ಸುಳ್ಯ ತಾಲೂಕಿನ ಕಲ್ಲುಗುಂಡಿಯ ದಂಡೆಕಜೆ ಎಂಬಲ್ಲಿಯ ದಲಿತ ಅಪ್ರಾಪ್ತ ಯುವತಿ /ಯರ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಮಂದಿಯನ್ನು ಬಂಧಿಸಲ್ಪಟ್ಟರು ಕೂಡ ಇನ್ನೂ ಹಲವಾರು ಮಂದಿ ಇರುವ ಸಾಧ್ಯತೆಗಳಿರುತ್ತದೆ. ಆದುದರಿಂದ ಇತರೆ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮತ್ತು ಯುವತಿಯ ಕುಟುಂಬಕ್ಕೆ ನ್ಯಾಯ ರಕ್ಷಣೆ ನೀಡಲು ಸುಳ್ಯ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಣ್ಣಿ ಎಳ್ತಿಮಾರ್ , ಸುಳ್ಯ ತಾಲೂಕು ದಲಿತ್ ಸೇವಾ ಸಮಿತಿ ಅಧ್ಯಕ್ಷರು ವಸಂತ ಕುದ್ಪಾಜೆ , ಉಪಾಧ್ಯಕ್ಷ ಕುಮಾರ ಬಳ್ಳಕ್ಕ , ಕೂತ್ಕುಂಜ ಗ್ರಾಮ ಸಮಿತಿ ಅಧ್ಯಕ್ಷರು ರಮೇಶ್ ಹೆಬ್ಬಾರಹಿತ್ಲು , ಗಣೇಶ್ ಕಡಬ ಮುಂತಾದವರು ಉಪಸ್ಥಿತರಿದ್ದರು.
- Monday
- November 4th, 2024