ನ 8 ರಿಂದ 10 ರವರೆಗೆ ಬೆಳ್ಳಾರೆಯಲ್ಲಿ “ನಮ್ಮ ಹಬ್ಬ ನಮ್ಮ ಸೇವೆ ರೋಟರಿ ಕಿರಣ-2026”

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಇಂಟರ್ಯಾಕ್ಟ್ ಕ್ಲಬ್ ಜ್ಞಾನದೀಪ ಬೆಳ್ಳಾರೆ, ಜ್ಞಾನದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ ಇವುಗಳ ಸಹಯೋಗದಲ್ಲಿ “ಸೇವೆಯ ಬೆಳಕಿನಿಂದ ಬದುಕು ಬೆಳಗಿಸೋಣ” ಎಂಬ ಧ್ಯೇಯ ವಾಕ್ಯದಡಿ “ನಮ್ಮ ಹಬ್ಬ ನಮ್ಮ ಸೇವೆ‌ ರೋಟರಿ ಕಿರಣ-2026” ಕಾರ್ಯಕ್ರಮವು ನ.8 ರಿಂದ 10 ರ ವರೆಗೆ ಬೆಳ್ಳಾರೆಯಲ್ಲಿ ನಡೆಯಲಿದೆ. ನ‌ 8 ರಂದು ಬೆಳಿಗ್ಗೆ 10ಕ್ಕೆ ನೆರವಿನ ದೀಪಾವಳಿ ಹೆಸರಿನಲ್ಲಿ ಕ್ಷಯ ರೋಗ ಪೀಡಿತ ನೆಟ್ಟಾರಿನ ಬಡ ಕುಟುಂಬಕ್ಕೆ ಆಹಾರದ ಕಿಟ್ ಮತ್ತು ನೆರವಿನ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

. . . . . . . . .

ನ.9 ರಂದು ಒಲವಿನ ದೀಪಾವಳಿಯ ಹೆಸರಿನಲ್ಲಿ ಬೆಳ್ಳಾರೆಯ ಎಂಡೋ ಸಂತ್ರಸ್ಥರ ಪಾಲನಾ ಕೇಂದ್ರದಲ್ಲಿ ದಿವ್ಯಾಂಗ ಚೇತನರೊಂದಿಗೆ ದೀಪಾವಳಿ ಆಚರಣೆ ನಡೆಯಲಿದೆ.ನ.10 ರಂದು ಅರಿವಿನ ದೀಪಾವಳಿಯ ಹೆಸರಿನಲ್ಲಿ ಬೆಳ್ಳಾರೆ ಗ್ರಾಮದ ಪಾಠಾಜೆ ಕಾಲನಿ ನಿವಾಸದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯೊಂದಿಗೆ ಹಬ್ಬದ ಸಿಹಿ ಹಂಚಿ ದೀಪಾವಳಿ ಆಚರಣೆ ನಡೆಯಲಿದೆ. ವರದಿ – ಎಂ.ಎ. ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading