ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇನ್ನರ್ ವೀಲ್ ಕ್ಲಬ್ ವತಿಯಿಂದ ಮಂತ್ರಾಲಯ ಭೇಟಿ

ಸುಬ್ರಹ್ಮಣ್ಯ ನವಂಬರ್ 3 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್, ಇನ್ನರ್ ವೇಲ್ ಕ್ಲಬ್ ಹಾಗೂ ಆತ್ಮೀಯ ಸ್ನೇಹಿತರನ್ನು ಒಳಗೊಂಡ 20 ಜನರ ತಂಡ ಶುಕ್ರವಾರ ಮಂತ್ರಾಲಯಕ್ಕೆ ಭೇಟಿ ನೀಡಿತು. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ರಾತ್ರಿ ನಡೆದ ರಥೋತ್ಸವದಲ್ಲಿ ತಂಡ ಪಾಲ್ಗೊಂಡಿತು. ಶನಿವಾರ ಮಂತ್ರಾಲಯ ಪಕ್ಕದಲ್ಲಿರುವ ಮಚ್ಚಾಲಮ್ಮ ದೇವಸ್ಥಾನ, ರಾಯರ ಬೃಂದಾವನ, ಪಂಚಮುಖಿ ಆಂಜನೇಯ ದೇವಸ್ಥಾನ ಗಳಿಗೆ ಭೇಟಿ ನೀಡಲಾಯಿತು.

. . . . . . . . .

ಅಲ್ಲಿಂದ ಈ ಊರಿನವರು ಆದ ಬಳ್ಳಾರಿಯಲಿರುವ ಡಾ. ಭವ್ಯ ಶೇಖರ್ ರವರ ಆಡಳಿತದಲ್ಲಿರುವ ವಿಶಾಲ ಹಾಗೂ ಅತ್ಯುನ್ನತ ಮಟ್ಟದಲ್ಲಿರುವ ಬೃಂದಾ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿಯ ಶೈಕ್ಷಣಿಕ ವ್ಯವಸ್ಥೆಗಳನ್ನು ವೀಕ್ಷಿಸಲಾಯಿತು. ತಂಡದಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಪೂರ್ವ ಅಧ್ಯಕ್ಷ ವೆಂಕಟೇಶ ಎಚ್ ಎಲ್, ನಿರ್ದೇಶಕರುಗಳಾದ ಗೋಪಾಲ ಎಣ್ಣೆಮಜಲ್, ರೋಹಿತ್ ಬಿ.ಬಿ, ಗಿರಿಧರ ಸ್ಕಂದ, ರಾಧಾಕೃಷ್ಣ ಬಳ್ಪ, ಸುಳ್ಯದ ಡಾ. ಕೇಶವ ಕಲ್ಲಪ್ಪಳ್ಳಿ ಹಾಗೂ ಇನ್ನರ್ವೇಲ್ ಪೂರ್ವ ಅಧ್ಯಕ್ಷರುಗಳಾದ ಸಚಿತಗೋಪಾಲ್, ಲೀಲಾ ವಿಶ್ವನಾಥ್, ಜಾನಕಿ ವೆಂಕಟೇಶ್, ಶೋಭಾ ಗಿರಿಧರ್, ನಿರ್ದೇಶಕರುಗಳಾದ ಗಾಯತ್ರಿ ರೋಹಿತ್,ಉಷಾ ಕುಳ, ಆಶಿತಾ ಕೇಶವ್ ಮುಂತಾದವರು ಹಾಜರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading