ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಉತ್ಸವಾಚರಣೆಯ ಕುರಿತು ಸಭೆ ; “ಉತ್ಸವಾಚರಣೆಯಲ್ಲಿ ಡಿ.ಜೆಗೆ ಅವಕಾಶ ಇಲ್ಲ, ಧಾರ್ಮಿಕತೆಗೆ ಒತ್ತು ನೀಡಿ” : ಠಾಣಾಧಿಕಾರಿ ಆಂಜನೇಯ ರೆಡ್ಡಿ

ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವ ಆಚರಣೆಯ ಕುರಿತು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಸೆ.03ರಂದು ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಠಾಣಾಧಿಕಾರಿಗಳಾದ ಆಂಜನೇಯ ರೆಡ್ಡಿ ರವರು “ಉತ್ಸವಾಚರಣೆಯಲ್ಲಿ ಡಿ.ಜೆಗೆ ಅವಕಾಶವಿಲ್ಲ, ಧಾರ್ಮಿಕತೆಗೆ ಒತ್ತು ನೀಡಿ ಆಚರಣೆ ಮಾಡಿ, ಪೋಲೀಸ್ ಇಲಾಖೆಯ ಸಹಕಾರ ಸದಾ ಇದೆ. ಹಬ್ಬಗಳನ್ನು ಭಕ್ತಿಯಿಂದ ಆಚರಿಸಿ, ಸಮಯಪಾಲನೆಗೆ ಹೆಚ್ಚಿನ ಆಧ್ಯತೆ ನೀಡಿ, ರಾತ್ರಿ 10:00 ಗಂಟೆಯ ಒಳಗೆ ಕಾರ್ಯಕ್ರಮ ಮುಗಿಸಿ ಇಲಾಖೆಯೊಂದಿಗೆ ಸಹಕರಿಸಿ. ಇಲಾಖೆ ತಮ್ಮ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಕಾನೂನು ಪರಿಪಾಲನೆ ಸರ್ವರ ಆದ್ಯತೆ ಆಗಿರಲಿ. ಯಾವುದೇ ಕಾರಣಕ್ಕೂ ಕಾನೂನು ತೊಡಕು ಉಂಟಾಗದಂತೆ ಕ್ರಮ ವಹಿಸಿ ಇತರರಿಗೆ ತೊಂದರೆ ಆಗದಂತೆ ಹಬ್ಬ ಆಚರಿಸಿ” ಎಂದು ಹೇಳಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯ ಸ್ಥಾಪಕಾಧ್ಯಕ್ಷರಾದ ಉಮೇಶ್.ಕೆ.ಎನ್, ಅಧ್ಯಕ್ಷರಾದ ರತ್ನಾಕರ ಸುಬ್ರಹ್ಮಣ್ಯ, ಉಪಾಧ್ಯಕ್ಷರಾದ ಮಹೇಶ್ ಗುಡ್ಡೆಮನೆ, ಪೂರ್ವಾಧ್ಯಕ್ಷರಾದ ದೀಪಕ್ ನಂಬಿಯಾರ್, ಕಾರ್ಯದರ್ಶಿ ಜಯರಾಮ್.ಎಚ್.ಎಲ್, ಕೋಶಾಧಿಕಾರಿ ಗಗನ್ ಅಗರಿಕಜೆ ಹಾಗೂ ಬಳ್ಪ, ದೇವಚಳ್ಳ, ಗುತ್ತಿಗಾರು ಸೇರಿದಂತೆ ಹಲವು ಕಡೆಗಳ ಉತ್ಸವ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading