ಎಲಿಮಲೆಯಲ್ಲಿ ‘ಅಕ್ಷಯ ಮೊಬೈಲ್ಸ್’ ನ ನೂತನ ಶಾಖೆ ಶುಭಾರಂಭ

ಎಲಿಮಲೆಯ ಪ್ರಸನ್ನ ಕಾಂಪ್ಲೆಕ್ಸ್‌ನಲ್ಲಿ ಅಕ್ಷಯ ಮೊಬೈಲ್ಸ್ ಸಂಸ್ಥೆಯ ನೂತನ ಶಾಖೆ ಸೆ.14ರಂದು ಶುಭಾರಂಭಗೊಂಡಿತು.ಸಂಸ್ಥೆಯನ್ನು ಶಿಕ್ಷಕರಾದ ಕುಶಾಲಪ್ಪ ತುಂಬತ್ತಾಜೆ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ವಿಷ್ಟು ಭಟ್ ಮೂಲೆತೋಟ, ಶಿಕ್ಷಕರಾದ ಮುರಳೀಧರ ಪುನುಕುಟ್ಟಿ, ಕಾಣಿಯೂರು ಅಕ್ಷಯ ಮೊಬೈಲ್ಸ್‌ನ ಭುವನೇಶ್ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಮದನ್ ಕೊಲ್ಯ ಹಾಗೂ ವಿನೋದ್ ಹಾಡಿಕಲ್ಲು ಸ್ವಾಗತಿಸಿ, ವಂದಿಸಿದರು.

. . . . . . . . .

ಇಲ್ಲಿ ವಿವಿಧ ಕಂಪೆನಿಯ ಮೊಬೈಲ್‌ಗಳ ಮಾರಾಟ, ಸರ್ವಿಸ್, ವಿವಿಧ ಆಕ್ಸೆಸರೀಸ್‌ಗಳು, ಸೌಂಡ್ ಸಿಸ್ಟಂಗಳು, ಎಲ್ ಇ ಡಿ ಲೈಟ್ ಗಳು ಲಭ್ಯವಿರಲಿವೆ. ಹೊಸ ಮೊಬೈಲ್ ಖರೀದಿಗೆ 0% ಬಡ್ಡಿದರದಲ್ಲಿ ಲೋನ್ ವ್ಯವಸ್ಥೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.ಅಕ್ಷಯ ಮೊಬೈಲ್ಸ್‌ನ ಸಹ ಸಂಸ್ಥೆಗಳು ಗುತ್ತಿಗಾರು,ಸುಬ್ರಹ್ಮಣ್ಯ, ಕಾಣಿಯೂರು ಹಾಗೂ ಪುಣ್ಚತ್ತಾರ್ ನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading