ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಶಾಖೆಗೆ ನೂತನ ಸಮಿತಿ ರಚನೆ ; ಅಧ್ಯಕ್ಷರಾಗಿ ಅಬೂಬಕ್ಕರ್ ಸ್ವಾದಿಕ್ ಯಮಾನಿ ಕಲ್ಲೋಣಿ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ರಾಶಿದ್ ಮಾಸ್ತಿಕಟ್ಟೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಶಾಫಿ ಸ್ಕೈ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಸಬದ್ ಬಾಖವಿ ದರ್ಖಾಸ್

ಬೆಳ್ಳಾರೆ: ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಶಾಖೆಯ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13ರಂದು ರಾತ್ರಿ 8:30ಕ್ಕೆ ಸರಿಯಾಗಿ ನಡೆಯಿತು.

. . . . . . . . .

ಬಹು. ಹಸನ್ ಅರ್ಷದಿ ಉಸ್ತಾದರು ದುಆ ನೆರವೇರಿಸಿದರು. ರಿಟರ್ನಿಂಗ್ ಆಫೀಸರ್ ಆಗಿ ಆಗಮಿಸಿದ ಬಹು. ಮುಈನುದ್ದೀನ್ ಫೈಝಿ ಅವರು ಶಾಖೆಯ ದಾಖಲೆಗಳನ್ನು ಪರಿಶೋಧಿಸಿದರು. ಬಳಿಕ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸರ್ವರ ಒಮ್ಮತದೊಂದಿಗೆ 2026–28ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

. . . . . . .

ಅಧ್ಯಕ್ಷರಾಗಿ ಅಬೂಬಕ್ಕರ್ ಸ್ವಾದಿಕ್ ಯಮಾನಿ ಕಲ್ಲೋಣಿ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ರಾಶಿದ್ ಮಾಸ್ತಿಕಟ್ಟೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಶಾಫಿ ಸ್ಕೈ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಸಬದ್ ಬಾಖವಿ ದರ್ಖಾಸ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಅಯ್ಯೂಬ್ ಬೆಳ್ಳಾರೆ, ಅನ್ಸಾಫ್ ಬೆಳ್ಳಾರೆ ಹಾಗೂ ಬಾತಿಷಾ ಕಲ್ಲೋಣಿ; ಜೊತೆ ಕಾರ್ಯದರ್ಶಿಗಳಾಗಿ ಷರೀಫ್ ದಾರಿಮಿ ಕಾವಿನಮೂಲೆ, ನೌಷಾದ್ ಕೊಳಂಬಳ ಹಾಗೂ ಷರೀಫ್ ಕಲ್ಲೋಣಿ ಆಯ್ಕೆಯಾದರು.

ಸದಸ್ಯರಾಗಿ ಅಬ್ದುಲ್ ಅಝೀಝ್ ಪಿ.ಕೆ., ಬಷೀರ್ ತಡಗಜೆ, ರಫೀಕ್ ಸಾಹೇಬ್ ದರ್ಖಾಸ್, ಸ್ವಲಾಹುದ್ದೀನ್ ಹುದವಿ ಬೆಳ್ಳಾರೆ ಹಾಗೂ ಅಝರುದ್ದೀನ್ ಬೆಳ್ಳಾರೆ ಅವರನ್ನು ಆಯ್ಕೆ ಮಾಡಲಾಯಿತು.

ಬೆಳ್ಳಾರೆ ಕ್ಲಸ್ಟರ್ ಕೌನ್ಸಿಲರ್‌ಗಳಾಗಿ ಜಮಾಲ್ ಕೆ.ಎಸ್., ಬಷೀರ್ ಯು.ಪಿ., ಹಸನ್ ಅರ್ಷದಿ, ಸಬದ್ ಬಾಖವಿ, ಆಶಿಖ್ ಮಂಗಳ, ನಝೀರ್ ಬಿಝ್, ಹನೀಫ್ ಅನ್ಸಾರಿ, ಅಝರುದ್ದೀನ್, ಷರೀಫ್ ಕಲ್ಲೋಣಿ ಹಾಗೂ ಉಮರ್ ಪೆರುವಾಜೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕೊನೆಯಲ್ಲಿ ಸ್ವಲಾತಿನೊಂದಿಗೆ ವಾರ್ಷಿಕ ಮಹಾಸಭೆಯು ಮುಕ್ತಾಯಗೊಂಡಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading