Ad Widget

ಹಿಂಗೊಂದು ಕಥೆ…….ಕುರೆನ ಕಿತಾಪತಿ….

ಹಳ್ಳಿಗಳಲ್ಲಿ ಬದುಕುವ ಜನಂಗ. ಸಾಮಾನ್ಯವಾಗಿ ಕೃಷಿ ತೋಟ.. ಗದ್ದೆ ಬೇಸಾಯ ಬಾಳೆ , ಅಡಿಕೆ ಕೋಕ್ಕ,ಕಾಯಿತೋಟ ರಬ್ಬರು ನಟ್ಟಿಕಾಯಿ ಪೂರಾ ಬೆಳ್ದವೆ. ನಾವು ಮಾಡ್ದದರ ಪೂರ ನಾವೇ ತಿಂಬಕಾಗದುತೇಳಿ ಕುಂಡಚ್ಚಗ ,ಕುರೆಗ, ಪಾಂಜ ಆನೆಗ…ಚಣಿಲುತೇಳಿ ಪೂರಾ ತಿಂದು ಲಗಡಿ ಕೊಡ್ತಾ ಇದ್ದವೆ. ನಮ್ಮಲ್ಲಿ ರೋಡು ಸೈಡ್ ಆದರೂ ಕುರೆಗಳಿಗೆ ಗುಮಾನನೇ ಇಲ್ಲೆ. ರೋಡು ದಾಟುದೇನು. ಮರಂದ ಮರಕ್ಕೆ ಹಾರ್ದುದೇನು ತುಂಬಿದ ಅಡಿಕೆ ಕೀಲೆಲಿ ಕುದ್ದು ಪೂರಾ….ನಲ್ಲಿ ಉದುರಿಸಿಕಂಡು ಗಜ ಗಜ ಸೌಂಡು ಮಾಡಿಕಂಡು ಎಲ್ಲ ಬುಡಿ ಜನಂಗಳ ಹೆದರಿಕೆನೆ ಇಲ್ಲದೆ ಮಾಡ್ ಮೇಲೆ ಕುದ್ದು ಬೊಂಡ ತಿಂದು ಬುಡ್ಕ ಹೊತ್ತು ಹಾಕುಕನಾ ಸಾಲು ನಾಲ್ಕು ಹೆಂಚುಹೊಡಿ ಹೊಡಿ…ಆದೆ….
ಈ ಕುರೆಗ ಲಾಂಬು ಕಟ್ಟಿ ತೋಟಕ್ಕೆ ಬಾಕನ ಏನು ಬೊಬ್ಬೆ ರಾಮ ರಾಮ… ಎಷ್ಟು ಬೆರ್ಸಿರು ಹೋದುಲೆ…. ಬೊಬ್ಬೆ ಹೊಡ್ದು …ಗರ್ನಲು ಹೊಡ್ಸಿ….ಕನ್ನಡಿ ಹಿಡ್ದು…. ಲಾಸ್ಟ್ ಗೆ ಕುರೆನ ಗೂಡು ತಂದಿಸಿರು‌‌….ನಮ್ಮಂದ ಉಪಾಯಲಿ ಪಿ.ಹೆಚ್.ಡಿ ಮಾಡ್ದ ಕುರೆಗ ಹೋದೇಲೆ…… “ಉಮ್ಮ ಸುಟ್ಟು ಹೋಗಲಿತೇಳಿ”” ದೊಣ್ಣೆ ಬಿಸಾಡಿ…. ಹಿಡಿ ಹಿಡಿಯೋ ಹಿಡಿಯೋತೇಳಿ ತೋಟಲಿ ಪೂರಾ ಬೊಬ್ಬೆ ಹಾಕಂಡ ಹೋದರೆ…ದಡಬೊಡ ಬೊಂಡಗಳ ಕೀಲೆನೆ ಎಳ್ದು ಹಾಕಿರೆ ನೋಡಿಕಂಡು ಸುಮ್ಮನೆ ಕುದ್ರಿಕಾದೆನಾ….ಹೇಳಿ…
ಒಮ್ಮೆ ಏನಾತು ತೇಳ್ರೆ
ನಾ ರಜೇಲಿ ಮನೆಗೆ ಬಂದಿದ್ದೆ…ಅಮ್ಮ‌ಯಾಗೋಳು ಕುರೆಗ ಬಾಕನ ಹಿಡಿ ಗುಟ್ಟಿ ಬೆರ್ಸುತ್ತಿದ್ದ… ಅಮ್ಮ ಆ ದಿನ ಅವ್ವನ ಮನೆಗೆ ಹೋಗಿದ್ದ. ನಾ ತಮ್ಮ ಮನೆಲಿರ್ಕನ ಕುರೆಗ ಬಾತ್‌..ತಮ್ಮ ಟಿ.ವಿ ಇಸಿ ಕುದ್ದರೆ ಕುರೆ ಅಲಾ ಆನೆ ಬಂದರೂ ಎದ್ರಿಕಿಲೇ….. ನಾ ಹಿಡಿ ಹಿಡಿಯೋ ತೇಳ್ದೆ….ಮತ್ತೆ ಬೊಚ್ಚಿ ಪಾರೆ ಮೇಲೆ ಸುಮ್ಮನೆ ಕುದ್ದು ಕುರೆಗಳ ಚಲನವಲನ ಗಮನಿಸಿದ್ದೆ…….ದೊಡ್ಡ ಕುರೆಗ ಸಣ್ಣ ಕುರೆಗ, ಮೊರಿಗ ಬಾರಿ ಲಾಯ್ಕ ಕಂಡತ್ತು….ನಂಗೆ ಮೊಬೈಲ್ ತೆಕ್ಕೊಂಡು ವಿಡಿಯೋ ಮಾಡಿಕಂಡು ಪೊಟೋ ತೆಕಂಡು ಕುದ್ದೆ….. ಸ್ವಲ್ಪ ಕುರೆಗ ಆಚೆ ತೋಟಕ್ಕೆ ಒಡ್ತು…..ನಾ ಚಿಕಪ್ಪಂಗೆ ಕರೆದ್ ಹೇಳ್ದೆ ಚಿಕ್ಕಪ್ಪ ಕುರೆಗ ಬರ್ತೊಳಾತ….ಅವು ಬೆಡಿ ಹಿಡ್ಕೊಂಡು ತೋಟ ತುಂಬಾ ಓಡಾಡುವೆ…..ಕುರೆಗಳಿಗೆ ಗುಂಡು ಹೊಡ್ದರೆ ಕೇಸುನೂ ಆದೆ ಅಲಾ….ಹಾಂಗೆ ನಾ ಮನೆಗೆ ಬಂದೆ ಎರಡು ಕುರೆಗ ಜಾಲುಲಿ ಕಂಡತ್ತು ದೊಡ್ಡ ಕುರೆ ಓಡ್ದೆ ಇಲ್ಲೆ ನಮ್ಮ ಟಾಮಿ ಬೊಗಳ್ದೆ ಓಡ್ದೆ….ಕ್ಯಾರೆ ಇಲ್ಲೆ ನಾಯಿಗೆ ಹೊಡ್ಯೆಕೇನು ಆಗದಲ್ಲ ತೇಳಿ ನಾ … ನಾಯಿನ ದೋಸೆ ಹಾಕಿ ಕುದ್ರಿಸಿದೆ ….ನಾಯಿನ ಬಟ್ಟಲು ತೆಕ್ಕೊಂಡು ಹೋಗಿ ಜಾಲು ಕರೆಲಿ ಇಸಿ ಒಂದು ದೋಸೆ ಹಾಕಿ ಕುದ್ದೆ…..ಕಂಮ್ಮುಂದ ಕುರೆ ಇಳ್ದು ದೋಸೆ ತಿಂಬಕ್ಕೆ ಬಾತು ನಾ ಮೊಬೈಲ್ ಹಿಡ್ದು ಸಾಲು ಸಾಲು ಪೋಟೋ ತೆಗ್ದೆ…..ನನ್ನ ಉದ್ದೇಶನೂ ಅದೇ ಆಗಿತ್ತು….. ಕುರೆ ಸ್ವಲ್ಪ ಸಮಯಲಿ ಹೋತು…
ಅಮ್ಮ ಎರಡನೇ ದಿನ ಬಾತ್ಲೆ ನೆಂಟ್ರ ಮನೆಂದ….ಮದ್ಯಾಹ್ನ ಆಕನ ಒಂಟಿ ಕುರೆ ಮತ್ತೆ ಬಾತಲ್ಲ …ಯಲಾ ಇದೇನು ಬಂದದುತೇಳಿ ಬೆರ್ಸಿದೆ ….ಹೊತ್ಲೆ…ನಾ ನಿನ್ನೆ ಇಸಿದ ನಾಯಿ ಬಟ್ಟಲು ತೆಗ್ತೆಲೆ …ಆ ಕುರೆ ಬಟ್ಟಲು ನೋಡ್ದೆ….ನಾ ಒಳಗಿಂದ ಗಂಜಿ ತಂದು ಹಾಕಿದೆ ತಿಂದತು….. ಪೋಟೋ ತೆಗ್ದೆ….
ಮೂರನೇ ದಿನ ಅಮ್ಮ ಬಂದ … ಮದ್ಯಾಹ್ನ ಆಕನಾ.. ಕುರೆನೂ ಬಾತು ಹಾಲು ಚಾಯ ಉಳ್ದಿತ್ತು ಅದರ ಹೊಯ್ದೆ….ಕುಡ್ದು….ಹೋತು…. ಅಮ್ಮಂಗೆ ನಾ ಪೋಟೋ ಪೂರಾ ತೊರ್ಸಿ ನಡ್ದ ಕತೆ ಹೇಳ್ದೆ…..
ತೆಕಾ ಅಮ್ಮನ ಬೊಯಿಗಳು ದಮ್ಮಯ….. ಆ ಕುರೆಗೆ ಅಭ್ಯಾಸ ಆತ್ ಇನ್ನು ದಿನಾ ಬಾದುತೇಳ್ದ…. ಮಾರನೆ ದಿನ ನಾ ಹಾಸ್ಟೆಲ್ ಹೋದೆ…..ಕುರೆ ದಿನಾ ಬಾಕೆ ಸುರು ಮಾಡಿತ್ತು….ಅಮ್ಮ ಏನು ಹಾಕ್ತಿತ್ಲೆ….ಅದು ಬಟ್ಟಲು ನೋಡಿ ಹೋಗ್ತಿತ್ತಾ ಏನೋ ಅಮ್ಮ ಒಂದಿನ ಪೋನು ಮಾಡಿ ಬೈಯ್ಯಕ್ಕೆ ಸುರು ಮಾಡಿದ…
ಅದು ಮನೆ ಒಳಗೆ ಬಂದು ತರಕಾರಿ ಸಿಕ್ಕಿದ್ದು ಪೂರಾ ಕದಿಯಕೆ ಸುರು ಮಾಡಿತ್ತು ಹಂಗಾಗಿ…. ತುಂಬಾ ಉಪ್ಪದ್ರ ನೂ ಮಾಡ್ತಾ ಇತ್ತು…..ಆಮೇಲೆ ಅದಕ್ಕೆ ಅಮ್ಮ ಅಡಂಗಿ ಕುದ್ದು ದೊಣ್ಣೆ ಬಿಸಾಡಿ ಬಾದು ಬುಟ್ಟಿತ್ತು…..

. . . . .

ಕೋರೋನಾ ರಜೆಲಿ ನಾ ಬಾಕನ ಕುರೆಗಳೆ ಇತ್ಲೆ. ಬೇಸಿಗೆ ತಿಂಗ ಹಲಸ್ನಹಣ್ಣು ಮಾಯಿನ ಕಾಯಿ ತೇಳಿ ತಿಂಬಕ್ಕೆ ಸಿಕ್ಕುತ್ತಿತ್ತೇನೋ‌….ಮಳೆಗಾಲ ಸುರಾಕನ ಮತ್ತೆ ವಕ್ಕರಿಸಿದೋ….. ಮತ್ತದೆ ಕುರೆ ನನ್ನ ಪರಿಚಯ ಸಿಕ್ಕಿತೋ ಏನೋ ಮನೆ ಸುತ್ತ ಮುತ್ತ ಹಾರ್ತ್ತಿತು…
ನಮ್ಮ ಮನೆ ಹಿಂದೆ ಕೊಕ್ಕ ಮರಗ ಒಳ ಅದು ಅಷ್ಟಗಳ ಬೆಳ್ದು ಕೊಟಗೆ ಮೇಲೆನೂ ಗೆಲ್ಲು ಬಗ್ಗಿತ್ತು…. ಹೇಳಿ ಕೇಳಿ ಕೊಕ್ಕ ಮರ ತುಂಬಾ ಚವುಳಿ (ಉರಿ) ಮೂಡೆಗ ಇದ್ದ..ಮರಲಿ ಕೊಕ್ಕ ತುಂಬಾ ಹಿಡಿದ್ದದೆ ಕೂಡ… ಏಕೆ ಹೇಳ್ದೆತೇಳ್ರೆ ಚವುಳಿಗ ಇದ್ದರೆ ಕುರೆಗ ,ಚಣಿಲುಗ ಮರಲಿ ಕುದ್ರುದ್ಲೆ … ನಾ ಮನೆ ಹಿಂದೆ ನೀರಡಿಗೆ ಕಿಚ್ಚಿ ಹಾಕೋಮಾತ ಹೋಕನ ನೆಲಲಿ ಪೂರಾ ಚವುಳಿ ಮೂಡೆಗ ಅತ್ತಿತ್ತ ಹೋಕೆ ಆಗದೆ ಏನೋ ಕಚ್ಚುತ್ತಿದ್ದ ನಾ ಭರತನಾಟ್ಯ ಮಾಡಿಕಂಡು ಕಿಚ್ಚಿ ಹಾಕಮತೇಳ್ರೆ ಉರಿ ಮೂಡೆ ಇರುವ ಗೆಲ್ಲು ಮುರ್ದು ಬೀತ್ … ಮೇಲೆ ನೋಡ್ಕನ ಒಂದು ಕುರೆ ತೆಗ್ದು ಮಾಡ್ ಮೇಲೆ ಹಾರ್ತು….. ನೆಲ ಪೂರಾ ಚವುಳಿ ತುಂಬಿ ಅತ್ತಿತ್ತ ಹೊಕೆ ಆದುಲೇ ಕುರೆ ಬೇರೆ …ಓಡ್ದು ಇಲ್ಲೆ ನಂಗೆ ಸಿಟ್ಟು ಬಾತ್ ಕೈ ಕಾಲು ಪುರುಂಚಿಕಂಡು ಕುರೆ ಬೆರ್ಸಿದೆ…. ಮತ್ತೆ ನೀರಡಿ ಹಕ್ಕಲೆ ಬಾಕನ ರಾಶಿ ಚವುಳಿಗ ಮೂಡೆ ಉದುರಿ ಮೊಟ್ಟೆಗ ನೆಲ ತುಂಬಾ ಹರಂಡಿತ್ತ್….. ಪಾಪ ಚವುಳಿಗ ಕಟ್ಟಿದ ಮೂಡೆನ ಕುರೆ ಉದುರ್ಸಿತು…..ಮೊಟ್ಟೆಗ ಪೂರಾ ಪೊಡಿಯಾಗಿ ಗಂಜಿ ಹರಂಡಿದಾಂಗಿತ್ತು…. ಚವುಳಿಗ ಬೇಗ ಹೊದವೇನಾ ಪಾಪ ಕೋಪಲಿ ಕಚ್ಚಿದಾಂಗೆ ಕಾಲು ಪೂರಾ ಉರಿಯಕೆ ಸುರಾತು…ನೀರಡಿಗೆ ಕಿಚ್ಚಿ ಹಾಕಿಕೂ ಬುಟ್ಪತ್ಲೆ…. ಮೈಪೂ ಹಿಡ್ದು ಪೂರಾ ಗುಡ್ಸಿ ಅತ್ತ ಹಾಕಿದೆ ಆಕನ ಜೋರು ಜಡಿ ಮಳೆ ಬಾತು ನೀರುಲಿ ಚವುಳಿಗಳು ಅದರ ಮೊಟ್ಟೆಗಳೂ ತೋಡ್ ನೀರಲ್ಲಿ ತೇಲಿ ಹೋತು ಪಾಪ…. ಚವುಳಿಗ ಕಷ್ಟ ಪಟ್ಟು ಗೂಡು ಕಟ್ಟಿ ಮೊಟ್ಟೆ ಇಸಿ ಮರಲಿ ಯಾರ ಉಪ್ಪದ್ರ ಇಲ್ಲದೆ ಬದುಕಿಕೊಂಡಿತ್ತು….. ಈ ದೊಡ್ಡಕುರೆ ಮರಂದ ಮರಕ್ಕೆ ಹಾರ್ಕನ ಮೂಡೆ ಉದುರಿ ಹೋತ್ ಚವುಳಿ ಸಂಸಾರ ನೀರು ಪಾಲಾತು….. ಇನ್ನು ಕುರೆಗಳ ಒಳ್ಳದು ಮಾಡಿಕಂಬಕ್ಕೆ ಬೊತ್ತು….ಕುರೆ ಬುದ್ದಿಲಿ… ಬರಿ ಉಪ್ಪದ್ರ ಮಾಡ್ದೆ…. ತೇಳಿ ಅಡಿಕೆ ಚೆಪ್ಪು ಒಲೆಗೆ ಹಾಕಿ ಓಟೆಲಿ ಡಮ್ ಕಟ್ಟಿ ಉರ್ಗಿದೆ….

🔹ನೀತಿ : ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಹೇಳ್ದಾಂಗೆ..
ನಾವು ನೆಮ್ಮದಿಲಿ ಇರುಕನ ಯಾರೋ ನಡುಲಿ ಬಂದು ಉಪ್ಪದ್ರ ಕೊಟ್ಟವೇ…ನಾವು ಸೋತು ಬಿದ್ದಕನಾ ಎಲ್ಲಾ ದಾಟಿಕೊಂಡು ಹೊದವೇ ಹೊರತು ಉಪಕಾರ ಮಾಡ್ದುಲೆ.. ಮೂರನೇಯವ ಸಾಂತ್ವನ ಹೇಳಿ ದೂರ ಹೋದೆ ಅಷ್ಟೇ..🔹

✍️ಶರಣ್ಯ ಕೋಲ್ಚಾರ್

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!