ಹರಿಹರ,ಕಲ್ಮಕಾರು,ಮಡಪ್ಪಾಡಿ ಗ್ರಾಮದ ಜನರಿಗೆ ಏರಡು ದಿನಗಳ ಹಿಂದೆ ಜೀಯೋ ನೆಟ್ವರ್ಕ್ ನೀಡಿದ್ದು 500 ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಸಿಗುತ್ತಿದ್ದು ಬೇರೆ ಯಾವ ಪ್ರದೇಶಕ್ಕೆ ಸಿಗದಿರುವುದು ಜನರಿಗೆ ಜಿಯೋ ಅಧಿಕಾರಿಗಳು ನೀಡಿ ಭರವಸೆ ಸುಳ್ಳಾಗಿದೆ. ಈ ಬಗ್ಗೆ ಜನರು ಆಕ್ರೋಶಗೊಂಡಿದ್ದು ಇಂದು ನಡೆದ ಸಭೆಯಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಜನ ಸೇರಿ ಹೋರಾಟ ಸಮಿತಿ ರಚಿಸಿದ್ದು ಕೂಡಲೇ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಮೂರು ದಿನಗಳ ಒಳಗೆ ಸರಿಪಡಿಸದ್ದೆ ಇದ್ದಲ್ಲಿ ಮಂಗಳೂರಿನ ಜಿಯೋ ಕಛೇರಿಯ ಮುಂದೆ ಪ್ರತಿಭಟನೆ ಮಾಡುವುದೆಂದು ಸಭೆಯಲ್ಲಿ ತಿರ್ಮಾನಿಸಿದ್ದಾರೆ. ಉಸ್ತುವಾರಿ ಸಚಿವರು ಹಾಗೂ ಶಾಸಕರು ಮತ್ತು ಸಂಸದರಿಗೆ ಗ್ರಾಮಸ್ಥರು ಫೋನ್ ಮಾಡಿ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಕೊಲ್ಲಮೊಗ್ರ ಗ್ರಾಮದಲ್ಲಿ ಗ್ರಾಮ ಪಂಚಾಯತ್, ವಿಜಯ ಬ್ಯಾಂಕ್ ,ಆಸ್ಪತ್ರೆ, ಗ್ರಾಮ ಲೆಕ್ಕಧಿಕಾರಿಗಳ ಕಛೇರಿ, ಸರಕಾರಿ ಶಾಲೆ, ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಕೂಡ ಈ ಗ್ರಾಮದಲ್ಲಿ ಟವರ್ ನಿರ್ಮಿಸದ್ದೇ ಇರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗಿದೆ. ಕೊಲ್ಲಮೊಗ್ರ ಗ್ರಾಮದಲ್ಲಿ ಹಳೆಯ ರಿಲಯನ್ಸ್ ಟವರ್ ಇದ್ದು ಅದರ ಸಮೀಪವೇ ಜಿಯೋ ಓ.ಎಪ್.ಸಿ ಕೇಬಲ್ ಹಾದು ಹೋಗಿದ್ದರು ಕೂಡ ಅದನ್ನು ಬಿಟ್ಟು ಮುಂದಿನ ಗ್ರಾಮದಲ್ಲಿ ಟವರ್ ನಿರ್ಮಿಸಲಾಗಿದೆ. ಕೊಲ್ಲಮೊಗ್ರ ಗ್ರಾಮದ ಪ್ರಭಾವಿಗಳನ್ನೂ ಹಾಗೂ ಊರಿನ ಜನರನ್ನು ಬಳಸಿಕೊಂಡು ಜೀಯೋ ಕೇಬಲ್ ಅಳವಡಿಸುವ ವೇಳೆ ಎಲ್ಲಾ ತೊಂದರೆಗಳನ್ನು ಸರಿ ಪಡಿಸಿಕೊಟ್ಟದ್ದು ಕೊಲ್ಲಮೊಗ್ರ ಗ್ರಾಮದ ಜನ, ಅದರೂ ಕೊಲ್ಲಮೊಗ್ರ ಗ್ರಾಮದಲ್ಲಿ ಟವರ್ ನಿರ್ಮಿಸಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಗ್ರಾಮಸ್ಥರು. ಆನ್ ಲೈನ್ ಶಿಕ್ಷಣ, ವರ್ಕ್ ಪ್ರಮ್ ಹೋಮ್ ಎಲ್ಲಾ ಇರುವ ಜನರು ಹತ್ತು ಕಿ.ಮೀ. ದೂರ ಕ್ರಮಿಸಿ ನೆಟ್ವರ್ಕ್ ಪಡೆಯುತ್ತಿದ್ದಾರೆ. ಕೊಲ್ಲಮೊಗ್ರ ಗ್ರಾಮದಲ್ಲಿ ಯಾವುದೇ ನೆಟ್ವರ್ಕ್ ಇಲ್ಲದೇ ಬೇಸತ್ತು ಹೋಗಿದ್ದು ಈ ಬಗ್ಗೆ ಜೀಯೋ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಕೊಲ್ಲಮೊಗ್ರದಲ್ಲಿ ಟವರ್ ನಿರ್ಮಾಣ ಮತ್ತು ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದೇ ಇದ್ದಲ್ಲಿ ಜನಪ್ರತಿನಿಧಿಗಳನ್ನು ಜತೆಗೆ ಸೇರಿಸಿಕೊಂಡು ಪ್ರತಿಭಟನೆ ನಡೆಸುವುದೆಂದು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
- Thursday
- November 21st, 2024