ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ರಿ),ಗುತ್ತಿಗಾರು ಇವುಗಳ ಸಹಭಾಗಿತ್ವದಲ್ಲಿ,ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಹಯೋಗದೊಂದಿಗೆ
ಸೆಪ್ಟೆಂಬರ್ 20 ರಿಂದ 26 ರವರೆಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಿತ್ಯ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತರಬೇತಿ ನಡೆಯಲಿರುವುದು. 15 ವರ್ಷ ಮೇಲ್ಪಟ್ಟ ಸ್ತ್ರೀ/ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದು.
ಒಂದು ವಿಭಾಗಕ್ಕೆ ಗರಿಷ್ಠ 25 ಮಂದಿಗೆ ಅವಕಾಶವಿದೆ.
ನೋಂದಣಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಈ ಕೆಳಗಿನ ಸಂಖ್ಯೆಗಳನ್ನು ಕೂಡಲೇ ಸಂಪರ್ಕಿಸಬಹುದು. ತರಬೇತಿ ಪಡೆದವರಿಗೆ
ವಿವೇಕಾನಂದ ಪಾಲಿಟೆಕ್ನಿಕ್ ನಿಂದ ಪ್ರಮಾಣಪತ್ರ ನೀಡಲಾಗುವುದು. ಇಲ್ಲಿ ಕೃಷಿಯಂತ್ರೋಪಕರಣಗಳ ನಿರ್ವಹಣೆ & ರಿಪೇರಿ ತರಬೇತಿ (9482487720), ವಿದ್ಯುತ್ ಉಪಕರಣಗಳ ದುರಸ್ಥಿ ತರಬೇತಿ (ಮಿಕ್ಸಿ, ಫ್ಯಾನ್,ಗ್ಯಾಸ್ ಸ್ಟೋವ್ ರಿಪೇರಿ & ವೈಂಡಿoಗ್ 9480104814), ಹೈನುಗಾರಿಕೆ, ಜೇನು ಕೃಷಿ ತರಬೇತಿ (7676582437), ಫ್ಯಾಶನ್ ಡಿಸೈನ್ ತರಬೇತಿ (9480109761), ಕಸಿ – ಕೃಷಿ (ಕಸಿ ಕಟ್ಟುವುದು, ಅಣಬೆ ಬೇಸಾಯ ಮತ್ತು ಕೃಷಿಯ ಕೆಲವು ಮಾಹಿತಿಗಳು)-ತರಬೇತಿ (9481331434),
ಫುಡ್ ಟೆಕ್ನಾಲಜಿ ತರಬೇತಿ (9449257985)
ಪ್ಲಂಬಿಂಗ್ & ಎಲೆಕ್ಟ್ರಿಶನ್ ತರಬೇತಿ (ಮನೆ/ಕಟ್ಟಡಗಳ ಪ್ಲಂಬಿoಗ್ & ಎಲೆಕ್ಟ್ರಿಶನ್ ಕೆಲಸದ ತರಬೇತಿ 9731593327 ಹಾಗೂ ಈ ಬಗ್ಗೆ ಹೆಚ್ಚಿನ ವಿವರಗಳಿಗೆ 9448549702, 9448178168, 9449687789, 9449773797 ಸಂಖ್ಯೆ ಗೆ ಫೋನ್ ಮಾಡಿ ಸಂಪರ್ಕಿಸಬಹುದು. ಸೆಪ್ಟೆಂಬರ್ 10 ರಿಂದ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ತರಬೇತಿಗೆ ನೋಂದಣಿ ಮಾಡಬಹುದು. ಅರ್ಜಿಯನ್ನು ಸಲ್ಲಿಸುವಾಗ ಇತ್ತೀಚಿನ ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ನ ಪ್ರತಿಯನ್ನು ಲಗತ್ತಿಸತಕ್ಕದ್ದು ಎಂದು ಸಂಘಟಕರು ತಿಳಿಸಿದ್ದಾರೆ.
- Friday
- November 1st, 2024