ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭಕ್ತಕೋಡಿ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಪುಷ್ಪಾವತಿ ಪಿ ಪದೋನ್ನತಿ ಹೊಂದಿದ್ದು, ಇದೀಗ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆ.ಪಿ.ಎಸ್) ಬೆಳ್ಳಾರೆ ಇಲ್ಲಿನ ಪ್ರೌಢಶಾಲಾ ವಿಭಾಗಕ್ಕೆ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಭಡ್ತಿಗೊಂಡಿರುತ್ತಾರೆ. ಇವರು 1998 ರಿಂದ ಸ.ಹಿ.ಪ್ರಾಥಮಿಕ ಶಾಲೆ ಭಕ್ತಕೋಡಿಯಲ್ಲಿ ಸೇವೆಯನ್ನು ಆರಂಭಿಸಿ 22 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದು, ಇದೀಗ ಪ್ರೌಢಶಾಲಾ ವಿಭಾಗದ ಗ್ರೇಡ್ 1 ಹುದ್ದೆಗೆ ಭಡ್ತಿ ಹೊಂದಿದ್ದಾರೆ. ಭಾರತ ಸೇವಾದಳದ ಕೇಂದ್ರ ನಾಯಕ ತರಬೇತಿ ಪಡೆದ ಪುತ್ತೂರು ತಾಲೂಕಿನ ಏಕೈಕ ಶಿಕ್ಷಕಿಯಾಗಿರುವ ಇವರು, 16 ವರ್ಷಗಳಿಂದ ತಾಲೂಕು ಕಾರ್ಯದರ್ಶಿಯಾಗಿಯೂ ಕರ್ತವ್ಯದಲ್ಲಿದ್ದಾರೆ . ಅಲ್ಲದೇ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜತೆ ಕಾರ್ಯದರ್ಶಿಯಾಗಿ, ರಾಜ್ಯಮಟ್ಟದ ವಾಲಿಬಾಲ್ ತೀರ್ಪುಗಾರರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಛಾಪನ್ನು ಮೂಡಿಸಿದ್ದಾರೆ.
ಇವರು ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ಪುರಿಯ ಮನೆ ದಿ.ಬಾಳಪ್ಪ ಗೌಡ ಹಾಗೂ ಶ್ರೀಮತಿ ಮೀನಾಕ್ಷಿ ದಂಪತಿಗಳ ಸುಪುತ್ರಿ. ಪತಿ ಶ್ರೀ ಮನೋಜ್ ಕುಮಾರ್. ಬಿ.ಆರ್ ಪುತ್ತೂರು ಸೆಂಟರ್ ನಿಸರ್ಗ ಎಂಟರ್ ಪ್ರೈಸಸ್ ನ ಮಾಲಕರಾಗಿದ್ದು, ಮಗಳು ಕು|ನಿಸರ್ಗ.ಬಿ.ಎಂ ಪುತ್ತೂರಿನ ಸೈಂಟ್ ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಸಹೋದರ ಶ್ರೀ ಜಗದೀಶ್ ಪುರಿಯ, ಪಂಜ ಗ್ರಾ.ಪಂ. ಸದಸ್ಯರಾಗಿದ್ದಾರೆ.
- Thursday
- November 21st, 2024