ಗಂಗಾಧರ ಮಟ್ಟಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಐದು ದಶಕಗಳಿಂದಸಾಹಿತ್ಯಕ್ಷೇತ್ರದಲ್ಲಿಬರವ ಣಿಗೆಯ ಮೂಲಕ ಗುರುತಿಸಿಕೊಂಡು, ಮೂರೂವರೆ ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಗಂಗಾಧರ ಮಟ್ಟಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ರವಿವಾರ ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

. . . . . . . . .

ಮಣಿಪಾಲ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡು ಹೊನ್ನಾವರದ ಮಾವಿನಕುರ್ವೆಯಲ್ಲಿ ಉದ್ಯೋಗ ಜೀವನ ಆರಂಭಿಸಿದ ಅವರು, ಅಲ್ಲಿ 13 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಬಳಿಕ ಸುಳ್ಯಕ್ಕೆ ವರ್ಗಾವಣೆಗೊಂಡರು. ಹತ್ತು ವರ್ಷಗಳ ಬಳಿಕ ಪತ್ರಿಕೋದ್ಯಮ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

. . . . . . .

ಸ್ಥಳೀಯ ಚೆನ್ನ ಚಾನೆಲ್, ಅಮರ ಸುದ್ದಿ, ಪಯಸ್ವಿನಿ, ಚೇತನ, ಸಂಯುಕ್ತ ಕರ್ನಾಟಕ ಹಾಗೂ ಹೊಸ ದಿಗಂತ ಪತ್ರಿಕೆಗಳಲ್ಲಿ ಪತ್ರಕರ್ತ ರಾಗಿ ಕಾರ್ಯನಿರ್ವಹಿಸಿದ ಅವರು, ಬಳಿಕ 25 ವರ್ಷ ಉದಯವಾಣಿಯಲ್ಲಿ ಸೇವೆ ಸಲ್ಲಿಸಿದರು.

ತಮ್ಮೂರು ಮಟ್ಟು ಗ್ರಾಮದಲ್ಲಿ ಗ್ರಾಮಾಭಿ ವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದ ಅವರು, ಹೊನ್ನಾವರದಲ್ಲಿದ್ದಾಗ ಕಲೆ ಮತ್ತು ಸಂಸ್ಕೃ ತಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಯಕ್ಷಗಾನ ಹಾಗೂ ನಾಟಕಗಳಲ್ಲಿ ಪಾತ್ರ ನಿರ್ವಹಿಸುವ ಮೂಲಕ ಹವ್ಯಾಸಿ ಕಲಾವಿದರಾಗಿಯೂ ಗುರುತಿಸಿ ಕೊಂಡಿದ್ದರು. ಸುಳ್ಯದಲ್ಲಿನೆಲೆಸಿದ ಬಳಿಕ ಸಾಮಾಜಿಕ ಚಟುವಟಿಕೆಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಮಟ್ಟು ಮಿತ್ರ ಮಂಡಳಿ, ಬ್ರಾಹ್ಮಣರ ಸಂಘ, ಶಿವಳ್ಳಿ ಸಂಪನ್ನ, ಕಲಾತರಂಗ, ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading