ಪಂಜ: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಪೋಟ – ಪಕ್ಷದ ಹುದ್ದೆಗೆ ಮೂವರು ರಾಜೀನಾಮೆ

ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಲ್ಲಿ ವಿಚಾರವಾಗಿ ಕಾಂಗ್ರೆಸ್ ಗ್ರಾಮ ಸಮಿತಿಯ ಬೇಡಿಕೆಗೆ ಮುಖಂಡರು ಸ್ಪಂದಿಸದ ಹಿನ್ನೆಲೆಯಲ್ಲಿ ಅಸಮಾಧಾನ ಸ್ಪೋಟಗೊಂಡು ಹಿರಿಯ ಕಾರ್ಯಕರ್ತರು ಸೇರಿದಂತೆ ಮೂವರು ರಾಜೀನಾಮೆ ನೀಡಿದ ಘಟನೆ ಸೆ. 8ರಂದು ನಡೆದಿದೆ.

. . . . . . . . .

ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಿನೇಶ್ ಪುಂಡಿಮನೆ, ಪಂಜ ವಲಯ ಕಾಂಗ್ರೆಸ್ ಅಧ್ಯಕ್ಷ ಕುಸುಮಾಧರ, ವಲಯ ಕಾರ್ಯದರ್ಶಿ ಲೋಕನಾಥ್ ಕುದ್ವ ಅವರು ಬ್ಲಾಕ್ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

. . . . . . .

ಈ ಬಗ್ಗೆ ದಿನೇಶ್ ಪುಂಡಿಮನೆ ಅವರನ್ಮು ಸಂಪರ್ಕಿಸಿದಾಗ ರಾಜೀನಾಮೆ ನೀಡಿರುವುದನ್ನು ತಿಳಿಸಿದ್ದಾರೆ. ಪಂಜ ದೇವಸ್ಥಾನದಲ್ಲಿ ನಡೆದಿರುವ ಅವ್ಯವಸ್ಥೆಗಳ ಬಗ್ಗೆ ಭಕ್ತರಿಂದ ಆರೋಪ ಕೇಳಿ ಬಂದಾಗ ನಾವೆಲ್ಲರೂ ಕಾಂಗ್ರೆಸ್ ಮುಖಂಡರಿಗೆ ಈ ಬಗ್ಗೆ ಮನವರಿಕೆ ಮಾಡಿ ಸಮಸ್ಯೆ ದೊಡ್ಡದಾಗುವ ಮೊದಲು ಇತ್ಯರ್ಥ ಪಡಿಸುವಂತೆ ಒತ್ತಾಯಿಸಿದ್ದೆವು. ಇದಕ್ಕೆ ಮುಖಂಡರು ಸ್ಪಂದಿಸದಿದ್ದಾಗ ರಾಜೀನಾಮೆ ಸಲ್ಲಿಸುವ ಪ್ರಸ್ತಾಪ ಮಾಡಿದ್ದೇವು. ಆಗ ಮುಖಂಡರು ವಾರದೊಳಗೆ ಸರಿ ಮಾಡುತ್ತೇವೆ ಎಂದು ಮುಖಂಡರು ಭರವಸೆ ನೀಡಿದ್ದರು. ಆದರೇ ಮೂವತ್ತು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದ ನಮ್ಮನ್ನು ಕಡೆಗಣಿಸಿದ್ದರಿಂದ ಪಕ್ಷದ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದ್ದೇವೆ ಎಂದಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading