ಬಂಟರ ಯಾನೆ ನಾಡವರ ಸಂಘ ಸುಳ್ಯ ಇದರ ಬಾಳಿಲ ವಲಯದ ವತಿಯಿಂದ 2019-20 ರ ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಬಾಳಿಲ ವಲಯ ವ್ಯಾಪ್ತಿಯ ಜಾತಿ ಬಾಂಧವರಿಗೆ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಅನುಷ್ ಎಣ್ಣೆಮಜಲು, ಬಂಟರ ಸಮಾಜದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ಸುಳ್ಯ ರೋಟರಿ ಶಾಲೆಯ ವಿದ್ಯಾರ್ಥಿನಿ ಕು. ದಿಶಾ ವಿ. ರೈ ಮತ್ತು ಸಿ.ಎ.ಯಲ್ಲಿ ರಾಷ್ಟ್ರ ಮಟ್ಟದಲ್ಲಿ 37 ನೇ ರ್ಯಾಂಕ್ ಪಡೆದ ನಿಶ್ಚಲ್ ರೈಯವರಿಗೆ ಸನ್ಮಾನ ಕಾರ್ಯಕ್ರಮ ಸೆ. 5 ರಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಎನ್.ಜಿ. ಪ್ರಭಾಕರ ರೈ ವಹಿಸಿದ್ದರು. ತಾಲೂಕು ಬಂಟರ ಸಂಘದ ಗೌರವಾಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ, ಮಂಗಳೂರು ಜಾಗತಿಕ ಬಂಟರ ಸಂಘದ ನಿರ್ದೇಶಕ ಕುಂಬ್ರ ದಯಾಕರ ಆಳ್ವ ಪೆರುವಾಜೆ, ಬೆಳ್ಳಾರೆ ಪೊಲೀಸ್ ಠಾಣಾ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಬಂಟರ ಮಾತೃ ಸಂಘ ಮಂಗಳೂರು ಇದರ ನಿರ್ದೇಶಕ ಸುನಿಲ್ ರೈ ಪೆರುವಾಜೆ, ಬಾಳಿಲ ಗ್ರಾ.ಪಂ. ಪಿ.ಡಿ.ಒ. ಶ್ರೀಮತಿ ಚಂದ್ರಾವತಿ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಂಟರ ಸಂಘ ಬಾಳಿಲ ವಲಯದ ಗೌರವಾಧ್ಯಕ್ಷ ಚಂದ್ರಹಾಸ ರೈ ಅಗಲ್ಪಾಡಿ, ಬಾಳಿಲ ವಲಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ಜೆ. ರೈ ನಾಲ್ಗುತ್ತು, ಬಾಳಿಲ ವಲಯ ಬಂಟರ ಯುವ ಘಟಕದ ಗೌರವಾಧ್ಯಕ್ಷ ಸುಧಾಕರ ರೈ ಬಜನಿಗುತ್ತು, ಅಧ್ಯಕ್ಷ ಸುನಿಲ್ ರೈ ಬಲ್ಕಾಡಿ, ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯ ಬಂಟರ ಸಂಘದ ಅಧ್ಯಕ್ಷ ಎನ್. ವಿಶ್ವನಾಥ ರೈ ಕಳಂಜ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಂಟರ ಯುವ ಘಟಕದ ಕಾರ್ಯದರ್ಶಿ ಪ್ರಕಾಶ್ ರೈ ಕುಳಾಯಿತ್ತೋಡಿ ಪ್ರಾರ್ಥಿಸಿದರು.
ವಲಯ ಬಂಟರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ರೈ ಪಾದೆಕಲ್ಲು ಸನ್ಮಾನಿತರ ಪಟ್ಟಿ ವಾಚಿಸಿ ವಂದಿಸಿದರು. ಸುಜಿತ್ ರೈ ಪಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿಯವರು ಅನುಷ್ ಎ.ಎಲ್.ರವರಿಗೆ ತಮ್ಮ ವೈಯಕ್ತಿಕ ನಗದು ಬಹುಮಾನವನ್ನು ಈ ಸಂದರ್ಭದಲ್ಲಿ ನೀಡಿದರು.