದೆ. ಗೆಂದಾಳೆ ಸಸಿ ಮಾರುಕಟ್ಟೆಯಲ್ಲಿ ಏಳುನೂರು ರೂಪಾಯಿಂದ 1000 ವರೆಗೆ ಮಾರಾಟವಾಗುತ್ತಿದ್ದು ಎರಡೂವರೆ ಅಥವಾ ಮೂರು ವರ್ಷಗಳಲ್ಲಿ ಫಲವನ್ನು ನೀಡಲು ಪ್ರಾರಂಭಿಸುತ್ತದೆ. ವರ್ಷದಲ್ಲಿ ಆರು ತಿಂಗಳಿಗೊಮ್ಮೆ 4 ಗೊನೆಗಳನ್ನು ನೀಡುವ ಮೂಲಕ ಗರಿಷ್ಠ ಒಂದು ಮರದಿಂದ ಇನ್ನೂರಕ್ಕೂ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ. ಉಷ್ಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಈ ಕೃಷಿಯು ಕಳೆದ ಹದಿನೈದು ವರ್ಷಗಳಿಂದ ಕೆಲವು ನುಸಿರೋಗ ಗಳಂತಹ ಸಮಸ್ಯೆಗೆ ಎದುರಾಗಿ ಜಿಲ್ಲೆಯ ಹಲವು ಕಡೆಗಳಿಂದ ಈ ಕೃಷಿಯು ಮಾಯವಾಗುತ್ತಾ ಬಂದಿದೆ. ಇಡೀ ದೇಶದಲ್ಲಿಯೇ ಎಳೆನೀರು ಪ್ರಿಯರಿಗೆ ಸ್ವಾದಭರಿತ ಮತ್ತು ಔಷಧಿ ಗುಣವುಳ್ಳ ಈ ರೀತಿಯ ಫಲಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೇಡಿಕೆಯಿಂದ ಕೂಡಿರುತ್ತಿತ್ತು. ಇದೀಗ ವಾಣಿಜ್ಯ ಕಟ್ಟಡಗಳು, ಬೃಹತ್ ಮಾಲ್ ಗಳು, ದೊಡ್ಡ ದೊಡ್ಡ ಇಂಡಸ್ಟ್ರೀಸ್ ಗಳು, ತಲೆ ಎತ್ತಿರುವುದರಿಂದ ನಮ್ಮ ಜಿಲ್ಲೆಯ ಸುಮಾರು 40 ಶೇಕಡದಷ್ಟು ತೆಂಗು ಕೃಷಿಗಳು ಮಾಯವಾಗುತ್ತ , ಪ್ರಾಕೃತಿಕ ರಮಣೀಯ ದೃಶ್ಯಗಳು ಮರೆಯಾಗುತ್ತಾ ಸಾಗುತ್ತಿದೆ. ಕಪ್ಪುಬಣ್ಣವು ಎಲ್ಲಾ ಬಣ್ಣವನ್ನು ನುಂಗಿತೆಂಬ ಗಾದೆಯಂತೆ ಮುಂದೊಂದು ದಿನ ನಮ್ಮ ಪರಿಸರಗಳಿಂದ ಈ ರೀತಿಯ ಕೃಷಿಗಳು ಕಣ್ಮರೆಯಾಗುವುದು ರಲ್ಲಿ ಯಾವುದೇ ಸಂಶಯವಿಲ್ಲ. ಈ ರೀತಿಯ ಎಳನೀರು , ಗೆಂದಾಳೆ ಯಂತಹ ಕೃಷಿ ವಸ್ತುಗಳಿಂದ ಲಕ್ಷಾನುಗಟ್ಟಲೇ ಕುಟುಂಬಗಳು ಇಂದು ತಮ್ಮ ಜೀವನವನ್ನು ಸಾಗಿಸುತ್ತಿದೆ. ಆಸ್ಪತ್ರೆಗಳು, ನಗರದ ವಿವಿಧ ಬೀದಿಗಳು, ಶಾಪಿಂಗ್ ಮಾಲ್ ಗಳು ಎಷ್ಟೇ ಬೃಹದಾಕಾರವಾಗಿ ಬೆಳೆದಿದ್ದರು ಆ ಪ್ರದೇಶಗಳಿಗೆ ಸಂಪರ್ಕಿಸುವ ಪ್ರತಿಯೊಬ್ಬ ವ್ಯಕ್ತಿಯ ದಾಹವನ್ನು ತಣಿಸಲು ಈ ರೀತಿಯ ಗೆಂದಾಳೆ ಗಳಂತಹ ಪಾನೀಯಗಳು ಬಹುಮುಖ್ಯವಾಗಿದೆ. ಕಲ್ಪವೃಕ್ಷವೆಂದೇ ಹೆಸರು ವಾಸಿಯಾಗಿರುವ ದೇವರು ನೀಡಿದ ಈ ವರವು ಮುಂದಿನ ದಿನಗಳಲ್ಲಿ ಹಲವು ಜೀವಗಳಿಗೆ ವರವಾಗಿರಲಿ, ನಮ್ಮಿಂದ ಮತ್ತು ಪರಿಸರದಿಂದ ಮಾಯವಾಗದೆ ಇರಲಿ ಎಂದು ಅಮರ ಸುಳ್ಯ ಸುದ್ದಿ ವೆಬ್ಸೈಟ್ ವರದಿಯ ಮೂಲಕ ಆಶಿಸುತ್ತೇವೆ.
ವರದಿ : ಹಸೈನಾರ್ ಜಯನಗರ