ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಆಚರಣೆ ಮತ್ತು ಮೆರವಣಿಗೆಯ ಕುರಿತು ಬಿಜೆಪಿ ನಾಯಕರ ಹೇಳಿಕೆ ಸುಳ್ಳು ಹಾಗೂ ದುರುದ್ದೇಶಪೂರಿತ –  ಎಸ್.ಡಿ.ಪಿ.ಐ. ಅಧ್ಯಕ್ಷ ಮೀರಝ್ ಸುಳ್ಯ

ಸುಳ್ಯದಲ್ಲಿ ನಿನ್ನೆ ನಡೆದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾದ ಕಾಲ್ನಡಿಗೆ ಜಾಥಾ ಹಾಗೂ ದಫ್ ಪ್ರದರ್ಶನದ ಯಶಸ್ವಿ ಹಾಗೂ ಶಾಂತಿಯುತ ಮೆರವಣಿಗೆಯನ್ನು ಸಹಿಸದೆ, ಬಿಜೆಪಿ ಮಂಡಲ ಪ್ರಮುಖ ವಿನಯಕುಮಾರ್ ಕಂದಡ್ಕ ಅವರು ನೀಡಿರುವ ಹೇಳಿಕೆಯು ಸಂಪೂರ್ಣ ರಾಜಕೀಯ ಪ್ರೇರಿತ ಹಾಗೂ ದುರುದ್ದೇಶಪೂರಿತ ಎಂದು ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೀರಝ್ ಸುಳ್ಯ ರವರು ಹೇಳಿದ್ದಾರೆ.

. . . . . . . . .

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು
ಯಾವುದೇ ಧಾರ್ಮಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಮೆರವಣಿಗೆಗಳು ಸೌಹಾರ್ದಯುತವಾಗಿ ಹಾಗೂ ಸಂಪ್ರದಾಯದಂತೆ ನಡೆಯುವುದು ಈ ನಾಡಿನ ಸಂಸ್ಕೃತಿ. ಸುಳ್ಯದಲ್ಲಿ ನಡೆದ ಈ ಕಾರ್ಯಕ್ರಮವು ಸಂಪೂರ್ಣ ಕಾನೂನುಬದ್ಧವಾಗಿ, ಸಾರ್ವಜನಿಕರ ಸಹಕಾರದೊಂದಿಗೆ ಮತ್ತು ಪೊಲೀಸ್ ಇಲಾಖೆಯ ಪೂರ್ವಾನುಮತಿ ಪಡೆದು ಅತ್ಯಂತ ಶಾಂತಿಯುತವಾಗಿ ಜರುಗಿದೆ. ಆದರೆ ಇದನ್ನು ಸಹಿಸದ ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತಿ ಹಾಗೂ ಕೋಮು ಸೌಹಾರ್ದ ಕದಡಲು ಯತ್ನಿಸುತ್ತಿದ್ದಾರೆ.
ಸುಳ್ಯದಲ್ಲಿ ಹಿಂದೂ ಹಬ್ಬಗಳಾದ ಮೊಸರು ಕುಡಿಕೆ, ಗಣೇಶ ಚತುರ್ಥಿ ಸೇರಿದಂತೆ ಸುಳ್ಯ ದಸರಾ ಮತ್ತು ಜಾತ್ರೆಯ ಸಂದರ್ಭದಲ್ಲಿ ವಾರಗಟ್ಟಲೆ ಪ್ರಮುಖ ಸಾರ್ವಜನಿಕ ರಸ್ತೆಗಳು ಬಂದ್ ಆಗಿರುತ್ತವೆ, ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತದೆ. ಆಗ ಯಾವುದೇ ಮುಸ್ಲಿಮರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಯಾಕೆಂದರೆ ಮುಸ್ಲಿಮರು ಸದಾಕಾಲ ಇತರ ಧರ್ಮಗಳ ಆಚರಣೆಗಳನ್ನು ಗೌರವಿಸುತ್ತಾರೆ ಮತ್ತು ಈ ನಾಡಿನ ಸೌಹಾರ್ದತೆಯನ್ನು ಎತ್ತಿಹಿಡಿಯುತ್ತಾರೆ. ಆದರೆ ದುರಂತವೆಂದರೆ, ಮುಸ್ಲಿಮರ ಧಾರ್ಮಿಕ ಆಚರಣೆಗಳು ಬಂದಾಗ ಮಾತ್ರ ಬಿಜೆಪಿಯವರಿಗೆ ರಸ್ತೆ ತಡೆಯುವಿಕೆ ಮತ್ತು ಸಾರ್ವಜನಿಕ ತೊಂದರೆಯ ಬಗ್ಗೆ ಪ್ರೀತಿ ಉಕ್ಕಿ ಬರುತ್ತದೆ.

. . . . . . .

ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಪರಸ್ಪರ ಸೌಹಾರ್ದತೆಯನ್ನು ಕದಡುವ ಇಂತಹ ವಿಭಜಕ ರಾಜಕಾರಣವನ್ನು ಎಸ್.ಡಿ.ಪಿ.ಐ. ತೀವ್ರವಾಗಿ ಖಂಡಿಸುತ್ತದೆ. ಇನ್ನು ಮುಂದೆಯೂ ಇಂತಹ ಸುಳ್ಳು ಅಪಪ್ರಚಾರಗಳನ್ನು ಮುಂದುವರಿಸಿದರೆ, ಪ್ರಜಾಸತ್ತಾತ್ಮಕ ರೀತಿಯಲ್ಲಿ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading