ಸೆ.14 – 15 : ಉಬರಡ್ಕ ಮಿತ್ತೂರಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.14 ಮತ್ತು 15ರಂದು ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಲಿದೆ.

. . . . . . . . .

ಸೆ.14ರಂದು ಬೆಳಗ್ಗೆ 8.30ಕ್ಕೆ ಸ್ಥಳಶುದ್ಧಿ ಹಾಗೂ ಗಣಪತಿ ಪ್ರತಿಷ್ಠೆ, 10.30ರಿಂದ ಸ್ಥಳೀಯ ಭಕ್ತರಿಂದ ಭಜನೆ, 11ರಿಂದ ಶ್ರೀ ನರಸಿಂಹ ಶಾಸ್ತಾವು ಮಹಿಳಾ ಭಜನಾ ಮಂಡಳಿಯಿಂದ ಭಜನೆ ಹಾಗೂ ಕುಣಿತ ಭಜನೆ ನಡೆಯಲಿದೆ. ಮಧ್ಯಾಹ್ನ 12.15ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಇದೇ ದಿನ ಸಾರ್ವಜನಿಕ ಗಣಪತಿ ಹೋಮ ಜರುಗಲಿದೆ.ಮಧ್ಯಾಹ್ನ 2.30ರಿಂದ ಭಜನೆ, ಸಂಜೆ 6ರಿಂದ 7ರವರೆಗೆ ಭಜನೆ, ರಾತ್ರಿ 7ರಿಂದ 8ರವರೆಗೆ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳು ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ ಸಭಾ ಕಾರ್ಯಕ್ರಮ ಹಾಗೂ 9ರಿಂದ ವಿದುಷಿ ಜಯಶ್ರೀ ಮದುವೆಗದ್ದೆ ಮತ್ತು ಬಳಗದವರಿಂದ ನೃತ್ಯ ವೈಭವ ನಡೆಯಲಿದೆ.ಸೆ.15ರಂದು ಬೆಳಗ್ಗೆ 8.30ಕ್ಕೆ ಗಣಪತಿ ಹವನ, 10ರಿಂದ ಭಜನೆ ಹಾಗೂ ಮಧ್ಯಾಹ್ನ 12.15ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ರಿಂದ ಶ್ರೀ ನರಸಿಂಹ ಶಾಸ್ತಾವು ಮಹಿಳಾ ಮತ್ತು ಮಕ್ಕಳ ಭಜನಾ ಮಂಡಳಿಯಿಂದ ಕುಣಿತ ಭಜನೆ, ಬ್ಯಾಂಡ್, ವಾಲಗ ಹಾಗೂ ಸಿಡಿಮದ್ದುಗಳೊಂದಿಗೆ ಗಣೇಶನ ಶೋಭಾಯಾತ್ರೆ ನಡೆಯಲಿದೆ.

. . . . . . .

ಶೋಭಾಯಾತ್ರೆಯು ಶ್ರೀ ನರಸಿಂಹ ದೇವಾಲಯದಿಂದ ಕಕ್ಕೆಬೆಟ್ಟು, ಅಲ್ಲಿಂದ ಶ್ರೀ ಮಿತ್ತೂರು ನಾಯರ್ ಉಳ್ಳಾಕುಳು ಜಾತ್ರೆ ನಡೆಯುವ ಸ್ಥಳದವರೆಗೆ ತೆರಳಿ, ಬಳಿಕ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹಿಂಭಾಗದ ಹೊಳೆಯಲ್ಲಿ ಗಣೇಶ ಮೂರ್ತಿಯ ಜಲಸ್ಥಂಭನ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading