ಜಿಎಲ್ ಆಚಾರ್ಯದಲ್ಲಿ ಗಣೇಶ ಚತುರ್ಥಿ ವಿಶೇಷ ಕೊಡುಗೆ | ಗ್ರಾಹಕರಿಂದ ಉತ್ತಮ ಸ್ಪಂದನೆ

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪುತ್ತೂರು ಮತ್ತು ಸುಳ್ಯದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಕೊಡುಗೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

. . . . . . . . .

ಸೆ. 12ರಿಂದ 14ರವರೆಗೆ ನಡೆದ ವಿಶೇಷ ಕೊಡುಗೆಯಲ್ಲಿ ಚಿನ್ನಾಭರಣಗಳ ವಿ.ಎ. ಶುಲ್ಕದ ಮೇಲೆ ಶೇ.30ರಷ್ಟು ಫ್ಲಾಟ್ ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ ರೂ.8,000ರಷ್ಟು ರಿಯಾಯಿತಿ ನೀಡಲಾಯಿತು. ಹಬ್ಬದ ಪ್ರಯುಕ್ತ ವಿವಿಧ ವಿನ್ಯಾಸಗಳ ಚಿನ್ನ ಹಾಗೂ ವಜ್ರಾಭರಣಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿತ್ತು.

. . . . . . .

ವಿಶೇಷ ಕೊಡುಗೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ತಮ್ಮ ಇಷ್ಟದ ಆಭರಣಗಳನ್ನು ಖರೀದಿಸಿದರು. ಮಳಿಗೆಯಲ್ಲಿ ಗ್ರಾಹಕರ ಉತ್ಸಾಹದ ವಾತಾವರಣ ಕಂಡುಬಂದಿದ್ದು, ಉತ್ತಮ ವ್ಯಾಪಾರ ವಹಿವಾಟು ನಡೆಯಿತು.

1957ರಿಂದ ಆಭರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಪುತ್ತೂರು, ಸುಳ್ಯ, ಮೂಡುಬಿದಿರೆ, ಹಾಸನ ಹಾಗೂ ಕುಶಾಲನಗರದಲ್ಲಿ ಶಾಖೆಗಳನ್ನು ಹೊಂದಿದೆ. ಮಂಗಳೂರಿನಲ್ಲಿ ನೂತನ ಹಾಗೂ ಬೃಹತ್ ಶೋರೂಂ ಆರಂಭಿಸಲು ಸಂಸ್ಥೆ ಸಿದ್ಧತೆ ನಡೆಸುತ್ತಿದ್ದು, 2027ರ ಆರಂಭದಲ್ಲಿ ನೂತನ ಶಾಖೆ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading