“ಕಣ್ಣಿನ ದೃಷ್ಟಿ ಸಂರಕ್ಷಣೆ ಲಯನ್ಸ್ ನ ದೊಡ್ಡ ಸೇವೆಯಾಗಿದೆ” : ಡಿಸ್ಟಿಕ್ ಗವರ್ನರ್ ತಾರಾನಾಥ್ – ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್‌ಗೆ ರಾಜ್ಯಪಾಲರ ಅಧಿಕೃತ ಭೇಟಿ

 “ಜಗತ್ತಿನ ಅತಿ ದೊಡ್ಡ ಸ್ವಯಂಸೇವಕ, ಸಾಮಾಜಿಕ ಸೇವಾ ಸಂಸ್ಥೆಯಾದ ಲಯನ್ಸ್‌ನ ಮುಖ್ಯ ಉದ್ದೇಶ ನಾವು ಸೇವೆ ಮಾಡುತ್ತೇವೆ ಎಂದಾಗಿದೆ. ವಿಶ್ವದ 200 ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 14 ಲಕ್ಷಕ್ಕೂ ಹೆಚ್ಚು ಸದಸ್ಯರು ಈ ಕ್ಲಬ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಲಬ್ ನ ಪ್ರಮುಖ ಸೇವಾ ಚಟುವಟಿಕೆಗಳಾದ ಕಣ್ಣಿನ ದೃಷ್ಟಿ ದೋಷ ತಪಾಸಣೆ, ಕನ್ನಡಕಗಳ ಪೂರೈಕೆ, ಹಸಿವು ನಿರ್ಮೂಲನೆ, ಆಹಾರ ಪೂರೈಕೆ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ತುರ್ತು ಪರಿಹಾರ ಕಾರ್ಯ ಹಾಗೂ ಯುವಜನರ ನಾಯಕತ್ವ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಲಯನ್ಸ್ ಜಿಲ್ಲಾ ಗವರ್ನರ್ ಎಚ್ ಎಂ ತಾರನಾಥ ನುಡಿದರು. 

. . . . . . . . .

ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಸಂದರ್ಭದಲ್ಲಿ ಏನೆಕಲ್ಲಿನ ಸಮೃದ್ಧಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

. . . . . . .

ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸತೀಶ್ ಕೂಜುಗೋಡು ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ದ್ವಿತೀಯ ಉಪ ಜಿಲ್ಲಾ ಗವರ್ನರ್ ವೆಂಕಟೇಶ ಹೆಬ್ಬಾರ್, ಪ್ರಥಮ ಉಪಜಿಲ್ಲಾ ಗವರ್ನರ್ ಗೋವರ್ಧನ ಶೆಟ್ಟಿ, ಜಿಲ್ಲಾ ಪ್ರಥಮ ಮಹಿಳೆ ಸವಿತಾ ತಾರಾನಾಥ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ, ಪ್ರಾಂತೀಯ ಅಧ್ಯಕ್ಷರಾದ ಸಂತೋಷ ಜಾಕೆ, ವಲಯ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ, ನಿಕಟ ಪೂರ್ವ ಅಧ್ಯಕ್ಷೆ ವಿಮಲಾ ರಂಗಯ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.

ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾತಿಕಲ್ಲು ವಿಸ್ತೃತವಾದ ವರದಿಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಸನ್ಮಾನಿಸಲಾಯಿತು. ನೂಜಿಬಾಳ್ತಿಲದ ಬೆಥನಿ ಶಾಲೆಗೆ ಹಾಗೂ ಸುಬ್ರಹ್ಮಣ್ಯದ ವಾಲ್ಮೀಕಿ ಆಶ್ರಮ ಶಾಲೆಗೆ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು. ಛಾಯಾಗ್ರಾಹಕ ಜಿಲ್ಲಾ ಪ್ರಶಸ್ತಿಯನ್ನು ಪಡೆದ ಲೋಕೇಶ್ ಬಿ.ಎನ್.ಅವರನ್ನು ರಾಜ್ಯಪಾಲರು ಗೌರವಿಸಿದರು. ಪ್ರಾಂತ್ಯದ ವಿವಿಧ ಕ್ಲಬ್‌ಗಳಾದ ಬೆಳ್ಳಾರೆ, ಸಂಪಾಜೆ, ಸುಳ್ಯ, ಗುತ್ತಿಗಾರು, ಪಂಜ, ಹಾಗೂ ಕಡಬ ಕ್ಲಬ್ ಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಮಾರಂಭದಲ್ಲಿ ಹಾಜರಿದ್ದರು. ಕೊನೆಯಲ್ಲಿ ಕ್ಲಬ್‌ನ ಖಜಾಂಜಿ ಪವನ್ ಎಂ.ಡಿ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading