ಐನೆಕಿದು : “ಶ್ರೀಕೃಷ್ಣ ಜನ್ಮಾಷ್ಟಮಿ” ಪ್ರಯುಕ್ತ ನಿಸರ್ಗ ಯುವಕ ಮಂಡಲದ ವತಿಯಿಂದ “11ನೇ ವರ್ಷದ ಮೊಸರು ಕುಡಿಕೆ”

“ಶ್ರೀ ಕೃಷ್ಣ ಜನ್ಮಾಷ್ಟಮಿ”ಯ ಅಂಗವಾಗಿ ನಿಸರ್ಗ ಯುವಕ ಮಂಡಲ(ರಿ.) ಐನೆಕಿದು ಇದರ ವತಿಯಿಂದ ಸೆ.06ರಂದು ಐನೆಕಿದು ಅಮೃತ ಸಭಾಭವನದಲ್ಲಿ “ಮೊಸರು ಕುಡಿಕೆ” ಕಾರ್ಯಕ್ರಮ ನಡೆಯಿತು. ಪ್ರಗತಿಪರ ಕೃಷಿಕರಾದ ಮೋನಪ್ಪ ಗೌಡ ಕಲ್ಕಜೆ ಹಾಗೂ ಮೋನಪ್ಪ ಗೌಡ ಕುಜುಂಬಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಲಕ್ಷ್ಮೀಶ್ ಇಜ್ಜಿನಡ್ಕ ಹಾಗೂ ಗೌರವಾಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ನವಗ್ರಾಮದ ಮಕ್ಕಳ ಭಜನಾ ಕಾರ್ಯಕ್ರಮ ನಡೆದು ನಂತರ ಮಕ್ಕಳಿಗೆ ಹಾಗೂ ಊರವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಮದ್ಯಾಹ್ನ ನಡೆದ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಲಕ್ಷ್ಮೀಶ್ ಇಜ್ಜಿನಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಆರಕ್ಷಕ ಠಾಣೆಯ ಠಾಣಾಧಿಕಾರಿಗಳಾದ ಆಂಜನೇಯ ರೆಡ್ಡಿ ಅವರು ಭಾಗವಹಿಸಿ ಮಾತನಾಡಿದರು.
ನಂತರ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್ ಕಟ್ಟೆಮನೆ, ಐನೆಕಿದು ಅಂಗನವಾಡಿ ಕೇಂದ್ರದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನೇತ್ರಾವತಿ ಅಂಙಣ, ಹಾಗೂ ಐನೆಕಿದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮದ್ಯಾಹ್ನ ನಂತರ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ರವರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ವೇದಿಕೆಯಲ್ಲಿ ನಿಸರ್ಗ ಯುವಕ ಮಂಡಲದ ಗೌರವ ಸಲಹೆಗಾರರಾದ ನವೀನ್ ಕೆದಿಲ, ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಪದ್ಮಕುಮಾರ್ ಗುಂಡಡ್ಕ ಹಾಗೂ ಯುವಕ ಮಂಡಲದ ಕಾರ್ಯದರ್ಶಿ ವಿನಯ್ ಅಂಙಣ ಉಪಸ್ಥಿತರಿದ್ದರು.
ಗಿರೀಶ್ ಪೈಲಾಜೆ ಹಾಗೂ ಭುಕ್ಷಿತ್ ನೀರ್ಪಾಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading