Ad Widget

ರಾಜ್ಯದಲ್ಲಿ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದ ಎಂಬಿ ಫೌಂಡೇಶನ್ ಸುಳ್ಯ ಇದರ ವಿದ್ಯಾಗಮ ಯೋಜನೆ

ಇಡೀ ವಿಶ್ವದಾದ್ಯಂತ ಕೋವಿಡ್ 19 ರ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಹಲವಾರು ರೀತಿಯ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಸವಾಲುಗಳನ್ನು ಇಡೀ ವಿಶ್ವವೇ ಎದುರಿಸುತ್ತಿದ್ದು ಈ ಬಾರಿಯ ಶೈಕ್ಷಣಿಕ ವರ್ಷವೂ ವಿದ್ಯಾರ್ಥಿಗಳ ಬಾಳಿನಿಂದ ದೂರ ಸರಿಯಲು ಆರಂಭಿಸಿದೆ. ಹಲವಾರು ಪೋಷಕರು ತಮ್ಮ ಮಕ್ಕಳ ಭವಿಷ್ಯದ ಶೈಕ್ಷಣಿಕ ಕನಸುಗಳನ್ನು ಹೊತ್ತು ಮುಂದೇನು ಎಂಬ ದಾರಿಕಾಣದೆ ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗದೆ ಸರ್ಕಾರವೇ ದಾರಿ ತೋರದೆ ಏನನ್ನು ಮಾಡಲು ಸಾಧ್ಯವಾಗದೆ ವಿದ್ಯಾರ್ಥಿಗಳ ಶಿಕ್ಷಣಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳ ಜೀವನ ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ಧೃಢವಾಗಿದ್ದರೆ ಶೈಕ್ಷಣಿಕ ವರ್ಷಗಳು ಮುಂದೆಯೂ ಬರಬಹುದು ಎಂಬ ಆಶಾಭಾವನದಿಂದ ಮುಂದಿನ ಉತ್ತಮ ಸಮಯಕ್ಕಾಗಿ ಕಾಯುತ್ತಿದ್ದವು. ಇದರ ಮಧ್ಯದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಲವಾರು ರೀತಿಯ ಯೋಜನೆಗಳನ್ನು ಸೌಲಭ್ಯಗಳನ್ನು ವಿದ್ಯಾರ್ಥಿಗಳ ಭವಿಷ್ಯದ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಒಂದರ ಹಿಂದೆ ಒಂದರಂತೆ ಜಾರಿಗೆಗೋಳಿಸಲು ಪ್ರಾರಂಭಿಸಿತು. ಈ ಕೋವಿಡ್-19 ನಿಯಂತ್ರಣಕ್ಕೆ ಬಾರದೆ ಇರುವ ಹಿನ್ನೆಲೆಯಲ್ಲಿ ಸರಕಾರಗಳು ಕೂಡ ಏನನ್ನು ಮಾಡಲು ಸಾಧ್ಯವಾಗದೆ ಮುಂದೇನು ಎಂಬ ಚಿಂತೆಯಲ್ಲಿ ಆರ್ಥಿಕ ತಜ್ಞರು ಗಳಲ್ಲಿ ಸಮಾಜ ಚಿಂತಕರಲ್ಲಿ ಸಲಹೆ-ಸೂಚನೆಗಳ ನಿರೀಕ್ಷೆಯಲ್ಲಿ ಇದ್ದವು. ಕೆಲವು ಶಾಲೆಗಳ ಅಧ್ಯಾಪಕರುಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ಮಕ್ಕಳ ಶಿಕ್ಷಣಕ್ಕಾಗಿ ಆದ್ಯತೆಯನ್ನು ನೀಡಿ ಹಗಲಿರುಳು ಶ್ರಮಿಸಲು ಪ್ರಾರಂಭಿಸಿದರು. ಆದರೆ ಸಾಂದರ್ಭಿಕ ಸಮಸ್ಯೆಗಳಿಂದ ಯಾವುದೇ ಪ್ರಯೋಜನ ಪಡೆಯುವಲ್ಲಿ ಎಲ್ಲವೂ ವಿಫಲವಾದವು. ಇದೇ ಸಂದರ್ಭದಲ್ಲಿ ಸುಳ್ಯದ ಪ್ರತಿಷ್ಠಿತ ಎಂಬಿ ಫೌಂಡೇಶನ್ ಎಂಬ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಸದಾ ಸಮಾಜಮುಖಿ ಚಿಂತನೆಗಳನ್ನು ಅವಲಂಬಿಸಿಕೊಂಡು ತನ್ನ ಸಂಸ್ಥೆಯಿಂದ ಸಮಾಜಕ್ಕಾಗಿ ಏನನ್ನು ನೀಡಲು ಸಾಧ್ಯ ಎಂಬ ಉತ್ತಮ ಆಶಾಭಾವ ಚಿಂತನೆಗಳೊಂದಿಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಶೈಕ್ಷಣಿಕವಾಗಿ ಮತ್ತು ಮಾನಸಿಕವಾಗಿ ಧೈರ್ಯವನ್ನು ತುಂಬುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿರುವ ಫೌಂಡೇಶನ್ ಅಧ್ಯಕ್ಷ ಮಾಜಿ ಲಯನ್ಸ್ ಗವರ್ನರ್ ಎಂಬಿ ಸದಾಶಿವ ರವರು ಈ ಬಾರಿಯೂ ಕೂಡ ವಿನೂತನವಾಗಿ ಮತ್ತು ಹೊಸತೊಂದು ಚೈತನ್ಯದೊಂದಿಗೆ ಸುಳ್ಯದ ಶಿಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಸಮಾಜದ ವಿವಿಧ ಗಣ್ಯರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಸುಳ್ಯ ಪರಿಸರದ ಉತ್ತಮ ಪ್ರತಿಭೆಯುಳ್ಳ ಶಿಕ್ಷಕರ ತಂಡವನ್ನು ರಚಿಸಿ ವಿದ್ಯೆಯಿಂದ ವಂಚಿತರಾಗಿರುವ ಅದರಲ್ಲಿಯೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಗೆ ಆದ್ಯತೆಯನ್ನು ನೀಡಿ ಸಂದರ್ಭ ಯೋಜಿತವಾಗಿ ಈ ದಿನಗಳಲ್ಲಿ ಅತ್ಯಾವಶ್ಯಕವಾಗಿ ಬೇಕಾದ ಸ್ಯಾನಿಟೈಸರ್ ಗಳನ್ನು ಬಳಸಿ ತಮ್ಮ ಸಂಸ್ಥೆಯ ವತಿಯಿಂದಲೇ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ದೃಷ್ಟಿಯನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಂಡು ವೈದ್ಯಕೀಯ ಉಪಕರಣಗಳ ಸಹಾಯದಿಂದ ಸುಳ್ಯದ ಹಲವಾರು ವಾರ್ಡ್ಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ಊರಿನ ಮುಖಂಡರುಗಳ ಸಲಹೆ-ಸೂಚನೆಗಳನ್ನು ಸಂಗ್ರಹಿಸಿ ಆಯಾ ವಾರ್ಡ್ಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಶಿಕ್ಷಕರನ್ನು ನೇಮಿಸಿ ದಿನದಲ್ಲಿ 2,3 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಒಂದುಗೂಡಿಸುವ ಕೆಲಸಕ್ಕೆ ಮುಂದಾದವು. ಇದರ ಪ್ರಾರಂಭ ದಂತೆ ಆಗಸ್ಟ್ 17ರಂದು ಸುಳ್ಯದ ಶಿಕ್ಷಣಾಧಿಕಾರಿ ಅವರ ನೇತೃತ್ವದಲ್ಲಿ ಈ ಉತ್ತಮ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು. ಇದೀಗ ಸುಳ್ಯದ ಗಾಂಧಿನಗರ, ಶಾಂತಿನಗರ ,ಕೇರ್ಪಳ, ಜಯನಗರ, ಕಲ್ಲುಮುಟ್ಲು, ಮುಂತಾದ ಕಡೆಗಳಲ್ಲಿ ಸುಮಾರು 160ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಮಾರು 16 ಶಿಕ್ಷಕರ ತಂಡವನ್ನು ರಚಿಸಿ ವಿದ್ಯಾಗಮ ಎಂಬ ಯೋಜನೆಯ ಹೆಸರಿನಲ್ಲಿ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸಲು ಮುಂದಾದವು ‌. ಇದೀಗ ಈ ಕಾರ್ಯಕ್ರಮದ ಯಶಸ್ವಿಯಲ್ಲಿ ಗ್ರಾಮ ಪ್ರದೇಶಗಳಿಂದಲೂ ಕೂಡ ತಮ್ಮ ತಮ್ಮ ಭಾಗದ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಕಲ್ಪಿಸಿಕೊಡುವಂತೆ ಸ್ಥಳೀಯರಿಂದ ಬೇಡಿಕೆಗಳು ಬರಲು ಪ್ರಾರಂಭಿಸಿದವು. ಇದರ ಅಂಗವಾಗಿ ಇದೀಗ ಮುಳ್ಯ ,ಕಾಂತಮಂಗಲ, ಅಟ್ಲೂರು ಮುಂತಾದ ಕಡೆಗಳಲ್ಲಿ ಸ್ಥಳೀಯ ಭಜನಾ ಮಂದಿರಗಳು ದೇವಸ್ಥಾನಗಳು, ವಿದ್ಯಾರ್ಥಿಗಳ ಕಲಿಕೆಗೆ ಸ್ಥಳವಕಾಶವನ್ನು ನೀಡುತ್ತಿದ್ದು ಯೋಜನೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕಷ್ಟಗಳು ಬಂದಾಗ ಅದನ್ನು ಎದುರಿಸಲು ಸಾಧ್ಯವಾಗದೆ ಸೋಲನ್ನು ಅನುಭವಿಸುವುದಕ್ಕಿಂತ ಕಷ್ಟದ ವಿರುದ್ಧ ಹೋರಾಟ ಮಾಡಿ ಜೀವನ ರೂಪಿಸುವುದು ಹೇಗೆ ಎಂಬುದನ್ನು ಈ ಒಂದು ಸಂಸ್ಥೆಯು ಇಡೀ ಸಮಾಜಕ್ಕೆ ಮಾದರಿಯಾಗಿ ತೋರಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಸಮಾಜದ ಪ್ರತಿಯೊಂದು ಸಂಘ-ಸಂಸ್ಥೆಗಳು ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳು ತನ್ನಿಂದ ಸಮಾಜಕ್ಕಾಗಿ ಏನನ್ನು ನೀಡಲು ಸಾಧ್ಯ ಎಂಬುದರ ಬಗ್ಗೆ ಚಿಂತಿಸಿ ದಲ್ಲಿ ಇಡೀ ವಿಶ್ವವೇ ಇಂದು ಭಯಬೀತ ವಾಗಿ ನೋಡುತ್ತಿರುವ ಕೊರೋನಾ ಎಂಬ ಮಹಾಮಾರಿಯು ಮನುಷ್ಯರ ಛಲದ ಹಿಂದೆ ನನ್ನದೇನು ನಡೆಯುವುದಿಲ್ಲ ಎಂದು ಬಾಲ ಮುದುಡಿ ಓಡುವುದರಲ್ಲಿ ಯಾವುದೇ ಸಂದೇಹವಿಲ್ಲ ‌. ಎಂಬಿ ಫೌಂಡೇಶನ್ ಸಂಸ್ಥೆಯ ಈ ಉತ್ತಮ ಕಾರ್ಯಕ್ರಮಕ್ಕೆ ಸುಳ್ಯದ ಜನತೆಯು ಪ್ರಶಂಸೆಯ ಮಹಾಪೂರವನ್ನೇ ಸುರಿಸುತ್ತಿದ್ದಾರೆ.

. . . . . . .

ವರದಿ : ಹಸೈನಾರ್ ಜಯನಗರ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!