ಆರಾಧನಾ ಕೇಂದ್ರಗಳು ಸಾಧನಾ ಕೇಂದ್ರಗಳಾಗಬೇಕೆಂದು ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರನಾಂದ ಸರಸ್ವತಿ ಸ್ವಾಮಿ ಹೇಳಿದರು. ಅವರು ತನ್ನ ಸೇವಾಶ್ರಮದ ವತಿಯಿಂದ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ
ಮಾತನಾಡಿದರು. ಶಾಲೆಗಳಲ್ಲಿ ಧರ್ಮ ಶಿಕ್ಷಣ ಬೋಧಿಸುವ ಶಿಕ್ಷಕರ ಅಗತ್ಯ ಇಂದು ಕಾಡುತ್ತಿದೆ. ಎಲ್ಲರಿಗೆ ಧರ್ಮದ ಬಗ್ಗೆ ತಿಳಿದಿದೆ. ವಿದ್ಯಾರ್ಥಿಗಳಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡುವ ಅಗತ್ಯ ಇದೆ ಎಂದು ಅವರು ಹೇಳಿದರು. ಉಚಿತ ಪುಸ್ತಕ ವಿತರಿಸಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿ ಮಾತನಾಡಿ ಪುಸ್ತಕಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಡಾ.ಸಾಯಿಗೀತಾ, ಮತ್ತು ಸಾಯಿ ಪ್ರಸನ್ನ ಮಾತನಾಡಿದರು.
ಆಶ್ರಮದ ಟ್ರಸ್ಟಿ ಪ್ರಣವಿ ಸ್ವಾಗತಿಸಿ, ಪ್ರೋಪೇಸರ್ ರೇಖಾ ಅನಿಲ್ ವಂದಿಸಿದರು. ಪ್ರೊ.ಅನಿಲ್ ಕಾರ್ಯಕ್ರಮ ನಿರೂಪಿಸಿದರು.
- Friday
- November 22nd, 2024